ಪ್ರೀತಿ ------ ತ್ಯಾಗ????????
ಇದು ನನ್ನ ಮೂದಲ ಬ್ಲಾಗ್. ತಪ್ಪಿದ್ದರೆ ಮನ್ನಿಸಿ.
ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇಳೋದಿಕ್ಕಿಂತ ನನ್ನ ಅನುಭವವನ್ನೆ ಹೇಳುವುದು ವಾಸಿ.
ನಾನು ಎಲ್ಲರಂತೆ ಪ್ರೀತಿ ಪ್ರೇಮ ಹಾಗಿರ್ಬೇಕು ಹೀಗಿರ್ಬೇಕು ಅಂತ ಕನಸು ಕಣ್ದವಳು. ಸ್ವಲ್ಪ creditu TV cinemaಗು ಸೇರತ್ತೆ ಅನ್ನಿ :-). ಪರಿಚಯ ಹೇಗಾಯ್ತು ಅನ್ದ್ರೆ......ಅಯ್ಯೋ ಬೇಡ ಬೇಡ ಅದು ತುಂಬಾ ದೊಡ್ಡ ಕಥೆ ಇನ್ಯಾವಾಗ್ಲಾದ್ರು ಹೇಳ್ತಿನಿ.
ಪ್ರೀತಿ ಪ್ರೇಮ ಅಂತ ಬೀದಿ ಬೀದಿ ಸುತ್ತಿಲ್ಲ, ಪಾರ್ಕು cinemaಗೆ ಹೋಗ್ಲಿಲ್ಲ. ಅಪರೂಪಕ್ಕೆ restaurantಗೆ ಹೊಗಿದ್ವಿ. ನಮ್ಮ ಪ್ರಕಾರ ಇವೆಲ್ಲ ಪ್ರೀತಿಸಿದವರು ಮಾದಲೆಬೇಕೆನ್ದಿರ್ಲಿಲ್ಲ. ಇಬ್ಬ್ರಲ್ಲು ಪ್ರೀತಿ ಸಣ್ಣದಾಗಿ ಶುರುವಾಗಿದ್ದು ನಿಧಾನವಾಗಿ ಮರವಾಗ್ತಾ ಇತ್ತು. ಯಾವಾಗ 3 ವರ್ಷ ಆಯ್ತು ಗೊತೇ ಆಗ್ಲಿಲ್ಲ. ನಾನು ನನ್ನ ಕೆಲ್ಸದಲ್ಲಿ ತಲ್ಲೀನೆ ಅವನು ಅವನದ್ರಲ್ಲಿ.
ಮದುವೆ ಆಸೆ ಆವಗ ಇನ್ನು ಚಿಗುರ್ಲಿಲ್ಲ ಅಥವ ನಿಧಾನವಾಗಿ ಆದ್ರೆ ಆಯ್ತು ಅವನು ನನಗಾಗೆ ಇರ್ತಾನೆ ಅನ್ನೊ ಅಪಾರ ನಂಬಿಕೆ over-confidence ಕೂಡ. ಆದರೆ ಯಾಕೋ ಆ ದೇವ್ರಿಗೆ ನನ್ನ ನೆಮ್ಮದಿ ಇಷ್ಟ ಆಗ್ಲಿಲ್ಲ ಅನ್ಸತೆ ಅದಿಕ್ಕೆ ಅವನ ಆಟ ತೊರ್ಸೊದಿಕ್ಕೆ ಶುರು ಮಾಡ್ದ.
ದೇವರ ಆಟ ಬಲ್ಲವರಾರು.......ನಿಜ ಅಲ್ವ? ನನ್ನದು ಅನ್ದ್ಕೊನ್ದಿಡ್ದ ಜೀವ ಬೇರೆಯವರದಾಯ್ತು :-(. ತುಂಬಾ ಸಂಕಟ, ಯಾತನೆ, ನೋವು ಹೀಗೆ......ವರ್ಣಿಸೊದಿಕ್ಕೆ ಪದಾನೇ ಇಲ್ಲ....
ತಂದೆ ತಾಯಿಗಿಂತ ಹೆಚ್ಚಲ್ಲದಿದ್ದರೂ, ಅವರ ಪ್ರತಿಷ್ಟೆಗಿಂತ ಕಡಿಮೆನಾ ಪ್ರೀತಿ?ಪ್ರೀತಿ ಧೈರ್ಯ ಕೊಡತ್ತೆ ಅಂತಾರೆ ಆದರೆ ಇವನಿಗೆ ಯಾಕೆ ಕೊಡ್ಲಿಲ್ಲ? ಇನ್ನು ಹಲವಾರು ಉತ್ತರವಿಲ್ಲದ ಪ್ರಶ್ನೆಗಳು.
ಅವನಿಗೆ ತಾನು ಕೂಡ ತ್ಯಾಗ ಮಾಡಿದ ಭಾವನೆ ಇರಬೇಕು. ಆದರೆ ನಿಜವಾಗಿ ತ್ಯಾಗ ಮಾಡಿದ್ದು ಯಾರು? ತನ್ನವರಿಗೆ ನನ್ನನು ಬಿಟ್ಟ ಅವನಾ ಅಥವ ಅವನಿಗಾಗಿ ನನ್ನನೇ ಬಿಟ್ಟುಕೊಟ್ಟ ನಾನ ಗೋತ್ತಿಲ್ಲ. ತ್ಯಾಗ ಮೂರ್ತಿ ಅನ್ನೊ ಪಟ್ಟಾನು ನನ್ಗೆ ಬೇಡ.....
ಪ್ರೀತಿ ಅಂದ್ರೆ ಇಷ್ಟೇನಾ, ಯಾರದೋ ಜೀವನ ಬಲಿ ಕೊಟ್ಟು ಇನ್ಯಾರದೋ ಹಸನಾಗಿಸೋದು... ಅವನಿಗೆ ನಾನು ರಾಧೆಯಾಗಿ ಉಲಿದೆ...ಆದರು ಎಲ್ಲೊ ಬೇರೆಯವರಿಗೆ ನೋವು ಮಾಡದೆ ಒಂದು ಘಟ್ಟ ಮುಗಿಸಿದೆ ಅನ್ನೋ ಸಾರ್ಥಕತೆ :-).....
ಹಾಡು ಹಳೆಯದಾದರೇನು ಭಾವ ನವ ನವೀನ.....ಹಾಗೆ ಪ್ರೇಮ ಕಥೆಯಾದ್ರು ಭಾವ,ತ್ಯಾಗ ಬೇರೆ ಬೇರೆನೇ.....
ಒಂದನ್ತು ಸತ್ಯ ಪ್ರೀತಿ ಮಧುರ ತ್ಯಾಗ ಅಮರ ಇರ್ಬಹುದು ಆದರೆ ನನಗೆ ಎರಡೂ ಅಮರ ಮತ್ತು ಮಧುರ :-)