ಕರ್ನಾಟಕ ಅಂದ್ರೆ ಯೇನು ಅಂತಹೇಳೋದೆ ಕಷ್ಟ ಆಗಿದೆ !

ಕರ್ನಾಟಕ ಅಂದ್ರೆ ಯೇನು ಅಂತಹೇಳೋದೆ ಕಷ್ಟ ಆಗಿದೆ !

ಬರಹ

ಅರಾಜಕತೆ, ಅನಿಶ್ಚತೆಯ ಬೀಡೇ, ಅಥವಾ ಅತಿ ಹೆಚ್ಚು ಜ್ಞಾನಪೀಠಪ್ರಶಸ್ತಿವಿಜೇತರ ನಾಡೇ, ಸ್ವಾರ್ಥಿ, ವಿವಾದಾಸ್ಪದ ರಾಜಕಾರಣಿಗಳ ತಾಣವೇ ? ಇವೆಲ್ಲವೂ ಹೌದು. ಮತ್ತೆ ಇನ್ನೂ ಏನೇನೋ !

ಕರ್ನಾಟಕ ಇತಿಹಾಸದಲ್ಲಿ ಬಡ ಶಾಲಾಮಾಸ್ತರ ಮಗನೊಬ್ಬ, ಕನ್ನಡಿಗ, ತನ್ನ ಕನಸನ್ನು ನೇಯ್ದು, ಸಾಕಾರದ ವಸ್ತ್ರವನ್ನು ಜನತೆಗೆ ಕೊಟ್ಟು, ಸುಮಾರು ೮೨,೦೦೦ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿ, ದೇಶವಿದೇಶಗಳ, ಜಾಣ-ಜಾಣೆಯರ ರೋಲ್ ಮಾಡೆಲ್ ಆಗಿದ್ದರೂ, ನಮ್ಮಜನತೆಗೆ ಅದನ್ನು ಅರ್ಥಮಾಡಿಕೊಳ್ಳಲುಸಾಧ್ಯವಾಗುವುದು ಕಷ್ಟ. ಏಕೆ ಹೀಗೆ ?

ಈ ಪರಿಸ್ಥಿತಿ, ಖಂಡಿತ ಮಹಾರಾಷ್ಟ್ರದಲ್ಲಿಲ್ಲ. ಯಾವ ವ್ಯಕ್ತಿಯಲ್ಲಿ ಅಂಥ ಸದ್ಗುಣಗಳಿವೆಯೋ ಅವನನ್ನು ಅವರು ಶ್ಲಾಘಿಸುತ್ತಾರೆ. ತಮಿಳರೂ ಅಷ್ಟೆ. ಕನ್ನಡಿಗರಿಗೆ ಆ ವಿಶಾಲ ಬುದ್ಧಿ ಹಾಗೂ ಮಾನಸಿಕ ಪ್ರೌಢಿಮೆ ಬರುವುದೆಂದು ?

ಇನ್ನುಮೇಲಾದರೂ ಅದರ ಬಗ್ಗೆ ಚಿಂತಿಸುವ ಪ್ರಕ್ರಿಯೆ ಶುರುವಾದರೆ ಕ್ಷೇಮ. ಜಾತಿಮತಗಳ ಅಂಧಕಾರದಿಂದ ಮೇಲೆದ್ದು ಗುಣಗ್ರಾಹಿಗಳನ್ನು ಗುರುತಿಸಿ, ಕಚ್ಚಾಡುವುದನ್ನು ಬಿಟ್ಟು, ಮುಂದೆಬರಲು ನಾಗಾಲೋಟಮಾಡಿದರೂ, ನಾವು ಉಳಿದ ಭಾರತೀಯರಿಗಿಂತ ಹಿಂದೆಯೇ ಇರುವ ಸಂದರ್ಭವನ್ನು ಎದುರಿಸುತ್ತಿದ್ದೇವೆ. ಅದರಿಂದ ಹೊರಗೆಬರಲು ಪ್ರಯತ್ನಿಸೋಣ.