ಯಾಕೆ ಹಿಂಗ್ಮಾಡ್ದಿ ಬ್ರಹ್ಮ..?

ಯಾಕೆ ಹಿಂಗ್ಮಾಡ್ದಿ ಬ್ರಹ್ಮ..?

ಕ್ರಿಮಿ,ಕೀಟ,ಪಕ್ಷಿ,ಪ್ರಾಣಿಗಳನ್ನು ಸೃಷ್ಠಿ ಮಾಡುವಾಗ ಬ್ರಹ್ಮನು ಹೆಚ್ಚಿನ ಸೌಂದರ್ಯವನ್ನು ಗಂಡಿಗೇ ಕೊಟ್ಟನು. ಅದೇ ದೇವತೆಗಳ ಮತ್ತು ಮಾನವರ ಸೃಷ್ಠಿಯಲ್ಲಿ ತಪ್ಪಿದ. ಸ್ವತಃ ತನಗೆ ನಾಲ್ಕು ತಲೆ, ವಿಷ್ಣುವನ್ನು ನೀಲ,ಶಿವನಿಗೆ ಹಣೆಯಲ್ಲಿ ಕಣ್ಣು, ‘ಅಗಲ ಕಿವಿ,ಸಣ್ಣಕಣ್ಣು’ಗಣೇಶ,ಆರು ಮುಖದ ಸುಬ್ರಹ್ಮಣ್ಯ... .,-ಸ್ತ್ರೀದೇವತೆಗಳೆಲ್ಲಾ ಅಪ್ರತಿಮ ಸುಂದರಿಯರು.(ಕಾಳಿ ಇತ್ಯಾದಿ ಅವತಾರಗಳನ್ನು ಬಿಡಿ.)
ಯಾಕೆ ಹೀಗ್ಮಾಡಿದ?
ವಸಂತ ಕಜೆಯವರು ಮದುವೆಗಳಲ್ಲಿ frame ಹಾಕಿದ ಸುಂದರ ಚಿತ್ರಗಳನ್ನು ಕೊಡುತ್ತಾರೆ ಎಂದಿದ್ದರಲ್ಲಾ. ಬ್ರಹ್ಮನೂ ಮಾನವರಲ್ಲಿ ಹೆಣ್ಣನ್ನು ಸುಂದರ ಚಿತ್ರದಂತೆ ಸೃಷ್ಠಿಸಿ, ಗಂಡನ್ನು frame ನಂತೆ ಮಾಡಿದ. ಬರೀ ಚೌಕಟ್ಟು, ಅದಕ್ಕೊಂದು ಮೇಲೆ ಮೀಸೆ ಇತ್ಯಾದಿ.
ಯಾಕೆ ಹೀಗ್ಮಾಡಿದ?
ಅರಿತೋ,ಅರಿಯದೆಯೋ ಬ್ರಹ್ಮ ಒಂದೇ ಒಂದು ತಪ್ಪು ಮಾಡಿದ!
ಹೆಣ್ಣಲ್ಲಿ ಹೃದಯ/ಮನಸ್ಸನ್ನು ಮೃದು ಮಾಡಿದ. ಹೆಚ್ಚು ಕಮ್ಮಿ weak ಎಂದೇ ಹೇಳಬಹುದು.
-------ಚಲುವ ಚನ್ನಿಗರಾಯ ಶಾಹಿದ್ ಕಪೂರ್‌ನ್ನು ಬಿಟ್ಟು, ಎರಡು ಹೆಣ್ಣಿಗೆ ಕೈಕೊಟ್ಟ ಸೈಫ ಆಲಿ ಖಾನ್‌ಗೆ ಕರೀನಾ ಹೃದಯ ಕೊಟ್ಟಳೇಕೆ?
ಸಾಲುಸಾಲು ಮಕ್ಕಳಿದ್ದ ಧರ್ಮೇಂದ್ರನಿಗೆ ಹೇಮ ಮನಸ್ಸು ಕೊಟ್ಟಳೇಕೆ?
ಸುರಸುಂದರಿ ಶ್ರೀದೇವಿ ಹಳೇ ಬೋನಿಗೆ ಬಿದ್ದಳೇಕೆ?
ಸೂಪರ್ ಸ್ಟಾರ್ ಚಿರಂಜೀವಿ ಮಗಳು ಡಬಲ್ ಕನ್ನಡಕದ ಒರಟನೊಂದಿಗೆ ಓಡಿಹೋಗಲು ಕಾರಣ?
ಸರಿಯಾಗಿ ತಲೆ ಬಾಚಲು ಗೊತ್ತಿಲ್ಲದ ಹುಡುಗಿ, ಅಪ್ಪ ಕೊಟ್ಟ ಬೈಕ್‌ನಲ್ಲಿ ಸುತ್ತುವ, ಆಗತಾನೆ ಮರದಿಂದ ಇಳಿದವನಂತೆ ಕಾಣುವವನನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿಯಲು ಕಾರಣ?
ಅದೇ ವೀಕು ಹೃದಯ.
ಸಾಂಪ್ರದಾಯಿಕವಾಗಿ ಮದುವೆ ಆಗುವಾಗ ತಂದೆ,ತಾಯಿ,ಅಣ್ಣಂದಿರ ಒತ್ತಾಯಕ್ಕೆ ಕಟ್ಟುಬಿದ್ದು ಯಾರನ್ನೋ ಮದುವೆಯಾಗಬೇಕಾಗಿ ಬರಬಹುದು.ಎಲ್ಲೋ ಕೆಲವರು ಹಣಕಾಸಿನ ತೊಂದರೆ ಇದ್ದಾಗ,ವಯಸ್ಸಾದರೂ ಮದುವೆ ಆಗದಿದ್ದಾಗ,ಗಂಡಾದರೆ ಸಾಕು ಎಂದು ಮದುವೆ ಮಾಡ ಹುದು. ಆದರೆ ವಿದ್ಯಾವಂತರು, ಐಶ್ವರ್ಯವಂತರು, ಆಯ್ಕೆಮಾಡಲು ಸಾಕಷ್ಟು ಅವಕಾಶವಿದ್ದವರು ಯಾಕೆ ಹೀಗೆ ಮಾಡುವರು? Dress ತೆಗೆದುಕೊಳ್ಳುವಾಗ ಕಲರ್,ಗುಣಮಟ್ಟ,ವಿನ್ಯಾಸದಲ್ಲಿ ಉತ್ತಮವಾದುದನ್ನೇ ಆರಿಸುವ ಹೆಣ್ಣುಗಳು ತಮ್ಮ ಜೀವನ ಸಂಗಾತಿಯನ್ನು ಆರಿಸುವಾಗ ಕಣ್ಣುಮುಚ್ಚಿ ಆಯ್ಕೆ ಮಾಡುವರಲ್ಲಾ ಯಾಕೆ?
ಸಂಗಾತಿ ಆಯ್ಕೆ ಸಮಯದಲ್ಲಾದರೂ ಹೆಣ್ಣುಗಳು ತಮ್ಮ ಹೃದಯ,ಮನಸ್ಸುಗಳ ಬಾಗಿಲು ಮುಚ್ಚಿ ಮೆದುಳನ್ನು ಉಪಯೋಗಿಸಲಿ..
ಹೀಗಾದರೆ ನಿನಗೆಲ್ಲೋ ಹೆಣ್ಣು ಸಿಗುತಿತ್ತು ಎಂದಿರಾ?

Rating
No votes yet

Comments