ಬದುಕು ------ ಬವಣೆ

ಬದುಕು ------ ಬವಣೆ

ಬರಹ

ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ
ಮೊದಲಿಲ್ಲದ ಕೊನೆ ಕಾನದ ಬವಣೆಯ

ಸಾವಿರ ಭಾವನೆ ಬಿಚ್ಚಿದುವ ಬಯಕೆ ನನಗೆ
ಮನದಾಳದ ನೋವಿನ ಸ್ವಾಗತ ಮೊದಲಿಗೆ

ಆದರು ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ
ನನ್ನ ಮನಸಿನ ಸಕ್ಷಾತ್ಕಾರ ಮಾಡ ಬಯಸಿರುವೆ

ಪ್ರೀತಿಯಲ್ಲಿ ಅರಳಿದ ಮುಂಜಾವಿನ ದಿನಗಳನ್ನು ಹೇಳಲೇ
ಅಥವ ವಿಯೋಗದ ಮುಸ್ಸಂಜೆಯ ತೋರಿಸಲೇ

ಮಿತಿ ಇಲ್ಲದ ಪ್ರೀತಿ ಕೊಟ್ಟೆ
ಏಣೆ ಇಲ್ಲದ ನೋವ್ವ ಪಡೆದೆ

ಕಣ್ಣಿರಿನ ಸಾಗರದಲ್ಲಿ ತೇಲುತ್ತಿರುವ ಈ ಜೀವನ
ಅವನೇ ತೇರವೆಂದು ಸೇರಲು ಪರಿತಪಿದುತ್ತಿದೆ ಈ ಜೀವ

ಶಪಿಸುತ್ತಿದೆ ಪ್ರೀತಿಯ ಹೃದಯ ನನ್ನ
ಅವನಿರದ ಓಂಟಿತನವನ್ನ

ತ್ಯಾಗದ ಹೇಸರಾಗಲು ಕೊಂದುಕೊಂಡೆ ನನನ್ನೇ
ಮೇಣದ ಬತ್ತಿಯಂತೆ ಬೆಳಕನಿತ್ತು ಅಂಧಕಾರದಲ್ಲೆ ಉಳಿದೆ

ತೀರಸೆರುವುದು ಭ್ರಹ್ಮೆಯಾದರೂ ಸೋಲೊಪ್ಪಿಕೊಳ್ಳದ ನಾನು
ಈಜುತ್ತಿರುವೆ ಕೈಕಾಲಿಲ್ಲದೆ ಅವನ ಸೇರಲು

ಭ್ರಹ್ಮೆಯಿಂದ ಹೊರಬಂದು ಮಾಡುವುದಾದರು ಎಂತು
ಇರುವೆನು ನಲಿವಿನ ಆ ದಿನಗಳ ನೆನಪಿನಲ್ಲೇ ಎಂದೆಂದು

ಎಂದು ಸೇರುವೆನೋ ಇನಿಯನನ್ನು ಎಂದೆನ್ನ ಕೆಳದಿರಿ
ಭುವಿಯಾಗಸ ಸೇರಿದನ್ದೆ ಎಂದೆನ್ನದಿರಿ