ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು

ಹೆಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆ ರದ್ದು

ಬರಹ

ಮಾಜಿ ಸಚಿವರಾದ ಹೆಚ್. ವಿಶ್ವನಾಥ್ ರ ಜೀವನ ಚರಿತ್ರೆ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದ ಬಿಡುಗಡೆಯು ಇಂದು ಅಂದರೆ ೨೮ನೇ ಜನವರಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆಯಬೇಕಿತ್ತು. ಯು.ಆರ್. ಅನಂತ ಮೂರ್ತಿ ಅವರು ಬಿಡುಗಡೆ ಮಾಡಲಿದ್ದರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ.ಸಿದ್ಧರಾಮಯ್ಯನವರು ಭಾಗವಸಿಲಿದ್ದರು.

ಆದರೆ ಎಸ್. ಎಂ. ಕೃಷ್ಣ ಅವರ ಬೆಂಬಲಿಗರು ಮಾಡಿದ ಪ್ರತಿಭಟನೆಯಿಂದಾಗಿ, ಮಿಡುಗಡೆ ಸಮಾರಂಭವನ್ನು ರದ್ದು ಮಾಡಲಾಯಿತು. ಇದಕ್ಕೆಲ್ಲ ಕಾರಣ ಮಿಡ್ ಡೇ ಎನ್ನುವ ಪತ್ರಿಕೆ. ಮತ್ತು ಟಿ.ವಿ.೯ ಕರ್ನಾಟಕ ಚಾನಲ್. ಇಲ್ಲ ಸಲ್ಲದ ವಾರ್ತೆಯನ್ನು ಬಿತ್ತರಿಸಿದ್ದರಿಂದ ಹೀಗಾಯಿತು ಎಂಬುದು ನನ್ನ ಅನಿಸಿಕೆ.