ನಾಗನ ಪೂಜೆಯ ತಾಣದಲ್ಲಿ... ವಾರ್ಷಿಕ ಜಾತ್ರೆ..
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.೧ ರಂದು ವಾರ್ಷಿಕ ಜಾತ್ರೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ ನಡೆಯಿತು.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡರು.
ಈ ದೇವಸ್ಥಾನವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ನಾಗ ದೋಷ ನಿವಾರಣೆಗೆ ಪ್ರಸಕ್ತವಾದ ಸ್ಥಳವಾಗಿದೆ.ಇಲ್ಲಿ ಆಶ್ಲೇಷ ಬಲಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ.ಸದ್ಯ ಈ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಮುಂದೆ ನೂತನ ಸಭಾಭವನ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಭಕ್ತಾಭಿಮಾನಿಗಳ ಸಹಕಾರವನ್ನು ಆಡಳಿತವು ಕೋರಿದೆ.
ದೇವಳದ ಸಂಪರ್ಕಕ್ಕೆ :08257-282600