ಕನ್ನಡದಲ್ಲಿ ಹೆಚ್ಚುತ್ತಿರುವ 'ಹಿಪ್-ಹಾಪ್' ಹಾಡುಗಳು
ಇವತ್ತು ಟಿವಿ೯ ನೋಡ್ತಾ ಇದ್ದೆ. ಅಲ್ಲಿ ಮೂರ್ನಾಲ್ಕು ಕಾಲೇಜು ಹುಡುಗರನ್ನು ಮಾತಾಡಿಸುತ್ತಿದ್ದರು. ಕನ್ನಡದಲ್ಲಿ ಹಿಪ್-ಹಾಪ್ ಸಿಡಿ ಬಿಡುಗಡೆಯಾಗಿದೆ. ಹೆಚ್ಚು ಕಾಲೇಜು ಹುಡುಗರ ಬಾಯಲ್ಲಿ ಕನ್ನಡ ಹಿಪ್-ಹಾಪ್ ಹಾಡುಗಳು ನಲಿಯುತ್ತಿದೆ ಅಂತ ಬಿತ್ತರಿಸಲಾಗುತ್ತಿತ್ತು. ಅದು ನೇರ ಬಿತ್ತರದ ಕಾರ್ಯಕ್ರಮವಾಗಿದ್ದರಿಂದ ಹಲವು ಮಂದಿ ಅವರಿಗೆ ಕರೆ ಮಾಡಿ 'ಸವಿಯೊದಗು' ಹೇಳುತ್ತಿದ್ದರು. ಅದರಲ್ಲಿ ಕೆಲವರು ಕನ್ನಡದಲ್ಲಿ ಹಿಪ್-ಹಾಪ್ ಮಾಡಲು ಓಸುಗರ ಏನು ಅಂತ ಕೇಳುತ್ತಿದ್ದರು. ಹಿಪ್-ಹಾಪ್ ಹಾಡುಗಳನ್ನು ಬರೆದ ಕಾಲೇಜು ಹುಡುಗನೊಬ್ಬ 'ನಾವು ಕನ್ನಡಿಗರು, ಕನ್ನಡನ ಬೆಂಗಳೂರಿನ ಪಬ್ ಗಳಲ್ಲಿ ಕೇಳ್ಬೇಕು,ಕೇಳಿಸ್ಬೇಕು' ಅಂತೆಲ್ಲ ಹೇಳುತ್ತಿದ್ದ. ಅವರು ಕೆಲವು ಹಾಡುಗಳನ್ನು ನೇರ ಕಾರ್ಯಕ್ರಮದಲ್ಲಿ ಹಾಡಿದರು. ಅವರು ಬಿಡುಗಡೆಗೊಳಿಸಿದ ಆಲ್ಬಮ್ಮಿನಲ್ಲಿ ಒಂದು ಹಾಡನ್ನು ಜಯಂತ ಕಾಯ್ಕಿಣಿ ಬರೆದಿದ್ದಾರಂತೆ!!! ಏನೇ ಇರಲ್ಲಿ, ಇವರ ಕನ್ನಡದೊಲವು ಮತ್ತು ಕನ್ನಡದೆಚ್ಚರ ನಂಗೆ ಸಂತಸವನ್ನೀಯಿತು. ಅವರು ಇನ್ನು ಹೆಚ್ಚು ಬೇರೆ ತರದ ಕನ್ನಡ ಹಾಡುಗಳನ್ನು ಹಿಪ್-ಹಾಪ್ ಗೆ ಅಳವಡಿಸಿ ಅವನ್ನು ಹುಡುಗರ ಬಾಯಲ್ಲಿ ನಲಿಸಲ್ಲು ಅಣಿಯಾಗುತ್ತಿದ್ದಾರಂತೆ. ಇದರಿಂದ ಇವತ್ತು ಹುಡುಗರು ಹಿಂದಿ-ಇಂಗಲೀಸ್ ಹಾಡುಗಳನ್ನು ಕೇಳುವುದು ಬಿಟ್ಟು ಕನ್ನಡದ ಹಾಡುಗಳನ್ನು ಕೇಳಲು ಮುಗಿಬೀಳುತ್ತಿದ್ದಾರಂತೆ.
ಸಿರಿಗನ್ನಡಂ ಗೆಲ್ಗೆ.
Comments
ಉ: ಕನ್ನಡದಲ್ಲಿ ಹೆಚ್ಚುತ್ತಿರುವ 'ಹಿಪ್-ಹಾಪ್' ಹಾಡುಗಳು
ಉ: ಕನ್ನಡದಲ್ಲಿ ಹೆಚ್ಚುತ್ತಿರುವ 'ಹಿಪ್-ಹಾಪ್' ಹಾಡುಗಳು