ಖೋಟಾ ನಾಣ್ಯ?

ಖೋಟಾ ನಾಣ್ಯ?

ಖೋಟಾ ನಾಣ್ಯ ?

ಇದು ಮೊನ್ನೆ ಗಾಂಧಿ ಬಜಾರಿನಲ್ಲಿ ನನ್ನ ಕೈಗೆ ಬಂದ ನಾಣ್ಯ. ನಾಣ್ಯಗಳೂ ನೋಟುಗಳೂ ಹೇಗಿರುತ್ತವೆ ಎಂದರೆ - ಮುಟ್ಟಿ ನೋಡಿದರೆ ಏನೂ ಗೊತ್ತಾಗುವುದಿಲ್ಲ. ಕಣ್ಣ್ಗ ಅಗಲಿಸಿ ನೋಡದಿರೂ ಅದು ಯಾವ ಮೌಲ್ಯದ ನಾಣ್ಯವೆಂದು ಗೊತ್ತಾಗದರೀತಿಯಲ್ಲಿ ಸಮಾನತೆಯನ್ನು ರಿಸರ್ವಬ್ಯಾಂಕ್ ಆಫ್ ಇಂಡಿಯಾ ಸಾಧಿಸಿದೆ. ಐವತ್ತು ಪೈಸೆಯಿಂದ ಆರಂಭಿಸಿ ಐನೂರರ ನೋಟು ನೀಡುವ ಪಡೆಯುವ ವ್ಯವಹಾರ ಕಣ್ಣು ಮಸಬಾದ ನನ್ನಂತವರಿಗೆ ಸ್ವಲ್ಪ ಕಷ್ಟವೇ ಸರಿ. ಹೀಗಾಗಿ ೨,೫,೧೦ ರ ನೋಟುಗಳನ್ನು ಬಿಟ್ಟು ಬೇರೆನೋಟು ತೆಗೆದು ಕೊಳ್ಳುವಾಗ ಕೊಡುವಾಗ ಕಣ್ಣಿನಮೇಲೆ ಶ್ರಮ ಹಾಕಲೇ ಬೇಕಾಗುತ್ತದೆ ಆದರೆ ನಾಣ್ಯದಲ್ಲಿ ಸಾಧಾರಣವಾಗಿ ೧ ರೂಪಾಯಿ ಎಂದು ಬರೆಯುವಲ್ಲಿ ೧೫೦ ಎಂದು ಬರೆದಿದ್ದು ಕಂಡು 'ಎಲಾ ಮುದುಕಿ ನನಗೆ ಒಂದೂ ವರೆ ರೂಪಾಯಿಯ ಖೋಟಾ ನಾಣ್ಯವನ್ನ ದಾಟಿಸಿಬಿಟ್ಟೆಯಲ್ಲಾ ನೀ ಬಹಳ ಘಾಟಿ 'ಎಂದು ಬೈದುಕೊಂಡು ಸಂತೆಯಲ್ಲಿ ಒಂದುರೂಪಾಯಿಗಾಗಿ ಜಗಳ ಮಾಡಲು ಧೈರ್ಯ ಸಾಲದೇ ಅದನ್ನು ಹಾಗೆಯೇ ಜೇಬಿಗೆ ಇಳಿಸಿದೆ.

 ನಿಜವಾಗಿಯೂ ಇದು ಸಾಚಾ ನಾಣ್ಯವೇ ಆಗಿರುತ್ತದೆ. ೨೦೦೪ ರಲ್ಲಿ ಭಾರತೀಯ ಅಂಚೆ ಇಲಾಖೆಯು ೧೫೦ ವರ್ಷಗಳನ್ನು ಪೂರೈಸಿದ ಸ್ಮರಣಾರ್ಥ ಹೊರಡಿಸಲಾದ ಒಂದು ರೂಪಾಯಿಯ ನಾಣ್ಯವಿದು. ಜೋಕ್ ಒಂದ್ಸಾರಿ ಒಂದೂರಿನಲ್ಲಿ ಒಂದು ಖೋಟಾ ನೋಟ್ ಪ್ರಿಂಟ್ ಮಾಡುವಾತ ಕತ್ತಲಿನ್ಲಿ ಅಂಕೆ ತಪ್ಪುಬರೆದು ೨೫ ರೂಪಾಯಿಯ ನೋಟುಗಳನ್ನು ಪ್ರಿಂಟ್ ಮಾಡಿಬಿಟ್ಟಿದ್ದ. ಅದನ್ನು ಹೇಗಾದರೂ ದಾಟಿಸಬೇಕಿತ್ತು. ಕತ್ತಲಲ್ಲಿ ತನ್ನ ಸಹೋದ್ಯೋಗಿಯ ಹತ್ತಿರ ಹೋಗಿ ತಾನು ಮಾಡಿದ ಎಡವಟ್ಟ್ಜು ಕೆಲಸದ ಬಗ್ಗೆ ಹೇಳಿದ .ಅದಕ್ಕೆ ಆತ ಚಿಂತಿಸ ಬೇಡ ನಾನು ನಿನಗೆ ಚಿಲ್ಲರೆ ಕೊಡುತ್ತೇನೆ.ಆದರೆ ನನಗೆ ಒಂದು ರೂಪಾಯಿ ಕಮಿಷ್‍ನ್ ಬೇಕೆಂದು ಕರಾರು ಹಾಕಿದ. ಹಾಗೂ ಕತ್ತೆಲೆಯಲ್ಲೇ ಎರಡು ೧೨ ರೂಪಾಯಿಯ ನೋಟನ್ನು ದಾಟಿಸಿದ.

Rating
No votes yet

Comments