ಇವನೇ..ಅವನು!!
“ಏನು ಡಯಲಾಗ್ ಹೇಳುತ್ತಾನೋ? ಫುಲ್‌ಸ್ಟಾಫ್ ಇಲ್ಲ,ಕೊಮಾ ಇಲ್ಲ,..” ಫೌಜಿ ಟಿ.ವಿ ಸೀರಿಯಲ್‌ನ ಹುಡುಗನ ಬಗ್ಗೆ ಹೇಳಿದ್ದೆ.ಅಲ್ಲಿಂದ ಅದೇ ರೀತಿ ಡಯಲಾಗ ಡೆಲಿವರಿ ಮಾಡುತ್ತಾ ಫುಲ್‌ಸ್ಟಾಫ್ ಇಲ್ಲದೇ ಬೆಳೆದ-ಗುಳಿ ಬೀಳುವ ಗಲ್ಲದ ಹುಡುಗ-ಶಾರುಕ್ ಖಾನ್ (ಈಗ ಸಿಕ್ಸ್ ಪ್ಯಾಕ್ ಯುವಕ).
“ಈ ಸ್ಟೈಲ್‌ಗಳೆಲ್ಲಾ ಒಂದೆರೆಡು ಸಿನೆಮಾಕ್ಕೆ. ನಂತರ ಜನರಿಗೂ ಬೋರಾಗುವುದು.” ಎಂದಿದ್ದೆ. ಸಹೋದರರ ಸವಾಲ್‌ನ ಸ್ಟೈಲ್‌ಕಿಂಗ್‌ನ ಅದೇ ಸ್ಟೈಲ್‌ಗಳನ್ನು ‘ಶಿವಾಜಿ’ timeಗೂ ಕಾಳಸಂತೆಯಲ್ಲಿ ಸಾವಿರಾರು ರೂ ಕೊಟ್ಟು ನೋಡಿದರು.
“ತೋತಾಪುರಿ ತರಹ ಮುಖವಿದೆ,ಇವನೆಂತಹ ಹೀರೋ?”- ‘ನಾಮ್’( ಸಂಜಯ್ ದತ್‌ನ ಮೊದಲ ಸಿನೆಮಾ) ನೋಡಿ ನನ್ನ ಗೆಳೆಯ ಹೇಳಿದ್ದ. ‘ ಮುನ್ನಾಬಾಯಿ.. ೫ ಬಾರಿ ನೋಡಿದೆ. ನೀನೂ ನೋಡು’ ಎಂದು ಇತ್ತೀಚೆಗೆ ಫೋನ್ ಮಾಡಿದ್ದ ನನ್ನ ಅದೇ ಗೆಳೆಯ.
“ಎಷ್ಟು ಕೆಟ್ಟದಾಗಿ ನಮಸ್ಕಾರ,ನಮಸ್ಕಾರ,ನಮಸ್ಕಾರ ಮಾಡುತ್ತಾನೆ.ಯಾಕ್ ಹೀಗೆ ಅವನಿಗೆ ಇಷ್ಟಿಷ್ಟುದ್ದ ಪತ್ರ ಬರೆಯುತ್ತಾರೆ.” ಎಂದಿದ್ದೆ ಕಾಮೆಡಿ ಟೈಮ್ ಸೀರಿಯಲ್ ನೋಡುತ್ತಾ. ಮೂರು ಬಾರಿ ಹೋದರೂ ಅವನ ಸಿನೆಮಾಕ್ಕೆ ಟಿಕೆಟ್ ಸಿಕ್ಲಿಲ್ಲ.
ಇವರಲ್ಲದೇ ಇತರ ವೃತ್ತಿಗಳಲ್ಲಿರುವ ಇನ್ನೂ ಅನೇಕ ಜನ, ಸಾಮಾನ್ಯರಿಂದ ಕೆಲವೇ ವರ್ಷಗಳಲ್ಲಿ ಅಸಮಾನ್ಯರಾಗಿರುವರು.
ಯಾರನ್ನೂ ಹೊಸದರಲ್ಲಿ ಹೀಗಳೆಯುವುದು,ತಮಾಷೆ ಮಾಡುವುದು ಸರಿಯಲ್ಲ. ಮುಂದೆ ಅವರು ಟಾಟಾ,ಬಿರ್ಲಾ,ಆಮೀರ್ ಖಾನ್,ಸಚಿನ್, ನೆಹರು,ಗಾಂಧಿ, ಮದರ್ ಥೆರೆಸಾ,..ರನ್ನು ಮೀರಿಸುವಂತಹರಾಗಬಹುದು.
Comments
ಉ: ಇವನೇ..ಅವನು!!
In reply to ಉ: ಇವನೇ..ಅವನು!! by venkatb83
ಉ: ಇವನೇ..ಅವನು!!
In reply to ಉ: ಇವನೇ..ಅವನು!! by venkatb83
ಉ: ಇವನೇ..ಅವನು!!