ಓದದ ಪುಸ್ತಕ ನನ್ನ ಜೀವನದ ಮೇಲೆ ಪ್ರಭಾವ ಬೀರಿತು !
-- ನಿಮ್ಮ ಹೊಟೆಲನ್ನ ಇಷ್ಟು ಚೆನ್ನಾಗಿ ನಡಸ್ತಿದ್ದೀರಾ , ಎಷ್ಟೊಂದ್ ವ್ಯಾಪಾರ, ಎಷ್ಟೊಂದ್ ಲಾಭ ! ನಿಮಗೆ ಈ ಉದ್ಯೋಗದ ಯಶಸ್ಸಿಗೆ ಏನ್ ಕಾರಣ ? ಹೇಳ್ತೀರಾ?
-- ಎಲ್ಲಾ ನಾನು ಓದದೇ ಇರೋ ಒಂದ್ ಪುಸ್ತಕದ ಪ್ರಭಾವಾ ಕಣಯ್ಯಾ
-- ಯಾವ ಪುಸ್ತ್ಕಾ ಸ್ವಾಮೀ , ಅದು , ಹೋಟೆಲ್ ನಡಸೋ ಬಗ್ಗೆ ಯಾವ ಪುಸ್ತಕಾ ಇದ್‌ಹಾಗಿಲ್ವೇ?
-- ನಾನೂ ನಿನ್ಹಾಗೇ ನಿರುದ್ಯೋಗಿ ಆಗಿದ್ದೆ ಕಣಪ್ಪಾ , ಒಂದಿನ ಕಡ್ಲೆ ಕಾಯಿ ತಿನ್ನೋವಾಗ ಅದನ್ನು ಕಟ್ಟಿದ ಕಾಗದ ನೋಡ್ದೆ , ಒಂದು ಗಿಳಿಯನ್ನ ಸಾಕಿ , ಅದಕ್ಕೆ ಪ್ರತೀನಿತ್ಯ ಮುಂಜಾನೆ ಮಾತು ಕಲಿಸ್ತಾ ಇದ್ರೆ , ಮನಸ್ಸಿಗೆ ಶಾಂತಿ , ಸಂತೋಷ ಲಭಿಸುತ್ತೆ ಅಂತ ಇತ್ತು
-- ಆಮೇಲೆ?
-- ಅದು ಯಾವ ಪುಸ್ತಕಾ ಅಂತ ಗೊತ್ತಾಗ್ದೆ ನಮ್ಮ ಸ್ವಾಮಿಗಳ ಹತ್ರ ಹೋದೆ, ಅವರು ವಾತ್ಸಾಯನ ಬರೆದ ಕಾಮಸೂತ್ರ ಅಂತ ಹೇಳಿದ್ರು
-- ಆಮೇಲೆ ?
-- ಒಂದಿಷ್ಟು ಬಂಡವಾಳ ಹಾಕಿ ಈ ಬಿಲ್ಡಿಂಗ್ ಬಾಡಿಗೆಗೆ ತಕ್ಕೊಂಡು , ಕೆಳಗೆ ಹೋಟ್ಲೂ ,ಮೇಲ್ಗಡೆ ವಾತ್ಸಾಯನಾನೂ ಶುರು ಮಾಡ್ದೆ . ವ್ಯಾಪಾರಾ ಹಿಂಗೆ ಬೆಳೀತು
-- ಆಮೇಲೆ ?
-- ಎದ್ದೇಳಯ್ಯಾ , ಆಮೇಲೆ , ಆಮೇಲೆ ಅಂತ ಕೇಳ್ತೀಯಾ , ನಿಂಗೆ ಎಷ್ಟ್ ಹೇಳಿದ್ರೂ ಅಷ್ಟೇ !
(ನಗೆಗಾರ ರಾ.ಶಿ. ಪುಸ್ತಕದಿಂದ )
Comments
ಉ: ಓದದ ಪುಸ್ತಕ ನನ್ನ ಜೀವನದ ಮೇಲೆ ಪ್ರಭಾವ ಬೀರಿತು !