ನೋವು ನಲಿವು ...ಹೀಗೆ ಬಾಳು

ನೋವು ನಲಿವು ...ಹೀಗೆ ಬಾಳು

ಬರಹ

ಗಂಡು ಹೆಣ್ಣಿನ ಒಲವು ಹೇಗಿರಬೇಕು ಎಂದು ಉಂಕಿಸುತ್ತಿದ್ದೆ. ಆಗ 'ಕ್ರಿಶ್ಣ' ಸಿನಿಮಾದ ಹಾಡು ನೆನಪಾಯಿತು. "ನೀನು ಬಂದ ಮೇಲೆ ..."
ಹಾಡಿನಲ್ಲಿ ಒಂದು ಸಾಲು ಹೀಗೆ ಬರುತ್ತದೆ. "ಒಂದಿಶ್ಟು ಹುಸಿಮುನಿಸು, ಒಂದಿಶ್ಟು ಸವಿಗನಸು" . ಇದರೊಳಗೆ ತುಂಬ ಆಳವಾದ ಅರಿತ ಇದೆ.
ಗಂಡ-ಹೆಂಡತಿಯರು ಹೇಗಿರಬೇಕು ಎನ್ನುವುದಕ್ಕೆ ಗೈಡ್ ಲೈನ್ ಇದ್ದ ಹಾಗಿದೆ ಈ ಮೇಲಿನ ಸಾಲು. ಯಾರೋ ಸಂಪದದಲ್ಲಿ ಈಗಿನ ಕನ್ನಡ ಸಿನಿಮಾಗಳಲ್ಲಿ
ತಿಳಿಕೊಳ್ಳುವುದಕ್ಕೆ ಏನೂ ಇರಲ್ಲ ಅಂತೆಲ್ಲ ಬರೆದಿದ್ದರು. ತಿಳಕೊಳ್ಳೋ ಮನಸು ನಮಗಿದಿಯ ಅಂತ ನಾವು ನಮ್ಮನ್ನ ಕೇಳ್ಕೊಳ್ಳಬೇಕಾಗುತ್ತೆ. ಇರಲಿ.

ಬರೀ ನಲಿವೇ ಇದ್ದರೆ ಕೂಡ ಎಡರೇ. ಬಾಳಿನಲ್ಲಿ ಎರಡೂ ಹದವಾಗಿ ಕಲಸಿದ್ದರೇನೆ ಚಂದ ಯಾಕೆ ಅಂದ್ರೆ ಅಮ್ರುತ ಕೂಡ ಹೆಚ್ಚಾದರೆ ವಿಶವಾಗುತ್ತಂತೆ.ಒಟ್ಟಿನಲ್ಲಿ ನೋವಾಗಲಿ
ನಲಿವಾಗಲಿ ಬರೀ ಬಾಳಲ್ಲಿ ಒಂದೇ ಇದ್ರೆ ಈ ಮನ್ಸರಿಗೆ ಆಗಲ್ಲ. ಒಂತರ ಹಲ್ಲಿದ್ದಾಗ ಕಡಲೆಯಿಲ್ಲ. ಕಡಲೆ ಸಿಕ್ಕಾಗ ಹಲ್ಲಿಲ್ಲ ಅನ್ನೋ ಬಗೆಯಲ್ಲಿ ನಮ್ಮ ಬಾಳು ಸಾಗುತ್ತದೆ.
ನಲಿವು-ನೋವು(ಅತವ ಹುಸಿಯಾಗಿ ನೋವು ಅನುಬವಿಸುವುದು:) ) ಎರಡು ಇದ್ರೇನೆ ಚಂದ.ಮುನಿಸಿಕೊಳ್ಳುವುದು(ಹುಸಿ)ಕೂಡ ಒಲವ ತೋರಿಸುತ್ತಿದ್ದೇವೆ ಅನ್ನುವುದಕ್ಕೆ ಕುರುಹು/ಗುರುತು.:)

ನಮ್ಮ ಕನ್ನಡದ ಮಾದರಿ ಜೋಡಿ ಮುದ್ದಣ-ಮನೋರಮೆಯರು ಹೀಗೆ ಒಂದಿಶ್ಟು ಹುಸಿ ಮುನಿಸು(ಮಾಡ್ಕೊತಿದ್ರಂತೆ/), ಒಂದಿಶ್ಟು ಸವಿಗನಸು ಕಾಣ್ತಿದ್ರಂತೆ ಓದಿದ/ಕೇಳಿದ ನೆನಪು.:)
ಅದಕ್ಕೆ ನಮ್ಮ ಬೇಂದ್ರೆ ಅಣ್ಣಾವ್ರು ಹೇಳಿರದು 'ಸರಸ ಜನನ, ವಿರಸ ಮರಣ, ಸಮರಸವೇ ಜೀವನ' ಅಂತ.