ಒಂದು ಜೋಗಿ ಕತೆ ಕೇಳಿ

ಒಂದು ಜೋಗಿ ಕತೆ ಕೇಳಿ

ಇತ್ತೀಚೆಗೆ ’ಜೋಗಿಕತೆಗಳು’ ಸಣ್ಣಕಥಾಸಂಕಲನ ಓದಿದೆ .
ಅಲ್ಲಿನ ಒಂದು ಕತೆ , ಕೇವಲ ೩-೪ ಪುಟದ್ದಾದರೂ ಮರೆಯಲಾಗದ ಚಮತ್ಕಾರಿಕ ಕತೆ . ಅದನ್ನು ಓದಿ ಭರ್ತೃಹರಿಯ ವೈರಾಗ್ಯದ ಕತೆ ನೆನಪಾಯಿತು. ಇರಲಿ , ಈಗ ಕತೆ ಕೇಳಿ .
...
ಡಾಕ್ಟರು ಹೇಳ್ತಾ ಇದ್ದಾರೆ - ನೋಡಿ , ಆಕೆ ಹಾರ್ಟ್ ಪೇಷಂಟು , ಗಂಡ ಅಪಘಾತದಲ್ಲಿ ಸತ್ತ ಸುದ್ದಿ ಕೇಳಿ ಆಕೆಯ ಜೀವಕ್ಕೆ ಅಪಾಯ ಆಗಬಹುದು .
ಆದ್ರೆ ಸುದ್ದಿ ಹೇಳದೇ ಇರೋದು ಹೇಗೆ ? ಅಲ್ಲಿ ಇದ್ದ ಆಕೆಯ ಗೆಳತಿ ಈ ವಿಷಯವನ್ನು ಆಕೆಗೆ ಆಘಾತ ಆಗದ ಹಾಗೆ ತಾನು ತಿಳಿಸುವದಾಗಿ ಹೇಳುತ್ತಾಳೆ. ( ಅದು ಹೇಗೆ ಎಂದರೆ ೧. ಹಂತ ಹಂತವಾಗಿ ಸುದ್ದಿಯನ್ನು ತಿಳಿಸುವದು. ೨. ಗಂಡ ಅನ್ನೋ ಪ್ರಾಣಿ ಜೀವನದಲ್ಲಿ ನಡುವೆ ಬಂದೋನು . ಮೊದಲಿನಿಂದನೂ ಇರೋನಲ್ಲ ; ಹಾಗಾಗಿ ಹೆಚ್ಚು ದು:ಖಿಸಬಾರದು. ೩. ನನ್ನ ಗಂಡ ಸತ್ತರೆ ನಾನು ಹೇಗೆ ಎದುರಿಸುತ್ತೇನೆ ... ಅಂತೆಲ್ಲ )
ಸರಿ , ಇತರರನ್ನು ಹೊರ ರೂಮಿನಲ್ಲಿ ಬಿಟ್ಟು ಅವಳು , ಇವಳ ಮನೆಗೆ ಬಂದು ... ’ನಿನ್ನ ಗಂಡ ಇದ್ನಲ್ಲ ... ಅವನು ಆಕ್ಸಿಡೆಂಟಲ್ಲಿ ಸತ್ತು ಹೋದ’ ಎಂದು ಸುದ್ದಿಯನ್ನ ಬ್ರೆಕ್ ಮಾಡ್ತಾಳೆ . ಅವನನ್ನ ತಾನು ಮದುವೆ ಆಗಬೇಕಿತ್ತು , ಅದನ್ನು ತಪ್ಪಿಸಿ ಇವಳು ಮದುವೆ ಆಗಿದ್ದಳು ಎಂಬ ಆಕ್ರೋಶದಿಂದ .

ಇನ್ನು ಇವಳ ಪ್ರತಿಕ್ರಿಯೆ? - ’ಗೆಟ್ ಔಟ್ ’ ಎಂದು ಕಿರುಚಿ ಅವಳನ್ನು ಹೊರಹಾಕಿ ... ಅಂದ್ಕೋತಾಳೆ ... ಫೋನಲ್ಲಿ ಈ ವಿಷ್ಯ ಹೇಳಿದ್ರೆ ಕುಣಿದಾಡಿಬಿಡ್ತಿದ್ದೆ , ಪೀಡೆ ಸತ್ತು ಹೋಯಿತು , ಸದ್ಯ ಆಸ್ತಿ ಬಿಟ್ಟು ಹೋಗಿದ್ದಾನೆ , ಇನ್ನು ಹಾಯಾಗಿ ಇರಬಹುದು ..

ಗೆಳೆಯಂದಿರಲ್ಲೊಬ್ಬ ಹೊರ ಬಂದು ಫೋನ್ ಮಾಡ್ತಾನೆ - ನಿನ್ ಹೆಂಡ್ತೀಗೆ ಏನೂ ಷಾಕೇ ಆದ ಹಾಗಿಲ್ವೋ , ಇವಳು ಶಾಕ್ ಆಗದ ರೀತಿಯಲ್ಲಿ ಸುದ್ದಿ ಹೇಳಿ ಕೆಲ್ಸ ಕೆಡಿಸಿದಳು .
-- ’ಈಗ ಏನ್ ಮಾಡೋದು ?’
--’ಒಂದ್ ಕೆಲ್ಸ ಮಾಡು ,ಕೈಗೋ ಕಾಲಿಗೋ ಒಂದು ಬ್ಯಾಂಡೇಜ್ ಹಾಕ್ಕೊಂಡು ಮನೆಗೆ ಬಾ’

ಸರಿ ಅವನು ಹಾಗೇ ಮಾಡ್ತಾನೆ . ಹೆಂಡತಿ ನೆ೦ಟರಿಷ್ಟರ ಮುಂದೆ ಶೋಕಪಡುತ್ತಾ ಕುಳಿತಿದ್ದಾಳೆ.. ಅವನು ಬಂದು ’ ನಿನ್ನ ತಾಳಿ ಗಟ್ಟಿ ಇದೆ, ಕಣೇ, ಅಪಘಾತ ಆದ್ರೂ ನಂಗೇನೂ ಆಗ್ಲಿಲ್ಲ ’ ಅಂತಾನೆ .
ಹೆಂಡತಿ - ಹಾ ! ಎಂದು ಹೃದಯಾಘಾತದಿಂದ ಸತ್ತು ಹೋಗುವಳು.
ಗಂಡನಿಗೆ - ಆಗ ಸಂತೋಷವಾಗಿ ಅವನೂ ಸತ್ತು ಹೋಗುವನು .

ಅಲ್ಲಿರೋರೆಲ್ಲ ಈ ವಿಷಯನ ಎಲ್ಲೆಡೆ ಹೀಗೆ ಹೇಳಿ ಹಬ್ಬಿಸ್ತಾರೆ - ಗಂಡ ವಾಪಸ್ಸು ಬಂದ ಅಂತ ಹೆಂಡತಿ ಸಂತೋಷದಲ್ಲಿ ಸತ್ತುಹೋದಳು , ಹೆಂಡತಿ ಸತ್ತ ದುಃಖದಲ್ಲಿ ಗಂಡ ಸತ್ತು ಹೋದ . ಅಂತ . ಕೇಳಿದೋರು ’ ಎಂಥಾ ಪರಸ್ಪರ ಪ್ರೀತಿಯ ಗಂಡ ಹೆಂಡತಿ ! ಇದ್ದರೆ , ಹೀಗಿರ್ಬೇಕು ! . ಅಂತಾರೆ .

Rating
No votes yet

Comments