ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...

ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...

ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...
ಧರ್ಮಸ್ಥಳದ ಮೂಲನಾಮ ಕುಡುಮ.ದಾನ ಧರ್ಮಗಳಿಗೆ ಖ್ಯಾತಿಯಾದ ಈ ಸ್ಥಳ ಆಮೇಲೆ ಧರ್ಮಸ್ಥಳವಾಯಿತು.
ಈ ಕ್ಷೇತ್ರದ ದೇವರು ಮಂಜುನಾಥ. ಇಲ್ಲಿರುವುದು ಶಿವಲಿಂಗ. ಶಿವಾಲಯವಾದರೂ ಆರ್ಚಕರು ವ್ಯೆಷ್ಣವರು. ಆದಳಿತಕ್ಕೆ ಗುಡಿಯ ಹಿರಿಯರು, ಊರ ಒಡೆಯರಾದ ಹೆಗ್ಗಡೆಯವರು. ಅವರದು ದಿಗಂಬರ ಜೈನ ಸಂಪ್ರದಾಯ. ಎಂತನೆಯ ತೀರ್ಥಂಕರ ಚಂದ್ರನಾಥನ ಬಸದಿಯೂ ಇಲ್ಲಿದೆ. ಮಂಜುನಾಥನಿಗೆ ವೇದೋಕ್ತ ಕ್ರಮದಲ್ಲಿ. ಚಂದ್ರನಾಥನಿಗೆ ಜೈನಾಗಮವನ್ನು ಅನುಸರಿಸಿ ಆರಾಧನೆ.
ಧರ್ಮದೇವತೆಗಳೆಂಬ ದೈವಗಳಿಗೆ ಹಾಗೂ ಅವುಗಳ ಬಂಟ ಅಣ್ಣಪ್ಪ ಸ್ವಾಮಿಗೆ ಭೂತಾರಧನೆಯ ರೀತಿಯಲ್ಲೇ ನೇಮೋತ್ಸವ ನಡೆಯುತ್ತದೆ. ದೇವಸ್ಥಾನ, ಜಿನಸ್ಥಾನ- ಆರಾಧನೆಯಲ್ಲಿ ಮೂರಕ್ಕೂ ಸಮಾನ ಸ್ಥಾನಮಾನ.

: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ

Rating
No votes yet