ಬಣ್ಣದ ಪ್ರೀತಿ

ಬಣ್ಣದ ಪ್ರೀತಿ

ಆಕಾಶದಲ್ಲಿ ಬಣ್ಣ ಬಣ್ಣದ ಬೆಳಕು ಮೂಡಿದ೦ತೆ

ಹಚ್ಚಿದೆ ನೀನು ನನ್ನ ಹೃದಯದೊಳಗೆ ಬಣ್ಣ ಬಣ್ಣದ ಆಸೆಗಳನ್ನ

ಕ೦ಡೆ ನಾ ಕನಸಲ್ಲಿ ಆ ಬಣ್ಣ ಬಣ್ಣದ ಆಸೆಗಳನ್ನ

ಸಾಗರದ ತೀರದಲ್ಲಿ ಮನೆ ಕಟ್ಟಿ,

ಮನದೊಳಗೆ ಮನೆ ಮಾಡಿ ಬದುಕಲು ಹೊರಟ ನನಗೆ

ತಿಳಿಯಲಿಲ್ಲಲ್ಲೊ ನಿನ್ನ ಬಣ್ಣ

ನನ್ನ ಬದುಕಿಗೆ ಬಣ್ಣ ಬಣ್ಣದ ಆಸೆ ಕಟ್ಟಿ

ಅದನ್ನು ಹಾರಾಡುವ ಹಕ್ಕಿಗಳ ಹಾಗೆ ಹಾರಲು ಹೊರಟ ನನಗೆ

ತಿಳಿಯಲಿಲ್ಲ ನಿನ್ನ ಬಣ್ಣ

ಕ್ಷಣದಲ್ಲಿ ಮಿ೦ಚ೦ತೆ ಬ೦ದು ಹೋಗುವ ಕಾಮನ ಬಿಲ್ಲಿನ ಹಾಗೆ

ನೀ ಬ೦ದು ಬಳೆದ ಈ ಬಣ್ಣ ಸಾಗರದ ಅಲೆಯ೦ತೆ ಬ೦ದು ಕೊಚ್ಚಿ ಹೋಯ್ತಲ್ಲ ಚಿನ್ನ

Rating
No votes yet