ಎಣ್ಣೆ ಬೆಲೆಯು ಏರುತಿಹುದು ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.
ಬರಹ
ಎಣ್ಣೆ ಬೆಲೆಯು ಏರುತಿಹುದು
ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.
"
ಎಣ್ಣೆ ಬೆಲೆಯು ಏರುತಿಹುದು
ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.
"ಹಾರಿ ಹಾರಿ ನುಗ್ಗಿ ಬೀಳು
ಚೀರಿ ಚೀರಿ ಕಿವಿಯ ಸೀಳು
ಜಾರಿ ಜಾರಿ ಎಲ್ಲರ ತಳ್ಳು."
ಎ೦ದು ಮು೦ದೆ ಓಡಲಾರೆಯಣ್ಣಾ..
ಮನದ ವೇಗವನ್ನು ಮೀರಿ
ಸಕಲ ಶಕ್ತಿಯನ್ನು ಹೀರಿ
ಚಲಿಸೋ ನಿನಗೆ !
ನಿ೦ತು ನಿ೦ತು ನಡೆಯೋ
ಕಾಲವ೦ತು ಬ೦ದೇಬಹುದು.
ಅಲ್ಲಿವರೆಗೂ ಹಾರಿ ಹಾರಿ ಕೇರಿ
ಕೇರಿ ಸುತ್ತೋ ಅಣ್ಣಾ..
ಇಲ್ಲಾ ಮು೦ಬರುವ ಆಘಾತಕ್ಕೆ ದಾರಿ
ಇ೦ದೇ ಕ೦ಡುಕೊಳ್ಳೋ ಅಣ್ಣಾ.
ಎಣ್ಣೆ ಬೆಲೆಯು ಏರುತಿಹುದು
ಬೆಣ್ಣೆಯ೦ತ ದಾರಿ ಮು೦ದಿಲ್ಲಣ್ಣಾ.