ದೆವ್ವದ ಕತೆಗಳು.

ದೆವ್ವದ ಕತೆಗಳು.

ಮೊನ್ನೆ ಕೆ.ಪಿ.ಪಿ.ಯವರ "ಮಾಯಾಮ್ರುಗ" ಓದಿದಂದಿನಿಂದ ದೆವ್ವಗಳ ಬಗ್ಗೆ ತುಸು ಎನೋ ಕೌತುಕತೆ. ದೆವ್ವಗಳು ಇವೆಯಾ ಇಲ್ಲವಾ ಅನ್ನುವದಕಿಂತ ದೆವ್ವದ ಕತೆಗಳು ಕೇಳೋಕೆ, ಓದೋಕೆ ಬಾಳಾ ಮಜಾ. ನಾನು ಕೇಳಿದ ಕೆಲ ದೆವ್ವದ ಕತೆಗಳನ್ನು ಇಲ್ಲಿ ಹಂಚಿಕೊಳ್ಳೋಣ ಅಂತ.

ನನ್ನ ಗೆಳೆಯ ಶಂಕರ್ ಅವರದು ಬೇರೆಯಾಗದ ದೊಡ್ಡ ಕುಟುಂಬ. ಅವರದು ಟ್ರಕ್ಕುಗಳನ್ನು ಬಾಡಿಗೆಗೆ ಬಿಡುವ ದೊಡ್ಡ ಬಿಜಿನೆಸ್. ಒಂದು ಸಲ ಅವರ ಚಿಕ್ಕಪ್ಪ ಸರಿರಾತ್ರಿ ಟ್ರಕ್ಕಿನಲ್ಲಿ ಬರುವಾಗ, ಊರು ತಲುಪುವ ಹೊತ್ತಿಗಾಗಲೇ ನಡುರಾತ್ರಿ. ಟ್ರಕ್ಕನ್ನು ಆಪೀಸ್ ಹತ್ತಿರ ಬಿಟ್ಟು, ಮನೆ ಕಡೆ ನಡೆದುಕೊಂಡೇ ಹೊರಟಿದ್ದಾರೆ. ದಾರಿಯಲ್ಲಿ ಗುಡಿಯೊಂದರಲ್ಲಿ ಹೆಣ್ಣು ಮಗಳೊಬ್ಬಳು ಅಳುತ್ತ ಕೂತಿದ್ದಳು. ಇದ್ಯಾರು ಇಸ್ಟೊತ್ತಲ್ಲಿ ಇಲ್ಲಿ ಕೂತು ಅಳ್ತಿರೋದು ಅಂತ ನೋಡಿದ್ರೆ ಅವರ ತಂಗಿ! "ಯಾಕ್ ತಂಗಿ ಇಲ್ಲಿ ಅಳ್ತಾ ಕೂತಿದಿಯಾ, ಮನೇಗ್ ನಡಿ" ಅಂದ್ರೇ ಉತ್ತರಾನೆ ಇಲ್ಲ. ತಲೆ ಬಗ್ಗಿಸಿಕೊಂಡು ಆ ಹೆಂಗಸು ಅಳುತ್ತಲೇ ಇದ್ದಳು. ಇದ್ಯಾಕೋ ಎನೋ ಬೇರೇ ತರ ಇದೇ ಅನ್ನಿಸಿ ಅವರು ಸುಮ್ಮನೇ ಮನೇಗ್ ಬಂದಿದಾರೆ,ಆವರ ತಂಗಿ ಅಲ್ಲೇ ಇದಾಳೆ. ಆದರೂ "ಅದ್ಯಾಕೇ ಗುಡ್ಯಾಗ್ ಕುಂತ್ ಅಳಾಕತ್ತಿದ್ದಿ?" ಅಂತ ಕೇಳಿದ್ರು, "ಇಸ್ಟೋತ್ತಲ್ಯಾಕ್ ಅಣ್ಣಾ ಗುಡಿಗ್ ಹೊಗ್ಲಿ?" ಅಂದಳು ತಂಗಿ. ಅವರ ಚಿಕ್ಕಪ್ಪನಿಗೆ ಮೂರು ದಿನ ಫುಲ್ ಜ್ವರ!

ಇನ್ನೊಂದು ಬಿಜಾಪುರ, ಹಾಸನ, ಇನ್ನೂ ಹಲವಾರು ಕಡೆ ನಮ್ಮೂರಾಗ ನಡೆದದ್ದು, ನಮ್ಮೂರಾಗ್ ನಡೆದದ್ದು ಅಂತ ಸಕ್ಕತ್ ಫೇಮಸ್ ಆದ ಕತೆ.

ಅಟೋ ಡ್ರೈವರ್ ರಾಜುಗೆ ಅವತ್ತು ಜಾಸ್ತಿ ಕಲೆಕ್ಶನ್ ಆಗಿರಲಿಲ್ಲ. ಅದಕ್ಕೆ ದೂರದೂರುಗಳಿಂದ ಬರುವ ಬಸ್ಸುಗಳಿಂದ ಇಳಿಯುವ ಮಂದಿಗೆ ಸರಿರಾತ್ರಿಯಲ್ಲಿ ಅಟೋನೇ ಗತಿ, ಅದಕ್ಕೇ ತುಸು ಹೆಚ್ಚಿಗೇ ಹಣ ಕೇಳಬಹುದು ಅಂತ ಮನೆಗ್ ಹೊಗ್ದೇ ಕಾಯ್ತಿದ್ದ. ಎಸ್ಟೊತ್ತಾದ್ರೂ ಯಾವ ಬಸ್ಸೂ ಬರಲಿಲ್ಲ, ಬೇಸರವಾಯ್ತು, ನಿದ್ದೇ ಬೇರೇ ಎಳೀತಿತ್ತು, ಹಿಂಗಾಗಿ ಇನ್ ಕಾಯೋದ್ ಬೇಡ ಅಂತ ಹೊರಟ. ಸ್ಟಾರ್ಟ್ ಮಾಡಿ ಹೊರಡೋ ಅಸ್ಟೊತ್ತಿಗೇ ಹಿಂದಿನಿಂದ ಗಂಡಸೊಬ್ಬ ಓಡಿ ಬಂದು ಹತ್ತಿದ, ಆತ ಎಲ್ಲಿಂದ ಬಂದ ಅಂತಾನೇ ತಿಳಿಲಿಲ್ಲ. ಎಲ್ಲಿ ಹೋಗ್ಬೇಕು ಅಂತ ಕೇಳಿದ ರಾಜು. ಆತ ಇವನ ಏರಿಯಾ ಹೆಸರನ್ನೇ ಹೇಳಿದ. ಸರಿ ಒಳ್ಳೇದೇ ಆಯ್ತು ಅಂತ ಹತ್ತಿಸಿಕೊಂಡು ಹೊರಟ.
ದಾರಿಯಲ್ಲಿ ಹೆಣ್ಣು ಮಗಳೊಬ್ಬಳು ಕೂಸಿನೊಂದಿಗೆ ನಿಂತಿದ್ದಳು, ಅಡ್ಡ ಕೈ ಮಾಡಿದಳು. ಇವನಿಗೆ ತುಸು ಹೆದ್ರಿಕೇ ಆಯ್ತು, ಆದರೂ ಇನ್ನೊಬ್ಬ ಇರೋವಾಗ ಯಾಕೆ ಹೆದರ್ಬೇಕು ಅಂತ ನಿಲ್ಲಿಸಿದ. ಹಿಂದೆ ಕೂತಿದ್ದ ಗಂಡಸನ್ನು ಕರೆದು ತನ್ನ ಪಕ್ಕ ಕೂರಿಸಿಕೊಂಡು, ಆ ಹೆಣ್ಮಗಳನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಹೊರಟ.
ಹಾಗೆ ಹೋಗ್ತಿರಬೇಕಾದರೇ, ಆ ಹೆಂಗಸು ಎನೋ ಮಾಡುತ್ತಿರುವಂತೆ ಅನ್ನಿಸಿತು, ಮುಂದಿದ್ದ ಕನ್ನಡಿಯಲ್ಲಿ ನೋಡಿದ. ಅದನ್ನು ನೋಡಿ ಅವನ ಎದೆ ಒಂದು ಚಣ ನಿಂತಂತಾಯ್ತು. ಕೈ, ಕಾಲೆಲ್ಲ ತಣ್ಣಗಾಗಿ ನಡುಕ ಶುರು ಆಯ್ತು. ಆ ಹೆಂಗಸು ತನ್ನ ಮಗುವಿನ ಕೈ-ಕಾಲುಗಳನ್ನು ಕಿತ್ತುಕೊಂಡು ತಿನ್ನುತ್ತಿದ್ದಳು!!
ಹೇಗಾದ್ರು ಮಾಡಿ ಪಕ್ಕದವನಿಗೆ ಇದನ್ನು ಹೇಳಬೇಕು, ಆಗ ಇಬ್ಬರೂ ಒಟ್ಟಿಗೆ ಓಡಬಹುದು, ಅನಿಸಿತವನಿಗೆ.
ಆಗ ಮೆಲ್ಲಗೆ ಪಕ್ಕದವನ ಕಿವಿಯಲ್ಲಿ "ತುಸು ಹಿಂದೆ ನೋಡು" ಅಂದ. ಅದಕ್ಕವನು "ಅಲ್ಲೇನ್ ನೋಡ್ತಿಯೋ ಇಲ್ಲಿ ನೋಡು" ಅಂದ. ನೋಡಿದ್ರೇ ಅವನ ಬಾಯ್ತುಂಬ ಉದ್ದುದ್ದ ಕೋರೆ ಹಲ್ಲು!!

ಇದೊಂದು ಮಂದಿಯಿಂದ ಮಂದಿಗೆ ಹಬ್ಬಿದ್ದ ಕಟ್ಟುಕತೆ ಅಸ್ಟೆ, ಹೆದರಿಕೊಂಡ್ರಾ? :--)

Rating
No votes yet

Comments