ಆಡಳಿತ ಭಾಷೆ vs ರಾಷ್ಟ್ರಭಾಷೆ

ಆಡಳಿತ ಭಾಷೆ vs ರಾಷ್ಟ್ರಭಾಷೆ

ಗಣರಾಜ್ಯೋತ್ಸವದ ದಿನ ದೂರದರ್ಶನ ನೋಡುತ್ತಿರುವಾಗ ಯಾವುದೋ ಹಾಡಿನಲ್ಲಿ "ಹಿಂದಿ" ಅನ್ನೋ ಪದದ ಬಳಕೆಯಾಯಿತು. ನಾನು ಆ ಪದದ ಬಳಕೆ, ಆ ಹಾಡಿನಲ್ಲಿ, ತಪ್ಪು ಅಂತ ಆಕ್ಷೇಪಿಸಿದೆ. ನನ್ನ ಮತ್ತು ನನ್ನ ಸಂಬಂಧಿಯ ನಡುವೆ ನಡೆದ ವಾದ ಇಂತಿದೆ :
ಸಂಬಂಧಿ: " ಸರಿಯಾಗಿದೆ ಇಲ್ಲಿ ಹಿಂದಿನೇ ಬರಬೇಕು "
ನಾನು: " ಇಲ್ಲ ಈ ಹಾಡಿನಲ್ಲಿ ಹಿಂದಿ ಶಬ್ಧದ ಬಳಕೆ ತಪ್ಪು "
ಸಂಬಂಧಿ: " ಹಿಂದಿ ನಮ್ಮ ರಾಷ್ಟ್ರಭಾಷೆ ಹಾಗಾಗಿ ಸರಿಯಿದೆ"
ನಾನು: " ಅಯ್ಯೋ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ . ಭಾರತ ಸಂವಿಧಾನದಲ್ಲಿ ಆಡಳಿತ ಭಾಷೆಯನ್ನು ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಂಗಡಿಸಿದ್ದಾರೆ. ಹಿಂದಿ ಬರೀ ನಮ್ಮ ಯೂನಿಯನ್ನಿನ ಆಡಳಿತ ಭಾಷೆ"
ಸಂಬಂಧಿ: " ನೀವು ಸೌತ್ ಇಂಡಿಯನ್ಸ್ ಗೆ ಹಿಂದಿ ಅಂದ್ರೆ ಇಷ್ಟ ಇಲ್ಲ ಅದಿಕ್ಕೆ ಇಲ್ಲದೆ ಇರೋ ತಕರಾರು ತೆಗಿತ್ತೀರ. ಹಿಂದಿ ಹೆಚ್ಚು ಜನಕ್ಕೆ ಮಾತಾಡೋದಿಕ್ಕೆ ಬರತ್ತೆ ಹಾಗೇನೇ ಅರ್ಥಾನು ಆಗತ್ತೆ." (ಇವರು ೨೦-೩೦ ವರ್ಷದಿಂದ ಉತ್ತರ ಭಾರತದಲ್ಲೇ ಇದ್ದರು)
ನನಗೂ ರೆಗೋಗಿತ್ತು.....
ನಾನು: " ಅದ್ಯಾಕೆ ಹಾಗಂತ್ತೀರಾ, ನೀವೇ ಭಾರತಾನಾ ಈ ರೀತಿ ವಿಭಜನೆ ಮಾಡ್ತ್ತಿದ್ದಿರ. ದಕ್ಷಿಣದವರಿಗೆ ಹಿಂದಿ ಅರ್ಥಾನು ಆಗತ್ತೆ ಮಾತಾಡೊದಿಕ್ಕೂ ಬರತ್ತೆ ಅದೊಂದೇ ಅಲ್ಲ ಇನ್ನಿತ್ತರ ಭಾಷೆಗಳನ್ನು ಸ್ಪಷ್ಟವಾಗಿ ಮತಾಡುತ್ತೇವೆ. ಎಷ್ಟು ಜನ ಉತ್ತರ ಭಾರತದವರು ದಕ್ಷಿಣ ಭಾರತದ ಭಾಷೆಗಳನ್ನು ಮಾತಾಡಬಲ್ಲರು? (ಇದಕ್ಕೆ ಅಪವಾದವೆಂಬಂತೆ ನನ್ನ ಮ್ಯಾನೇಜರ್ ಉತ್ತರ ಭಾರತದವರು. ಅವರು ಕನ್ನಡ ಕಲಿಯುತ್ತಿದ್ದಾರೆ :-) . ) ಹಲವರಿಗೆ ದಕ್ಷಿಣ ಭಾರತದವರು ಅಂದ್ರೆ ಮದ್ರಾಸಿ ಅಷ್ಟೇನೆ. ಹೆಚ್ಚು ಜನಕ್ಕೆ ಅರ್ಥಾ ಆಗೊ ಭಾಷೆ ಅಂದ್ರಲ್ಲಾ ಹಾಗಾದ್ರೆ ಆಂಗ್ಲ ಭಾಷೆ ಇನ್ನೂ ಹೆಚ್ಚು ಜನಕ್ಕೆ ಅರ್ಥಾ ಆಗತ್ತೆ, ಹಾಗಂದ ಮಾತ್ರಕ್ಕೆ ಆಂಗ್ಲ ಭಾಷೇನ ರಾಷ್ಟ್ರ ಭಾಷೆ ಮಾಡುವುದಕ್ಕೆ ಸಾಧ್ಯಾನಾ?ಈ ಕಾರಣಕ್ಕೆ ಹಿಂದಿ ರಾಷ್ಟ್ರ ಭಾಷೆ ಹೇಗಾಗತ್ತೆ? "
ಸಂಬಂಧಿ: " ನೀನು ಏನೇ ಹೇಳು ನಂಗೆ ಗೊತ್ತು ನೀವು ಹೀಗೇನೆ. ಹಿಂದಿನೇ ರಾಷ್ಟ್ರ ಭಾಷೆ"
ಅವರು ತಮ್ಮ ಮಿತ್ರವ್ರುಂದಕ್ಕೆ ಕರೆ ಮಾಡಿ ಅವರೂ ಹಾಗೆ ಹೇಳ್ತಿದ್ದಾರೆ ಅಂದ್ರು. ಅವರಿಗೆ ನಮ್ಮ ಅಂತರ್ಜಾಲದಿಂದ ಕೆಲವೊಂದು ತಾಣಗಳನ್ನೂ ತೋರಿಸಿ ಅರ್ಥ ಮಾಡಿಸಿದೆ. ಹಾಗೇನೇ ನಿಮ್ಮ ಮಿತ್ರರಿಗೂ ತಿಳಿಸಿ ಅಂದೆ. ಅವರು ತಮ್ಮ ತಪ್ಪನ್ನು ತಿದ್ದಿಕೊಂಡರು.ನಮ್ಮ ಭಾಷೆಯ ಬಗ್ಗೆ ನಮ್ಮವರಿಗೆ ಸಾಕ್ಷಿ ತೋರಿಸಬೇಕಾಗಿರುವುದು ಎಂಥಹ ದುರ್ದೈವದ ಸಂಗತಿ ಅಲ್ವ :-(
ಹೀಗೆ ನಮಲ್ಲಿ ಇಂತಹ ಬೇಕಾದಷ್ಟು ಜನರಿದ್ದಾರೆ. ಅದ್ಯಾಕೋ ನಮ್ಮ ಮಾತೃಭಾಷೆ ಬಿಟ್ಟು ಅವರಿಗೆ ಹಿಂದಿ ಮೇಲೇ ಒಲವು ಜಾಸ್ತಿ. ನಾವು ಯಾವ ಭಾಷೆ ದೊಡ್ಡದು ಅಥವಾ ಸಣ್ಣದು ಅಂತ ವಾದ ಮಾಡ್ತಿಲ್ಲ ಹಾಗೇನೇ ನಮ್ಮ ಭಾಷೆ ಬಗ್ಗೆ ಕೀಳರಿಮೇನೂ ಬೇಡ.
ಒಂದು ಚರ್ಚಾ ಸ್ಪರ್ಧೆಯಲ್ಲಿ ಒಬ್ಬ ಸ್ಪರ್ಧಿ ಹೇಳಿದ್ದು ನನಗಿನ್ನು ಜ್ಞಾಪಕವಿದೆ " ನಮ್ಮ ಮಾತೃಭಾಷೆಗೆ ಸಲ್ಲಬೇಕಾದ ಸಕಲ ಗೌರವ ಸಲ್ಲಲಿ. ಅವಳಿಗೆ ಅಗ್ರ ಸ್ಥಾನ ಸಿಗಲಿ.ಹಾಗೇನೇ ಇನ್ನಿತರ ಭಾಷೆಗಳು ಅವಳ ದಾಸಿಯಾಗದೆ ಸಖಿಯರಂತೆ ಜೊತೆಗಿರಲಿ"

Rating
Average: 1 (1 vote)

Comments