ಸಂವಾದ : ದೊಗ್ನಾಳ್ ಮುನ್ಯಪ್ಪಾರ್ ತಾವ. ವಿಶೇಷವರದಿ.
ದೊಗ್ನಾಳ್ ಮುನ್ಯಪ್ಪಾರ್ ಪುಟ : ವಿಶೇಷವರದಿ :
ದೊಗ್ನಾಳ್ ಮುನ್ಯಪ್ಪಾರ್ ಜ್ವತೆ ಮಾತು-ಕತೆ :
ರಿಪೊರ್ಟ್ರು : ನಮಸ್ಕಾರ. ಇಂದಿನ್ ದಿನ್ಗಳಲ್ಲಿ, ನೀವು ಯಾಕೊ ಸುಮ್ನಾಗಿರೊ ಅಂಗೆದೆ. ಯಾಕೆ ಅಂತವ ಕೇಳ್ಬೊದ ಸರ್ ?
ದೊಗ್ನಾಳ್ ಮುನ್ಯಪ್ಪ :
ನಾನು ಸುಮ್ನಿರೊ ಮಂದಿಯಾಗಿಲ್ಲ. ನೀವೆ ಯೆಳಿ, ನಮ್ಮ ಕರ್ನಾಟ್ಕದ್ ರಾಜ್ಕೀಯ್ದಾಗೆ ಏಳೆಕ್ಕೆ ಇನ್ನೇನ್ ಉಳ್ದಯೈತೆ- ನೀವೆ ಒಸಿ ಯೇಳಿ ಸ್ವಾಮಿ. ನೀವ್ ತಿಳ್ದೊರೊ ಪತ್ರಿಕಕರ್ತ್ರು. ಎಲ್ರು ಅವರವ್ರ ಜೇಬ್ ತುಂಬ್ಸಕ್ಕೆ ರಾಜ್ಕೀಯನ ಉಳಸ್ಕಂಡವ್ರೆ ಅಂತ್ ನನಗ್ ಅನ್ನಿಸ್ತೈತ್ರಿ, ಸಾಹೆಬ್ರೆ.
ರಿಪೊರ್ಟ್ರು :
ಈಗಿನ್ ಸುದ್ದಿ ಕೇಳಿರೇನು ? ಎ. ಪಿ. ಪ್ರಕಾಶಪ್ಪರು, ಜೆ.ಡಿ.ಎಸ್ ಬಿಟ್ಟು ಓಗ್ನೀನಿ ಅಂತವ್ರಲ್ರಿ. ಇದಕ್ಕೇನ್ ಏಳ್ತಿರೇಳ್ರಿ ?
ದೊಗ್ನಾಳ್ ಮುನ್ಯಪ್ಪ :
ಯೆ, ಇದ್ರಾಗೇನೈತೆ ನಾನೇಳೊದು. ಇದೆಂದೊ ಗೊತ್ತಿತ್ತು. ನಮ್ ಎಂಕ್ಟೇಶಪ್ಪಂಗೆ, ನಾನ್ ಯಾವಾಗ್ಲೊ ಏಳಿದ್ದೆ. ಕೇಳ್ರಿ ಬ್ಯಾಕಾದ್ರೆ.
ರಿಪೊರ್ಟ್ರು :
ಅಂದ್ರೆ ಅವ್ರು ಕಾಂಗ್ರೆಸ್ ಗೇನಾದ್ರು ಸೇರ್ಬೈದ ಎಂಗೆ ?
ದೊಗ್ನಾಳ್ ಮುನ್ಯಪ್ಪ :
ಅದಾಗಲ್ಲ ಬಿಡ್ರಿ. ಪ್ರಕಾಶ್ ಕೂಡ ತಮ್ಗೆ ಪಾಯ್ದೆ ಇಲ್ದೆ ಕೆಲ್ಸ ಮಾಡೊರಲ್ಲ್ರಿ. ಈಗ್ ಎಲ್ರು ಅಂಗೆ ತಾನೆ ? ಅವ್ರೆಕ್ ಬಿಟ್ಟಿ ಚಾಕ್ರಿ ಮಾಡ್ಬೇಕು ನೀವೆ ಏಳ್ರಿ ? ಒಸ ಪಾರ್ತಿ ಮಾಡಕ್ಕು ಅವ್ರಿಗೆ ಬೆಂಬದ್ದೊರ್ ಕೈಕೊಟ್ರ್‍ಂಗೆ ಅಂತ ಎದ್ರತಾರ್ ನೋಡ್ರಿ. ಗೌಡ್ರು, ಅವ್ರ್ ಮಕ್ಳು ಇದ್ರಲ್ ನುರ್ತವ್ರೆ. ಅವ್ರಿಗೆ ಬೆಂಬ್ಲನೂ ಐತೆ. ಆ ಗೌಡ್ರು ಎನೆನೊ ಎಳಿ, ಕೆಲ್ಸನ ಆಳ್ಮಾಡ್ಕಂಡವ್ರೆ. ಆಷ್ಟೆಯ. ಕುಮಾರಪ್ಪರು ಸ್ವಲ್ಪ್ ತಮ್ದೆ ಇಸ್ಟೈಲ್ ನಲ್ಲಿ ಕೆಲ್ಸ ಮಾಡಿದ್ರೆ ಎನಾರು ಗೆದ್ದಾರು ಅನ್ನಿಸ್ತದೆ. ನಾನ್ ಏನ್ ಏಳ್ಲಿ, ಈಗ ಸರ್ಕಾರನೆ ಇಲ್ಲಲ್ಲಪ್ಪ. ಸಿದ್ರಾಮಣ್ಣರೂ ಸಿಟ್ಗಂಡು, ಗಾಯ್ಗೊಂಡ್ ಉಲಿ ತರ್ ಗುರುಗುಟ್ತವ್ರೆ. ಎಲ್ಲ ಮುಂದಿನ್ ಮಾತು ; ಆ ಸಿವ್ನೆ ಬಲ್ಲ.
ರಿಪೊರ್ಟ್ರು :
ಥಾಂಕ್ ಯು ಮುನ್ಯಪ್ಪ್ನವ್ರೆ. ಬರ್ತಿನಿ. ನಮಸ್ಕಾರ.
ದೊಗ್ನಾಳ್ ಮುನ್ಯಪ್ಪ :
ಓಗ್ಬಾರಪ್ಪ ನಿಮ್ಗ್ ಒಳ್ಳೆದಾಗ್ಲಿ. ನಾನ್ ಬದ್ಕಿರೊದ್ರೊಳ್ಗೆ ನಮ್ ದೇಸಕ್ಕೆನಾದ್ರು ಒಳ್ಳೆದಾದಿತ. ಒಂದು ತಿಳ್ಯಕ್ಕಿಲ್ವೆ.
ಸಿವ್ಸಿವ. ದೆವ.
-ಸಂಪದದ್ ನ್ಯುಜ್ ಸರ್ವಿಜ್.