ಸಿಂಗಾಪುರದಲ್ಲಿ (ವಿದೇಶ) ಯಾತ್ರೆಯಲ್ಲಿ ರಾಂಪಣ್ಣ ಪರಿವಾರ......
ಸಿಂಗಾಪುರದಲ್ಲಿ (ವಿದೇಶ) ಯಾತ್ರೆಯಲ್ಲಿ ರಾಂಪಣ್ಣ ಪರಿವಾರ.
ಜೀವನದಲ್ಲಿ ಹೊರದೇಶ ವಿಹಾರಕ್ಕೆ ಹೋಗಬೇಕು ಎನ್ನುವುದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನ ಆಸೆಯಾಗಿರುತ್ತದೆ. ನಮ್ಮ ರಾಂಪಣ್ಣ ಅದಕ್ಕೆ ಹೊರತ್ತೆನಲ್ಲವಲ್ಲ. ಅವರ ನಸೀಬು ಕೂಡ ಖುಲಾಯಿಸಿತು.ಅವರ ಪತ್ನಿ ಜೊತೆಗೆ ಇನ್ನಿಬ್ಬರನ್ನು ಕರೆದುಕೊಂಡು ಸಿಂಗಾಪುರ ಸುತ್ತವ ಅವಕಾಶ ಲಕ್ಕಿ ಡ್ರಾದ ಮೂಲಕ ಸಿಕ್ಕಿತು.
ರಾಂಪಣ್ಣ ಮತ್ತು ಅವರ ಪತ್ನಿಗೆ ಇಂಗ್ಲಿಷ್ ಬರುತಿರಲಿಲ್ಲ.ಇಂಗ್ಲಿಷ್ ತಿಳಿದ ಇಬ್ಬರನ್ನು ಒಟ್ಟಿಗೆ ಕರೆದು ಕೊಂಡು ರಾಂಪಣ್ಣನ ಸೇನೆ ಸಿಂಗಾಪುರ ಹೋರಟಿತು.
ಎರೋಪ್ಲೆಯಿನ್ ಹತ್ತಿದಾಗ ರಾಂಪಣ್ಣ ಹೆಂಡತಿಯೊಂದಿಗೆ"ತೂಲದೆ ನಿನ್ನ ಅಮ್ಮೆ ವಿಮಾನೊಡು ಕುಲ್ದೆನಾ...?"ಎಂದು ತಮಾಷೆ ಮಾಡಿದರು.
ಸಿಂಗಾಪುರ ಸುತ್ತಾಡಿ ಸುತ್ತಾಡಿ ಸುಸ್ತಾದ ರಾಂಪಣ್ಣ ತಾವಿಳಿದ ಹೊಟೆಲಿನ ಲಿಪ್ಟಿನ ಬಳಿ ಬಂದು ನಿಂತಾಗ ಇಬ್ಬರು ಮುದುಕ ಮುದುಕಿಯರು ಅವಸರವಾಗಿ ಲಿಪ್ಟ್ ಹತ್ತಿ ಮಾಯಾವಾಗುತ್ತಾರೆ.ಕೆಳಗಿಳಿದ ಲಿಪ್ಟನಲ್ಲಿ ತರುಣ ತರುಣಿಯರು ಇಳಿದು ಹೊಗುತ್ತಾರೆ.ರಾಂಪಣ್ಣನಿಗೆ ಈವರೆಗೆ ಕಾಣದ ಅಚ್ಚರಿ.ಮೇಲೆ ಹೊಗುವಾಗ ಮುದುಕರು ಕೆಳಗೆ ಇಳಿಯುವಾಗ ತರುಣರು ಮತ್ತೊಮ್ಮೆ ಖಾತ್ರಿ ಮಾಡಿಕೊಳ್ಳಲು ಕಾದು ನಿಲ್ಲುತ್ತಾರೆ. ಒಬ್ಬ ತರುಣಿ ಆಗ ಲಿಪ್ಟ್ ಹತ್ತುತ್ತಾಳೆ.ಅದು ಮೇಲೆ ಹೋಗಿ ಕೆಳೆಗಿಳಿದಾಗ ರಾಂಪಣ್ಣನ ಮುಂದೆ ಮುದುಕಿಯೊಬ್ಬಳು ಇಳಿದು ಹೋದಳು.ಆಗ ರಾಂಪಣ್ಣನ ಬುದ್ಧಿವಂತಿಕೆಗೆ ಒಂದು ಹೊಸ ವಿಚಾರ ತುಂಬುತ್ತದೆ ಹೌದು, ಖಂಡಿತ ವಿಸ್ಮಯ ಇದೆ ಎಂದು ತಿಳಿದು ಹೊರಗಡೆ ನಿಂತು ಕನ್ನಡಿಯೊಳಗೆ ಚಲಿಸುವ ಬೊಂಬೆಯನ್ನು ನೋಡುತ್ತಿರುವ ಪತ್ನಿಯನ್ನು ಕರೆದರು.ಆಕೆ ಕೂತುಹಲದಿಂದ ಬಂದಳು.ಲಿಪ್ಟ್ ಕೆಳಗೆ ಬಂದ ಕೂಡಲೇ ಹತ್ತು ಹತ್ತು ಎಂದಾಗ ಆಕೆ ಹತ್ತಿದಳು. ಲಿಪ್ಟ್ ಚಾಲಕನಲ್ಲಿ ರಯಿಟ್ ಎಂದರು ರಾಂಪಣ್ಣ.ಲಿಪ್ಟ್ ಮೇಲೆ ಹೋಯಿತು.ರಾಂಪಣ್ಣ ಕೆಳೆಗೆ ಕಾದು ಕುಳಿತರು ಬಹಳ ಹೊತ್ತಿನ ನಂತರ ಲಿಪ್ಟ್ ಕೆಳಗೆ ಇಳಿಯಿತು. ಅದರಲ್ಲಿ ಹದಿಹರೆಯದ ಹದಿನೆಂಟರ ವಿದೇಶಿ ಬಾಲೆಯೊಬ್ಬಳು ಕೆಳಗಿಳಿದಳು.ರಾಂಪಣ್ಣನಿಗೆ ಸ್ವರ್ಗಕ್ಕೇರಿದಷ್ಟು ಸಂತೋಷವಾಯಿತು.'ನನ್ನ ಅದ್ರಷ್ಟ ಚೆನ್ನಾಗಿದೆ ಎಂದವನೇ ಆಕೆಯನ್ನು ಬಾಚಿ ತಬ್ಬಿಕೊಂಡರು.ಆಕೆ ಕಿರುಚಿಕೊಂಡಾಗ ಅಕ್ಕ ಪಕ್ಕದವರೆಲ್ಲ ಸೇರಿ ರಾಂಪಣ್ಣನಿಗೆ ಸರಿಯಾಗಿ ಪೂಜೆ ಮಾಡತೊಡಗಿದರು.ರಾಂಪಣ್ಣ ಹೇಳುವ ಯಾವ ಮಾತುಗಳು ಅವರಿಗೆ ಅರ್ಥವಾಗುತಿರಲಿಲ್ಲ.ಜನರ ಮಧ್ಯದಿಂದ ಬಂದ ರಾಂಪಣ್ಣನ ಪತ್ನಿ ಮತ್ತು ಸಂಗಡಿಗರು ಸೇರಿದವರಿಗೆ ಸಮಾಧಾನ ಹೇಳಿ ಬಿಡಿಸಿ ತರಲು ಸಾಕು ಸಾಕಾಗಿ ಹೋಗಿತ್ತು.
ರೂಮಿಗೆ ಹೋಗಿ ಸೇರಿದ ರಾಂಪಣ್ಣ ತನ್ನ ಪತ್ನಿಯೊಂದಿಗೆ"ಅವು ಮಾತ ಇಪ್ಪಡ್ ಅಂದ ಈ ಲಿಪ್ಟುಡು ಮಿತ್ತ್ ಪೋದು ಪೊಣ್ಣಾದ್ ಬತ್ತಿನ ಈ ಕುಡ ಪರಬು ದಾಯೆ ಆಯಿನಿಯಾ...?"(ಅದು ಎಲ್ಲ ಇರಲಿ ನೀನು ಲಿಫ್ಟಲ್ಲಿ ಮೇಲೆ ಹೋಗಿ ಹುಡುಗಿಯಾಗಿ ಬಂದವಳು; ಪುನಃ ಮುದುಕಿಯಾಗಿ ಯಾಕೆ ಬಂದೆ...?)
..?"..?"..?"
(ಸಂ): ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ