ಮನಸ್ಸಿನ ಆಳದಲ್ಲಿ...

ಮನಸ್ಸಿನ ಆಳದಲ್ಲಿ...

ಬರಹ

ದೀಪವು ಉರಿಯುವುದು ತನ್ನ ಒಡಲು ಎಣ್ಣೆಯಿಂದ ತುಂಬಿರುವ ತನಕ, ಮನಸ್ಸು ಮೌನದಿಂದ
ಉಳಿಯುವುದು ತಾನು ಯೋಚನೆಯ ಸುಳಿಗೆ ಸಿಲುಕಿದಾಗ. ಆಸೆಯನ್ನೇ ಜೀವವಾಗಿ ಇಟ್ಟುಕೊಂಡು
ಬದುಕುವ ಈ ಮನಸ್ಸು ಯಾವಾಗಲು ತನ್ನ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಆಸೆ.

ಬದುಕೆಂಬ ದೋಣಿಯಲ್ಲಿ, ಸಾಗರವನ್ನು ಜೀವನವನ್ನಾಗಿ, ಹರಿಗೋಲು ಮನಸ್ಸಾದರೇ
ಅದನ್ನು ನಿಯಂತ್ರಿಸಲು ಆಸೆ ಬೇಕು. ಆಸೆ, ಕಿಚ್ಚು, ಸಾಧನೆ ಮೂರು ಮನುಷ್ಯನು ತನ್ನ
ಗುರಿ ಮುಟ್ಟಲು ಅವಶ್ಯ. ಕಿಚ್ಚು ಎಂದರೆ ನಕಾರಾತ್ಮಕ ಅರ್ಥದ ಬದಲು ಹುಮ್ಮಸ್ಸು
ತುಂಬುವ ಭಾವವಾಗಬೇಕು.

ಈ ಸಾಗರದ ಜೀವನದಲ್ಲಿ ಶ್ರಮವಿಲ್ಲದೆ, ಏನು ಪ್ರಯತ್ನವಿಲ್ಲದೆ, ಎಷ್ಟೋ ಬೇಕು
ಬೇಡವಾದ ಕೆಲಸಗಳು ಬಹಳಸಲ ತನಂತಾನಾಗೆ ಅದೃಷ್ಟವೋ ಎಂಬಂತೆ ನಡೆದು
ಹೋಗುತ್ತದೆ. ಇದಕ್ಕೆ ವಿರುದ್ಧವಾಗಿ ಯೋಚಿಸಿದರೆ, ಬಹಳ ಕಷ್ಟಪಟ್ಟು, ಪ್ರತಿಯೊಂದು
ಹಂತದಲ್ಲು ತಮ್ಮ ಬೆವರು ಸುರಿಸಿ ತಮ್ಮ ಆಸೆ ಅಥವಾ ಸಾಧನೆಯನ್ನು ಮುಟ್ಟುವ
ಸಂದರ್ಭಗಳು ಉಂಟು.

ನೀರಿನಲ್ಲಿ ಮುಳುಗಳು ಆಗದೆ, ಮೇಲೆ ತೆಲುವುದಕ್ಕು ಆಗದೆ, ಇತ್ತಕಡೆ
ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗದೆ, ಗೊತ್ತಿಲ್ಲದೆ ಇನ್ನೊಂದರ ಕಡೆಗಿನ ಗಮನ,
ದುಡಿಮೆ ಸಾಗುತ್ತದೆ, ಜೊತೆಗೆ ಸಾಧಿಸಲು ಸಾಧ್ಯವಾಗದ ಗುರಿಯ ಕಡೆ ಜೀವನವಿಡೀ
ಒಂದು ಕಣ್ಣಿಟ್ಟು, ಮಾಡುವ ಕೆಲಸಕ್ಕೆ ಅರ್ಧ ಶ್ರಮವಿಟ್ಟು, ಎಲ್ಲಿಯೂ ಸಲ್ಲದೆ, ನಾನು
ಇದ್ದೆ ಎಂಬ ಭಾವನೆಯೊಂದಿಗೆ ಜೀವನ ಕಳೆದುಹೋಗುತ್ತದೆ.

ಈ ರೀತಿ ಏಕಾಗಾಬಾರದು...? ಬರೀ, ಒಂದು ಮುಖದ ನಾಣ್ಯದ ಅದೃಷ್ಟ ಪರೀಕ್ಷೆ ಏಕೆ...?

ಏನು ಕಷ್ಟಪಡದೆ, ಅದೃಷ್ಟವನ್ನೆ ಅವಲಂಬಿಸಿ ಬದುಕಲಾರೆವು, ಸೋಮಾರಿತನದ ಬದುಕು
ರುಚಿಯಿಲ್ಲದ ಊಟದ ಹಾಗೆ, ಶ್ರಮಪಟ್ಟರೆ ರುಚಿಯಾದ ಊಟ, ಇಲ್ಲವಾದರೇ ಪ್ರತಿನಿಮಿಶವು
ಚಾವಟಿಯ ಪೆಟ್ಟಿನಂತ ಹಸಿವಿನ ಸಂಕಟ.

ಶ್ರಮದ ಮುಂದೆ, ಕಷ್ಟಪಡುವವರ ಮುಂದೆ ಬೇರೇನು ಇಲ್ಲ, ಬೇರಾರು ಇಲ್ಲ, ಆ ಶ್ರಮದ ಹಿಂದೆ
ಸ್ವಲ್ಪ ಆ ಭಗವಂತನ ಕೃಪೆ ಅದೃಷ್ಟವಾಗಿ ಪರಿಣಮಿಸಿದರೆ ಶ್ರಮಪಟ್ಟಿದವ ಸ್ವರ್ಗಕ್ಕೆ
ದಾರಿಯನ್ನು ನಿರ್ಮಿಸಿಕೊಂಡಂತೆ. ಎಷ್ಟೋ ಭಾರಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರಬಹುದು,
ಅದು ನಿಮ್ಮ ಮನಸ್ಸನ್ನು ಮತ್ತಷ್ಟು ದೃಢಪಡಿಸುವುದಕ್ಕೆ, ಮತ್ತಷ್ಟು ಬೆಳವಣಿಗೆಗೆ ಕಾರಣವಷ್ಟೆ
ಹೊರತು ಬೇರಾವುದ್ದಕ್ಕು ಅಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಕಾಲಚಕ್ರದ ನಿಯಮದ ಪ್ರಕಾರ
"ಮೇಲಿದ್ದವನು ಕೆಳಗೆ, ಕೆಳಗಿದ್ದವನು ಮೇಲಕ್ಕೆ" ಹೀಗೆ ಪರಿವರ್ತನೆ ಆಗಲೇಬೇಕು.

ಇನ್ನೂ, ಅದೃಷ್ಟವನ್ನು ಪಡೆದು ಹಾಗು ಸ್ವಲ್ಪ ಶ್ರಮವನ್ನು ಪಡುವ ವರ್ಗದವರು ತಮ್ಮ ಗುರಿಯನ್ನು
ನಿರ್ಣಯಿಸಿಕೊಳ್ಳಬೇಕು, ಸಾಧಿಸುವ ಸಮಯದಲ್ಲಿ ಸಾಧಿಸದೆ ಬೇರೆ ಕೆಲಸದಲ್ಲೂ ಸಂಪೂರ್ಣವಾಗಿ
ತೊಡಗಿಸಿಕೊಳ್ಳದೆ, ಎಳೇಮರದ ಕಾಯಿಯು ಆಗದೆ, ಅತಂತ್ರ ರೀತಿಯಲ್ಲಿ ಬದುಕೋದು ಬಿಟ್ಟು ಯಾವುದೇ
ನಿರ್ಧಾರವಾದರು ಪೂರ್ಣಪ್ರಮಾಣದಲ್ಲಿ ಯೋಚಿಸಿ, ಪೂರ್ವಸಿದ್ಧತೆಗಳೊಂದಿಗೆ ನಿಮ್ಮ ಗುರಿಯನ್ನು
ನೀವು ತಲುಪಿ. ಜೀವನದ ಯಾವುದೆ ಹಂತದಲ್ಲು ಕೂಡ ಯಾವುದೆ ರೀತಿಯ ಗೊಂದಲ ಬೇಡ. ಆಸೆಯಿಂದ
ಮನಸ್ಸೆಂಬ ಹರಿಗೋಲಿನಿಂದ ಬದುಕೆಂಬ ದೋಣಿಯು ಜೀವನದ ಸಾಗರದಲ್ಲಿ ಮುಳುಗದೇ ತನ್ನ ದಡವೆಂಬ
ಗುರಿಯನ್ನು ಮುಟ್ಟಲಿ.

ನಿಮ್ಮ ಆಸೆ, ನಿಮ್ಮ ಮನಸ್ಸು, ನಿಮ್ಮ ಗುರಿ, ನಿಮ್ಮ ಧ್ಯೆಯ, ನಿಮ್ಮ ಶ್ರಮ, ನಿಮ್ಮ ಅದೃಷ್ಟ,
ನಿಮ್ಮ ಜೀವನ, ನಿಮ್ಮ ಕೈಯಲ್ಲಿ...

ಮನಸ್ಸಿನ ಆಳದ ಕೆಲವು ಮಾತುಗಳು...

- ಸೋಮಶೇಖರ್...