ಸಂಚಿಕೆ ೧: ಅಂತರಜಾಲದ ಜಾಹಿರಾತುಗಳನ್ನು ದೂರವಿಡುವುದು...

ಸಂಚಿಕೆ ೧: ಅಂತರಜಾಲದ ಜಾಹಿರಾತುಗಳನ್ನು ದೂರವಿಡುವುದು...

ಬರಹ
illustration

ಅಂತರಜಾಲದಲ್ಲಿ ಏನೆಲ್ಲ ಮಾಹಿತಿ ಉಂಟು! ಆದರದನ್ನು ಸರಿಯಾಗಿ ಬಳಸುವುದು, ಸರಿಯಾಗಿ ತಲುಪುವುದು ತಿಳಿಯದೆಯೇ ಅದರ ಸಂಪೂರ್ಣ ಉಪಯೋಗ ಪಡೆಯುವುದು ಸಾಧ್ಯವಾಗದು. ಅಂತದ್ದೇ ಒಂದು ತಿಳುವಳಿಕೆ ಇತ್ತೀಚೆಗೆ ಹೆಚ್ಚಾಗಿರುವ ಜಾಹಿರಾತುಗಳನ್ನು ದೂರವಿಡುವುದರ ಗುಟ್ಟು. ಇದನ್ನರಿಯಲು ಹರಸಾಹಸವೇನೂ ಮಾಡಬೇಕಿಲ್ಲ, ಸರಿಯಾದ ತಂತ್ರಾಂಶಗಳನ್ನು ಸ್ವಲ್ಪ ಸಮಯೋಜಿತವಾಗಿ ಬಳಸಿರುವಿರಾದರೆ ನಿಮಗೆ ಈಗಾಗಲೇ ಇದರ ಬಗ್ಗೆ ಗೊತ್ತಿರುವ ಸಾಧ್ಯತೆಗಳೂ ಉಂಟು. ಈ ಗುಟ್ಟು ಈಗ ಗುಟ್ಟಾಗದೆ, ಹಲವರ ಬಳಕೆಯಲ್ಲಾಗಲೇ ಇರುವುದು ಒಳ್ಳೆಯ ಬೆಳವಣಿಗೆ. ಇದನ್ನೋದುತ್ತಿರುವ ಹಲವರಿಗೆ ಇವೆಲ್ಲದರ ಬಗ್ಗೆ ತಿಳಿದಿರೋದಿಲ್ಲವೆಂದು ಊಹೆ ಮಾಡಿ ಕೆಳಗಿನದ್ದನ್ನು ಬರೆದಿದ್ದೇನೆ. ಗೊತ್ತಿರುವವರು ಕೆಳಗೆ ನೀಡಿರುವ ಮಾಹಿತಿಯಲ್ಲಿ ತಪ್ಪುಗಳಿದ್ದಲ್ಲಿ ತಿದ್ದಿ. ಗೊತ್ತಿಲ್ಲದವರು ತಪ್ಪದೇ ಓದಿ, ಈ ಲೇಖನದಲ್ಲಿ ಮೂಡಿಬರುವ ತಂತ್ರಾಂಶಗಳನ್ನು ಒಮ್ಮೆ ಬಳಸಿ ನೋಡುವ ಸಾಹಸ ಮಾಡಿ. ಈ ತಿಳುವಳಿಕೆ ಬಹಳ ಉಪಯೋಗವುಳ್ಳದ್ದು. ನಿಮ್ಮ ಬ್ಯಾಂಡ್ವಿಡ್ತ್ ಕೂಡ ಉಳಿಯತ್ತೆ, ಜಾಹಿರಾತುಗಳ ಕಾಟವೂ ತಪ್ಪತ್ತೆ.

ಲೇಖನವನ್ನು ಹಲವು ಅಧ್ಯಾಯಗಳಂತೆ ಪ್ರತಿ ವಿಧಾನವನ್ನೂ ಒಂದೊಂದು ಸಂಚಿಕೆಯಾಗಿ 'ಸಂಪದ'ದಲ್ಲಿ ಹಾಕುತ್ತ ಬರುವೆ. ಇದರ ಉಪಯೋಗ ಪಡೆದವರು, ಲೇಖನ ಮೆಚ್ಚಿಕೊಂಡವರು, ಮೆಚ್ಚಿಕೊಳ್ಳದವರು - ಎಲ್ಲರೂ ತಪ್ಪದೇ ನಿಮ್ಮ ಕಾಮೆಂಟುಗಳನ್ನು ಸೇರಿಸಿ. ಇದ್ದ ಸಮಯದಲ್ಲಿ ಒಂದಷ್ಟನ್ನು ಇದಕ್ಕೆ ತೆರವುಗೊಳಿಸಿ ಬರೆದಿರುವೆ - ಅದು ಎಷ್ಟರಮಟ್ಟಿಗೆ ಸಾಕಾರವಾಗಿದೆಯೆಂಬುದು ಲೇಖನ ಪಡೆದ ಪ್ರತಿಕ್ರಿಯೆಯಿಂದ ತಿಳಿದುಬರುವುದು. ಧನ್ಯವಾದಗಳು.

******

ಅಂತರಜಾಲದ ಜಾಹಿರಾತುಗಳನ್ನು ದೂರವಿಡುವುದು...

ನಿಮ್ಮ ನೆಚ್ಚಿನ ತಾಣದಲ್ಲಿ ಜಾಹಿರಾತುಗಳ ಆಡಂಬರವೇ? ನಿಜವಾದ ಕಂಟೆಂಟ್‌ಗಿಂತ ಕಣ್ಣು ಕುಕ್ಕಿಸುವ ಬ್ಯಾನರುಗಳೇ ನೀವು ಓದುವ ಪುಟದಲ್ಲಿ ತಾಂಡವವಾಡುತ್ತವೆಯೇ? ವಿಪರೀತ 'heavy' ಯಾದ ಫ್ಲಾಶ್ ಜಾಹಿರಾತುಗಳು ನಿಮ್ಮ ಇಂಟರ್ನೆಟ್ ಕನೆಕ್ಷನ್ನಿನ ಬ್ಯಾಂಡ್ ವಿಡ್ತ್ ನುಂಗುತ್ತಿದೆಯೇ? ಹಾಗಿದ್ದಲ್ಲಿ ನೀವದನ್ನು ದೂರವಿಟ್ಟು ಅಂತಹ ತಾಣಗಳಲ್ಲಿ ನಿಮಗೆ ಬೇಕಾದ್ದನ್ನು ಮಾತ್ರ ನಿಮ್ಮ ಬ್ರೌಸರಿನಲ್ಲಿ ತೋರಿಸುವ ಹಾಗೆ ಮಾಡಬಹುದು!

"ನಿಜವೇ? ಹೇಗೆ?”
ಜಾಹಿರಾತುಗಳನ್ನು ದೂರವಿಡಲು ಆಕಾ ಜಾಹಿರಾತುಗಳನ್ನು ಬ್ಲಾಕ್ ಮಾಡ್ಲು ಬಹಳಷ್ಟು ವಿಧಾನಗಳಿವೆ. ಅದರಲ್ಲಿ ಕೆಲವು ವಿಧಾನಗಳನ್ನು ಕೆಳಗೆ ಸೂಚಿಸಿರುವೆ. ನಿಮಗೆ ಸುಲಭವೆನಿಸಿದ, ಸರಿ ಹೊಂದುವ ಯಾವುದಾದರೂ ವಿಧಾನವನ್ನುಪಯೋಗಿಸಬಹುದು. ಓದಿ.

ವಿಧಾನ – ೧:

ಫೈರ್ ಫಾಕ್ಸ್ ಎಂಬ ತಂತ್ರಾಂಶವೊಂದಿದೆ. ಅದು ನಿಮ್ಮಲ್ಲಿ ಬಹುಪಾಲು ಜನ ಉಪಯೋಗಿಸುವ (ವಿಂಡೋಸ್ ಆಪರೇಟಿಂಗ್ ಸಿಸ್ಟಮ್ಮಿನೊಂದಿಗೆ ಬರುವ) ಇಂಟರ್ನೆಟ್ ಎಕ್ಸ್‌ಪ್ಲೋರರ್ ತರಹದ ಒಂದು ಬ್ರೌಸರ್ (browser) ಅರ್ಥಾತ್ ಅಂತರಜಾಲ ಪುಟಗಳನ್ನು ವೀಕ್ಷಿಸಲು ಬಳಸಲಾಗುವ ತಂತ್ರಾಂಶ.

ಈ ತಂತ್ರಾಂಶವನ್ನು ನೀವು ಕೆಳಗಿನ ಸಂಪರ್ಕದಲ್ಲಿ ಪಡೆಯಬಹುದು:
[:http://getfirefox.com/]

ಫೈರ್ ಫಾಕ್ಸ್, ಯಾವುದೇ ತಾಣದಲ್ಲಿ ಇರುವ 'ಪಾಪ ಅಪ್ ವಿಂಡೋ'ಗಳನ್ನ ತಂತಾನಾಗಿಯೇ ಹುಗಿದು ಹಾಕುತ್ತದೆ. ಪುಟದೊಳಗೇ ಇರುವ ಜಾಹಿರಾತುಗಳಲ್ಲದೇ ಹಲವು ತಾಣಗಳು 'ಪಾಪ್ ಅಪ್' ಜಾಹಿರಾತುಗಳನ್ನು ತನ್ನ ವೀಕ್ಷಕರಿಗೆ ಉಣಬಡಿಸುತ್ತದೆ. ಇಂತಹವುಗಳನ್ನು ಫೈರ್ ಫಾಕ್ಸ್ ಮೂಲಕ ನೀವು ದೂರವಿಡಬಹುದು.

Firefox-adblock-1
firefox adblock

ಇದೇ ಬ್ರೌಸರಿನ 'extension' ಅಥವಾ 'add-on' ಆಡ್ ಬ್ಲಾಕ್ (adblock) ಎಂಬುದು. ಫೈರ್ ಫಾಕ್ಸ್ ಬ್ರೌಸರಿನ ಜೊತೆ ಸೇರಿಸಿ ಉಪಯೋಗಿಸಬಹುದಾದ ತಂತ್ರಾಂಶವಿದು. ಈ ತಂತ್ರಾಂಶ ಜಗತ್ತಿನ ಎಲ್ಲ ಉಚಿತ ಜಾಹಿರಾತು ಫಿಲ್ಟರುಗಳನ್ನು ತನ್ನೊಳಗೆ ಅಳವಡಿಸಿಕೊಂಡು ಪ್ರಮುಖ ಜಾಹಿರಾತು ವಾಹಿನಿಗಳನ್ನು ಅಡ್ಡಗಟ್ಟುತ್ತದೆ.

Firefox-adblock-2
click on the image for full view

ಫೈರ್ ಫಾಕ್ಸ್ ಬ್ರೌಸರು ತೆರೆದು [:https://addons.mozilla.org/extensions/moreinfo.php?id=10&application=firefox|ಈ ಸಂಪರ್ಕದ ಮೂಲಕ] ಈ ತಂತ್ರಾಂಶವನ್ನು ನೀವು ಇನ್‌ಸ್ಟಾಲ್ ಮಾಡಿಕೊಳ್ಳಬಹುದು.

 

 

Firefox-adblock-4
click on the image for full view

 

(ಮುಂದುವರೆಯುವುದು... )