ಓ ಇವಳೇ ನನ್ನವಳೀ ಹೆಣ್ಣು

ಓ ಇವಳೇ ನನ್ನವಳೀ ಹೆಣ್ಣು

ಬರಹ

ರಚನೆ: ಗೋಪಾಲಕೃಷ್ಣ ಅಡಿಗ

ಓ ಇವಳೇ ನನ್ನವಳೀ ಹೆಣ್ಣು
ನನ್ನೆಳಗನಸಿನ ಹೂವಿನ ಹಣ್ಣು
ನನ್ನೆದೆ ಕುರುಳಿಗೆ ಮಾಡಿದ ಕಣ್ಣು
ತಿರಿವ ತೆರೆವ ಬಗೆ ಬೊಗಸೆಗೆ ದಿವವೆ
ಸುರಿದ ಹೊನ್ನು ಹೊನ್ನು

ಕಂಡೆನವಳನದೆ ನೂರನೆ ಯಾಗ
ಬಂದುದಂದೆ ಅಮರಾವತಿ ಭೋಗ
ದೊರೆಯಿತೆಲ್ಲ ಇನ್ನಿಲ್ಲವಿಯೋಗ
ನಾನೆ ಯೋಗಿಯಿನ್ನು

ಜಗವೆಲ್ಲವು ಬರಿ ಬೀದಿಯಾಗಿ ಬರೆ
ತೊಳಲಿ ಬಳಲಿ ಬಗೆ ಸೋತಿರೆ ಭೀತಿರೆ
ಯಾವ ಹುತ್ತಿನೊಳು ನಾ ಕಟ್ಟಿದ ಮನೆ
ಸೇರಿದೆನಿವಳನ್ನು

ಇಹಪರಗಳ ಹೊಂಬೆತ್ತ ಜೋಡಿಗೆ
ನಡುವೆ ತೂಗುವೀ ಹೂವಿನ ಹಾಸಿಗೆ
ಇದೆ ಇದೆ ಸೇತುವೆ ಇಲ್ಲಿಂದಿಲ್ಲಿಗೆ
ಇವಳೇ ತಾರಕಳಿನ್ನು