ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
ವ್ಯಾಲಂಟೈನ್ಸ್ ಡೇ ಪ್ರಯುಕ್ತ ಭಾರೀ ಕಡಿತ..
ಗಂಡು ಮಕ್ಕಳ ವಿವಾಹದ ವಯಸನ್ನು ೨೧ರ ಬದಲಿಗೆ ೧೮ಕ್ಕೆ ನಿಗದಿಪಡಿಸಬೇಕೆಂದು ಕಾನೂನು ಆಯೋಗ ಶಿಫಾರಸು ಮಾಡಿದೆ.
೧೮ರ ಹುಡುಗರು ಮತ ಚಲಾಯಿಸಬಹುದಾದರೆ ಮದುವೆ ಯಾಕಾಗಬಾರದು ಎಂದು ಕಾನೂನು ಆಯೋಗ ಪ್ರಶ್ನಿಸಿದೆ. ಇದನ್ನು ಓದಿದ ೧೫ರ ಹುಡುಗರು ಮತದಾನದ ಹಕ್ಕನ್ನು ನಮಗೂ ಕೊಡಿ ಎನ್ನಲು ಸುರುಮಾಡದಿದ್ದರೆ ಸಾಕು.
೧೮ ರ ಹುಡುಗ ಹಿಂದೆ ಆರ್ಟ್ಸ್,ಸೈನ್ಸ್,ಕಾಮರ್ಸ್,ಇಂಜಿನಿಯರಿಂಗ್,ಡಾಕ್ಟರ್,ಡೆಂಟಲ್.. ಯಾವ ಕೋರ್ಸ್ ಆಗಬಹುದೆಂದು ಚಿಂತಿಸುತ್ತಿದ್ದನು. ಮುಂದಿನ ಹುಡುಗರು ವೆಡ್ಡಿಂಗ್, ರಿಸೆಪ್ಷನ್, ಹನಿಮೂನ್ ಬಗ್ಗೆ ಯೋಚಿಸಿ ಖುಷಿ ಪಡುವರು.
ಹುಡುಗನ ತಂದೆಗೂ ಆರಾಮ. ಮದುವೆ ಮಾಡಿ ಗಂಡನ್ನು ಹೆಣ್ಣಿನ ಮನೆಗೆ ಕಳುಹಿಸಿ “ನಮಗೆ ವರದಕ್ಷಿಣೆ ಬೇಡ. ಅಳಿಯನ ವಿದ್ಯಾಭ್ಯಾಸದ, ಕೆಲಸದ ಜವಾಬ್ದಾರಿ ನಿಮ್ಮದೇ” ಎಂದು ವರಭಾರವನ್ನು ಹೆಣ್ಣಿನ ತಂದೆಗೆ ಹೊರಿಸಿದರಾಯಿತು.
ಗಂಡ ಹೆಂಡತಿ ಇಬ್ಬರೂ ಸೇರಿ ಏನು ಕಲಿಯುವುದು,ಯಾವ ಕೆಲಸ ಸೇರುವುದು ಎಂದು ತೀರ್ಮಾನಿಸುವುದರಿಂದ ಗಂಡನ ಉದ್ಯೋಗದ ಬಗ್ಗೆ ಮುಂದೆ ಹೆಂಡತಿ ದೂರುವಂತಿಲ್ಲ.
೧೮ ರ ಹುಡುಗ (ಸಚಿನ್ ತರಹದವರನ್ನು ಬಿಟ್ಟು) ೧೮ ರ ಹುಡುಗಿಯನ್ನೇ ಮದುವೆಯಾಗಬೇಕು. ಅಲ್ಲಿಗೆ ಹೆಣ್ಣು ಮಕ್ಕಳು ಬಯಸುತ್ತಿದ್ದ ಸಮಾನತೆ ಬಂದಂತೆ.
ಎಲ್ಲಾ ೧೮ ರ ಹುಡುಗರು ಹೇಳಿ -‘ಕಾನೂನು ಆಯೋಗಕ್ಕೆ ಜೈ’
ಯಾರದು ಧಿಕ್ಕಾರ ಹೇಳಿದ್ದು?
Comments
ಉ: ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
In reply to ಉ: ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ.. by ಶಿವ
ಉ: ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
ಉ: ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..
In reply to ಉ: ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ.. by venkatb83
ಉ: ಅಪ್ಪಾ..ಅಪ್ಪಾ..ನನಗೆ ಹದಿನೆಂಟಾಯ್ತಪ್ಪಾ..