ಮತ್ತ್ವೆ ’ಉ’ ’ಊ’ :)

ಮತ್ತ್ವೆ ’ಉ’ ’ಊ’ :)

http://sampada.net/forum/3067 ಮತ್ತು
http://sampada.net/blog/%E0%B2%B5%E0%B3%88%E0%B2%AD%E0%B2%B5/21/12/2007/6738
( ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ)
ಇಲ್ಲಿ ’ಊ’ ಮತ್ತು ’ಉಲ್ಲಿ’ ಕುರಿತ ಚರ್ಚೆ ಶುರುವಾಗಿ ಎಲ್ಲೆಲ್ಲೋ ಹೋಗಿತ್ತು .
ಸುನೀಲ ಜಯಪ್ರಕಾಶರು ’ಉ/ಊ’ದಿಂದ ಸಿದ್ಧ ಮಾಡಿದ ಪದವೊಂದನ್ನು ರ್ಯಾಂಡಂ ಗೆ ಬಳಸಬಹುದು ಎಂದು ಸೂಚಿಸಿದ್ದರು .
ಅವರು ಸೂಚಿಸಿದ ಉದಿತ - ಉದಯಿಸಿದ ಎಂಬರ್ಥದ ಶಬ್ದಕ್ಕೂ ಗೊಂದಲ ಉಂಟಾಯಿತು .. ಮತ್ತೆ ಈ ಉದು - ನಮ್ಮ ಕ್ರಿಯಾಪದಗಳಲ್ಲಿದೆ ಎಂಬ ಗ್ರಹಿಕೆಯೂ ನನಗೆ ಯಾಕೋ ಸರಿ ಕಾಣ್ತಿಲ್ಲ .

(ಈ ಮಾತು ಹೇಳುವಾಗ ನಾನು ವ್ಯಾಕರಣವನ್ನು ತಿಳಿದಿಲ್ಲ ಎಂಬುದನ್ನು ದಯವಿಟ್ಟು ಮರೆಯಬೇಡಿ. ನಾನು ಭಾಶೆಯನ್ನ ಬಳಕೆಯಿಂದಷ್ಟೇ ಬಲ್ಲೆ . ಅಧ್ಯಯನದಿಂದ ಅಲ್ಲ )

ಈಗ ನಾನು ಓದುತ್ತಿರುವ ’A Grammar of the Ancient Dialect of the Kannada Language - ಹಳಗನ್ನಡ ವ್ಯಾಕರಣ ಸೂತ್ರಗಳು’ ಎಂಬ ಹೆಸರಿನ ಕನ್ನಡ ಪುಸ್ತಕದಲ್ಲಿ ’ಊ’ ಕುರಿತಾದ ವಿಚಾರಕ್ಕೆ ಇಂಬು ಕೊಡುವ ಕೆಲವು ಶಬ್ದ
ಅವು, ಇವು , ಉವು
ಅವರು , ಇವರು , ಉವರು
ಅತ್ತ , ಇತ್ತ , ಉತ್ತ ,
ಅಂದು, ಇಂದು, ಎಂದು , ಉಂದು ,
ಅಂತಹ , ಇಂತಹ , ಉಂತಹ , ಎಂತಹ
ಅಂತಪ್ಪ , ಇಂತಪ್ಪ , ಉಂತಪ್ಪ , ಎಂತಪ್ಪ

ಇಂತಪ್ಪ ಉ/ಊ ಅನ್ನ ಮತ್ತೆಲ್ಲೆಲ್ಲಿ ಬಳಸಬಹುದೋ ನೋಡಿ .

Rating
No votes yet