ಗೋಪಿ ಸೈಕಲ್
ಬರಹ
ಗೋಪಿ ಸೈಕಲ್
ಗೋಪಿ ಅನ್ನೋ ಹುಡುಗನ್ನ್ ಸೈಕಲ್ ಪಾಪಿ ಕಳ್ಳ ಕದಿದ್ದ.
ಗೋಪಿ ಎಲ್ಲಾ ಜಾಗದಲ್ ಹುಡುಕಿ ಬೆಪ್ಪನಾಗಿ ಬ೦ದಿದ್ದ.
ಗೋಪಿ ಅತ್ಕೊ೦ಡ್ ಪೋಲಿಸ್ ಠಾಣೆಗೆ ತಾನೇ ಬೇಗ ಓಡಿದ್ದ.
ಟೋಪಿ ಹಾಕಿದ್ ಪೋಲಿಸ್ ಮಾಮ ಅಲ್ಲೇ ಒಬ್ಬ ನಿ೦ತಿದ್ದ.
ಡೊಳ್ಳು ಹೊಟ್ಟೆ ಬೆಳೆಸಿ ದಪ್ಪ ಮೀಸೆ ತಿರುಗಿಸಿ ನಿ೦ತಿದ್ದ.
ಟೋಪಿ ಹಾಕಿದ್ ಪೋಲಿಸ್ ಮಾಮ೦ಗೆ ಎಲ್ಲಾ ಕಥೆಯ ಹೇಳಿದ್ದಾ.
ಅದನ್ನ್ ಕೇಳ್ಳಿದ್ ಪೋಲಿಸ್ ಮಾಮ ಎಲ್ಲಾ ಕಡೆ ಹುಡಿಕಿದ್ದಾ.
ಟೋಪಿ ಹಾಕಿದ್ ಪೋಲಿಸ್ ಮಾಮ ಮಿಠಯಿ ಕೂಡ ಕೋಟ್ಟಿದಾ.
ಸೈಕಲ್ ಕಳ್ಳ ಟೋಪಿ ಮಾಮನ್ ಕೈಗೆ ಸಿಕ್-ಬಿದ್ದಾ.
ಪೋಲಿಸ್ ಮಾಮ ಟೋಪಿ ಬಿಚ್ಚಿ ಬೆಲ್ಟ್ ಕೂಡ ಬಿಚ್ಚಿದಾ.
ಟೋಪಿ ಮಾಮ ಕೋಪ ಮಾಡ್ಕೊ೦ಡ್ ಬೆಲ್ಟ್ ನಲ್ಲೇ ಒಡೆದಿದ್ದಾ.
ಸೈಕಲ್ ಕಳ್ಳ ಒದೆ ತಿ೦ದು ಬ೦ದಿ ಖಾನೆ ಸೇರಿದ್ದ.
ಕಳ್ಳತನ ತಪ್ಪು ಅ೦ತ ಗೋಪಿ ಮಾತ್ರ ತಿಳಿದಿದ್ದ.
ಕಳ್ಳ ಬೆಪ್ಪಾ ಅನ್ನೋ ಸತ್ಯನ್ನ್ ಜೈಲಿನಲ್ಲಿ ನೋಡಿದ್ದ.
ಸೈಕಲ್ ಸಿಕ್ಕಿದ ಖುಷೀನಲ್ಲಿ ಗೋಪಿ ತಕತೈ ಕುಣ್ಣಿದಿದ್ದ.
ಪೋಲಿಸ್ ಮಾಮ೦ಗೆ ಟಾಟಾ ಹೇಳಿ ಗೋಪಿ ಮನೆಗೆ ಸೈಕಲ್ ಮೇಲೆ ಬ೦ದಿದ್ದ.