ಮನೆಯೊಳಗಾಡೋ.... ಗೋವಿಂದ

ಮನೆಯೊಳಗಾಡೋ.... ಗೋವಿಂದ

ಬರಹ

ನಾಳೆ ಮೂರುವರೆಗೆ ನಮ್ಮನೆ ಹತ್ರ ಬಾ.. ಅಲ್ಲೇ ಹೇಳ್ತೇನೆ ಏನೂ ಅಂತ.
ಆಯ್ತು ಸಾರ್...
ಮತ್ತೆ ತಪ್ಪಿಸಬೇಡ.....
ಸರಿ ಸಾರ್.......
ಬರಲೇ ಮತ್ತೆ?
ಹಾ ಸಾರ್...
********************
ಬಾ ಬಾ ಗೋವಿಂದಾ..... ಬಾರೋ ಎಲ್ಲಿ ಮರೆತು ಬಿಡ್ತಿಯೇನೊ ಅಂತ ಹೆದರಿದ್ದೆ.ನೋಡು ಇವತ್ತು ರಾತ್ರೆ ಮತ್ಸ್ಯಗಂಧಿ ಎಕ್ಸಪ್ರೆಸ್ಸಿಗೆ ಎರ್ನಾಕುಲಂಗೆ ಹೊರಟಿದೇನೆ. ಸಂಸಾರ ಸಮೇತ ಹೋಗ್ತಾ ಇದೇನೆ, ಬರೋದು ನಾಲ್ಕು ದಿನಾ ಆಗತ್ತೆ. ನೀನು ನಮ್ಮನೇಲಿ ಇರು. ಗೊತ್ತಲ್ಲಾ ಸಂಜೆ ಲೈಟ ಹಾಕಿ ಹೋಗು (ವರಾಂಡದ ಲೈಟ ಮಾತ್ರ ಹಾಕು.. ಸಾಕು. ಶ್ರೀಮತಿಯವರ ವಿನಂತಿ ಅಲ್ಲಾ ಅಪ್ಪಣೆ. ) ಆಮೇಲೆ ಊಟಾ ಮಾಡಿಕೊಂಡು ಬಂದು ಮಲಗು. ಬೆಳಿಗ್ಗೆ ಪೇಪರ್ ಒಳಗಿಡೋದನ್ನಾ ಮರೀಬೇಡ...(ರ್ರೀ.. ನಾಲ್ಕು ದಿವಸಾ ಪೇಪರ್ ಹಾಕ್ ಬೇಡಾ ಅಂತಾ ಹುಡಗನಿಗೆ ಆಗ್ಲೆ ಹೇಳಿದೇನೆ- ಶ್ರಿಮತಿಯವರಿಂದ ಪತಿದೇವರಿಗೆ ಮಾಹಿತಿ. ಶ್ರಿಪತಿಯವರು ಕಣ್ಣಲ್ಲೇ ಶಹಭಾಸ್ ಎಂದರು. ನ್)
ಆಯ್ತು ಸಾರ್ ತಾವಿನ್ನು ಹೊರಡಿ... ಬೀಗದ ಕೈ ಕೊಡ್ತೀರಾ?
ಅಯ್ಯೋ ನಾವ್ ಹೊರಟಿರೋದು ರಾತ್ರಿ ಎಂಟು ಗಂಟೆಗೆ ಕಣಯ್ಯಾ
ಸರಿ ಸಾರ್. (ಮತ್ತೆ ಈಗ ಮೂರುವರೆಗೆ ಯಾಕೆ ಬಾ ಅಂದೆಯೊ ತಂದೆ!)
ನೀನು ಎಳೂ ಮೂವತ್ತಕ್ಕೆ ಬಾರಯ್ಯ....ಹಾಗೆ ಬರಬೇಕಾದ್ರೆ ಒಂದು ಅಟೋ ತೊಗೋ ಬಾ. . ಸ್ಟೇಶನ್ನಿಗೆ ಅಂತ ಹೇಳು .
ನಾನು ಈಗ ಹೊರಡಲಾ ಸಾರ್?
ಓ.ಕೆ. ಎಳೂವರೆಗೆ ಮರೀಬೇಡ.
ಏನೂಂದ್ರೆ..(ಬಂದಿರುತ್ತೆ ಹೊಸಾ ತೊಂದ್ರೆ)
ಏನು?
ನಿಮ್ಮ ಸ್ಟುಡೆಂಟಿಗೆ ಈಗ್ಲೆ ಹೇಳಿ... ಮಧ್ಯಾನಾನು ಒಂದು ಸಾಲ ಮನೆ ಹತ್ರಕ್ಕೆ ಬಂದು ಹೋಗ್ಲಿ. ಕಳ್ಳರ ಕಾಟ ಜಾಸ್ತಿಯಾಗಿದೆ ಅಂತ ಹಿಂದಿನ ಬೀದಿ ಕಲ್ಯಾಣಕ್ಕ ಹೇಳ್ತಾ ಇದ್ರು ರ್ರೀ..
ಗೋವಿಂದಾ...
ಹೇಳಿ ಸಾರ್. ಮತ್ತೆ ಹೇಳಿದ್ದು ಕೇಳಿರಬೇಕು. ಒಂದು ಸಾಲಾ ಮಧ್ಯಾನಾನು ಬಂದು ಹೋಗಪ್ಪಾ ಯಾಕೆ ರಿಸ್ಕು ಅಲ್ಲ್ವೆ?
(ಯಾಕೊ ಶ್ರೀಮತಿಯವರೆ ನೇರವಾಗಿ ಹೇಳಬೌದಿತ್ತಲ್ವಾ? ಬಿಡಿ ಅವರಿಗೆ ಗೊತ್ತು ಶಂಖದಿಂದ ಬಂದ್ರೆ ಮಾತ್ರ ತೀರ್ಥ!)

(ಮುಂದುವರೆಯುವದು)