" ಗಾನ ಪುಷ್ಪ"
ಇಧು ಕಾವ್ಯವೂ ಅಲ್ಲ,ಕವನವೂ ಅಲ್ಲ.ಇದನ್ನು ಹಾಡು ಅಠವಾ ದೇವರ ನಾಮ ಎಂದು ಪರಿಗಣಿಸಬಹುದು.ಈ ಹಾಡನ್ನು ನಾನು ಬಹಳ ಹಿಂದೆಯೇ ಬರದಿದ್ದರೂ ಸಂಪದ ಓದುಗರಿಗಾಗಿ ಮತ್ತೆ ಇದನ್ನು ಪ್ರಕಟಿಸುತ್ತಿದ್ದೇನೆ.ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ .
ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ
ಆಡೊ ಹುಡುಗರು ನಾವು ಹಿರಿತನ ಬೇಕಿಲ್ಲ
ಒಡವೆಗಳಗೊಡವೆ ನಮಗಂತು ಇಲ್ಲ
ಹಾಡು ಹೂಗಳ ನಡುವೆ ನಿನ್ನನ್ನು ಪೂಜಿಪೆವು
ಮೋದಕಾ ಪ್ರಿಯ ಸ್ವಾಮಿ ನಮ್ಮನ್ನು ಪೊರೆಯೋ
ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ
ಅರಿವಿನಾ ಹರವಿಲ್ಲ ಬುದ್ಧಿಯಾ ಬಲವಿಲ್ಲ
ಸಿರಿಕಂಠವೇ ನಮ್ಮ ಸಿರಿತನಾವೆಲ್ಲ
ಹರಪುತ್ರನೇ ನಿನ್ನ ಕರಮುಗಿದು ಬೇಡುವೆವು
ವರವಿನಾಯಕ ನಮ್ಮ ಹರಸು ತಂದೇ
ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ
ಇಂಪಾದರೂ ಕಿವಿಗೆ ಕೋಗಿಲೆಗಳಾ ಹಾಡು
ಅರಿವಿಲ್ಲವೇ ನಿನಗೆ ಪರಪುಟ್ಟರಾ ಪಾಡು
ವನಸುಮಗಳು ನಾವು ಮನವಿಟ್ಟು ಹಾಡುವೆವು
ಗಾನಪ್ರಿಯ ಗಣಪತಿಯೆ ಕಾಪಾಡು ದೊರೆಯೇ
ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ