ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...

ಧರ್ಮಸ್ಥಳ ಅಮ್ರತ ಮಹೋತ್ಸವ:
ಡಾ: ವೀರೆಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಮ್ರತ ಮಹೋತ್ಸವದಲ್ಲಿ ಪಾಲ್ಗೋಂಡ ಮುಖ್ಯ ಅತಿಥಿಗಳು...
- ಶ್ರೀ ರವಿಶಂಕರ್ ಗುರುಜಿ
- ಪೂಜ್ಯ ಎಡೆಯೂರು ಮಠಾಧೀಶ ಸಿದ್ಧಲಿಂಗ ಮಹಾಸ್ವಾಮಿ.
- ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ
- ಡಾ ಅಬ್ದುಲ್ ಕಲಾಂ
ಡಾ ಅಬ್ದುಲ್ ಕಲಾಂ ತನ್ನ ಸಂದೇಶದಲ್ಲಿ ಧರ್ಮ ಧರ್ಮಗಳ ಸಮನ್ವಯದಿಂದ ಶಾಂತಿ ಸಾಧ್ಯವೆಂದರು..." ಪ್ರತಿಯೊಂದು ಧರ್ಮದವರೂ ಇತರ ಧರ್ಮಗಳ ಸಾರವನ್ನು ತಿಳಿದುಕೊಳ್ಳಬೇಕು ಅಂತಹ ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನಲೆಯನ್ನು ಸರ್ವ ಧರ್ಮಗಳ ಮುಖಂಡರು ರೂಪಿಸಿಕೊಡಬೇಕು. ಆ ನಿಟ್ಟಿನಲ್ಲಿ ಡಾ! ವೀರೇಂದ್ರ ಹೆಗ್ಗಡೆಯವರು ಸಮಜದಲ್ಲಿ ಸಾಮರಸ್ಯ ಮೂಡಿಸಲು ಸ್ಪೂರ್ತಿ ಹಾಗೂ ಇತರ ಧಾರ್ಮಿಕ ನಾಯಕರಿಗೆ ಮಾದರಿಯಾಗಿದ್ದಾರೆ" ಎಂದರು.
ಆರ್ಟ್ ಆಫ್ ಲೀವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಶುಭ ಸಂದೇಶದಲ್ಲಿ ಜೀವನದ ಲಕ್ಷ್ಯವು ದೀಪವಾಗಿರಬೇಕು. ದೀಪ ಎಂದರೆ ಜ್ಣಾನ,ಪ್ರಕಾಶ, ನಮ್ಮ ಲಕ್ಷ್ಯ,ಕತ್ತಲೆ ಎಂದಾದರೆ ಜಗದಲ್ಲೂ ಕತ್ತಲೆ. ಜ್ಯೋತಿ ಬೆಳಗಿದರೆ ಪ್ರಪಂಚವೇ ಸದಾಶಯದ ಸ್ವರ್ಗವೆನಿಸುತ್ತದೆ.

ಇಂದಿನ ಅಮ್ರತ ಮಹೋತ್ಸವದ ವೇದಿಕೆಯು ಧರ್ಮ, ಸಾಹಿತ್ಯಗಳ ಸಮನ್ವಯದ ಸಂಗಮ ಎಂದು ಡಾ ವೀರೇಂದ್ರ ಹೆಗ್ಗಡೆಯವರು ತನ್ನ ಸ್ವಾಗತ ಭಾಷಣದಲ್ಲಿ ವರ್ಣಿಸಿದರು.
ಪ್ರೊ! ಎಂ ರಾಮಚಂದ್ರ ಕಾರ್ಕಳ ಅವರು ಕಾರ್ಯಕ್ರಮ ನಿರ್ವಹಿಸಿದರು.

: ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ

Rating
No votes yet