ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?

ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?

ನಿಯಮಿತವಾಗಿ ಫ್ಲಾಸಿಂಗ್ ಮಾಡುವವರು ಇದನ್ನು skip ಮಾಡಿ ಬೇರೆ ಬ್ಲಾಗ್ ಓದಿ.
ಉಳಿದವರಿಗೆ ಒಂದು test-
ನೀವು ಉಪಯೋಗಿಸುವ paste(೧೮ ಆಯುರ್ವೇದ ಗಿಡಮೂಲಿಕೆಯಿಂದ ಕೂಡಿದ ವಜ್ರದಂತಿ/colgate/closeup/..ಯಾವುದೇ ಆಗಬಹುದು)ಬ್ರಷ್ ತುಂಬಾ ಹಾಕಿ,೧೦-೧೫ ನಿಮಿಷ,ಉದ್ದ,ನೀಟ,ಅಡ್ಡಡ್ಡ ಎಲ್ಲಾ ದಿಕ್ಕಿನಲ್ಲೂ ಬ್ರಷ್ ಮಾಡಿ.೧೦ ನಿಮಿಷ ನೀರಲ್ಲಿ ಬಾಯಿ ಮುಕ್ಕಳಿಸಿ.ಫಳಫಳ ಮಿಂಚುತ್ತಿರುವ ಹಲ್ಲನೊಮ್ಮೆ ಕನ್ನಡಿಯಲ್ಲಿ ನೋಡಿ.
ಈಗ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ,ಫ್ಲಾಸಿಂಗ್ ದಾರವನ್ನು ತನ್ನಿ.(ಫ್ಲಾಸಿಂಗ್ ದಾರವು ಅನೇಕ ವಿಧದವು ಇದೆ.ನಿಮಗೆ ಎಳೆದು ತುಂಡು ಮಾಡಿ ಉಪಯೋಗಿಸಲು ಅನುಕೂಲವಾಗುವಂತೆ ಸುಂದರವಾದ ಡಬ್ಬಿಯಲ್ಲಿರುವುದು.ಒಂದು ಡಬ್ಬಿಗೆ ೧೦೦ರೂ ಆಸುಪಾಸು ಬೆಲೆ ಇರುವುದು.)೬-೭ಇಂಚು ಉದ್ದಕ್ಕೆ ದಾರವನ್ನು ಎಳೆದು ತೆಗೆದುಕೊಂಡು,ಎರಡೂ ಕೈಯ ತೋರುಬೆರಳಿಗೆ ದಾರದ ಕೊನೆಗಳನ್ನು ಸುತ್ತಿ,ಎರಡು ಹಲ್ಲಿನ ನಡುವೆ ಸಿಕ್ಕಿಸಿ, ಹಿಂದೆ ಮುಂದೆ ಮೆಲ್ಲಗೆ ಎಳೆಯಿರಿ. ಬ್ರಷ್ ಮಾಡಿದ ಮೇಲೂ ತಿಂದ ಆಹಾರದ ತುಣುಕುಗಳು ಹಲ್ಲಿನ ಎಡೆಯಲ್ಲಿ ಉಳಿದಿರುವುದು ಗಮನಕ್ಕೆ ಬಂತೆ?
ಬೆಳಗ್ಗೆ ಎದ್ದಾಗ,ರಾತ್ರಿ ಮಲಗುವಾಗ ಬ್ರಷ್ ಮಾಡಿದರಷ್ಟೇ ಸಾಲದು.ಕೆಲವರ್ಷಗಳ
ಹಿಂದೆ,ಊದಿದ ಒಸಡನ್ನು ಒತ್ತಿ ಹಿಡಕೊಂಡು,ಹಲ್ಲಿನ ಡಾಕ್ಟ್ರ ಬಾಗಿಲು ಕಾಯುತ್ತಾ ಇದ್ದಾಗ, ಬಾಗಿಲಿಗಂಟಿಸಿದ ಚೀಟಿಯಲ್ಲಿ ಫ್ಲಾಸಿಂಗ್ ಬಗ್ಗೆ ಓದಿದೆ. ಫ್ಲಾಸಿಂಗ್ ಮಾಡಲು ಸುರುಮಾಡಿದ ಮೇಲೆ ಹಲ್ಲಿನ ಡಾಕ್ಟ್ರ ಬಾಗಿಲು ಕಾಯುವ ಕೆಲಸ ಕಮ್ಮಿಯಾಗಿದೆ.
(ಸೂಚನೆ: ಫ್ಲಾಸಿಂಗ್ ಸುರು ಮಾಡುವ ಮೊದಲು ನಿಮ್ಮ ಫ್ಯಾಮಿಲಿ ಡಾಕ್ಟ್ರ ಅಭಿಪ್ರಾಯಕೇಳಿ)
-ಗುಂಪೊಡೆಯ(ಗಣೇಶ)

Rating
No votes yet

Comments