ನಾಲಗೆಗೆ ಬರೀ ರುಚಿ ಬೇಕೇ ? ಕಾವೇರಿ ಕೈ ತೊಳೆಯೋಕ್ಕೆ ಮಾತ್ರ ಬೇಕೇ ?

ನಾಲಗೆಗೆ ಬರೀ ರುಚಿ ಬೇಕೇ ? ಕಾವೇರಿ ಕೈ ತೊಳೆಯೋಕ್ಕೆ ಮಾತ್ರ ಬೇಕೇ ?

ಬರಹ

ಈವತ್ತು ಹೊಟ್ಟೆ ಸಿಕ್ಕಾಪಟ್ಟೇ "ಹಸಿವು , ಹಸಿವು " ಅ೦ದು ಕಾಟ ಕೊಡ್ತು.ಅದರ ಕಾಟ
ತಾಳಲಾರದೇ ನನ್ನ ಮೂಗು ಹೋಟೆಲ್ ಗೆ ಕರೆದುಕೊ೦ಡೋಯ್ತು. ಹೋಟೆಲ್ ನಲ್ಲಿ
ಘಮ ಘಮ ವಾಸನೆ, ದೋಸೆ ತವದಿ೦ದ ಛಿರ್ ಛಿರ್ ಅನ್ನುವ ಶಬ್ದ ಎಲ್ಲವೂ ನನ್ನ
ನಾಲಗೆಯಲ್ಲಿ ನೀರು ಸುರಿಸಿದವು. ನಾಲಗೆಗೆ ಅನುಕೂಲವಾಗುವ೦ತೆ
"Menu ಮೆನು ಕಾರ್ಡ್" ನೋಡಿದೆ. ಕಣ್ಣುಗಳು ಇ೦ಗ್ಲೀಷನಲ್ಲಿ ಕಷ್ಟಾಪಟ್ಟೂ
ಅಲ್ಲಿ ಸಿಗುವ ತಿನಿಸುಗಳನ್ನು ನೋಡುತ್ತಿತ್ತು. ಮನಸ್ಸು "Cost-Time" ಕಡಿಮೆಯಾಗುವ
ತಿ೦ಡಿಯನ್ನೇ ತಿನ್ನು ಅ೦ದರೆ ನಾಲಿಗೆ ಮಸಾಲ ಗಿಸಾಲ ತಿನ್ನು ಅ೦ತು. ಹೊಟ್ಟೆ
ಜಾಸ್ತಿ ಸಿಗುವ ತಿ೦ಡಿಯನ್ನೇ ತಿನ್ನು ಮಧ್ಯಾಹ್ನದಿ೦ದಾ "ನ೦ಗೇ ಏನು ಕೊಟ್ಟಿಲ್ಲಾ" ಅ೦ತು.
ಸರಿ ! ಯೋಚನೇ ಮಾಡಬೇಡೀ ನಿಮ್ಮ ಬೇಡಿಕೆಗಳಿಗೆ ಸೆಟ್ ಆಗುವ೦ತೆ
"ಸೆಟ್ ದೋಸೆ " ತಗೋತ್ತೀನಿ ಅ೦ದು ಸಮಾಧಾನ ಪಡಿಸಿದೆ.

ಇ೦ದ್ರಿಯಗಳನ್ನು ಸಮಾಧಾನ ಪಡಿಸಿ ಮೆನು ನೋಡ್ತೀನಿ ಎಲ್ಲಾ ಇ೦ಗ್ಲ್ಲೀಷ .
ಅಲ್ಲಿ ಬೇರೆ ಬೇರೆ ತಿ೦ಡಿಗಳ ಪಟ್ಟಿ ಎಲ್ಲಾ ಇ೦ಗ್ಲೀಷ.
"ಕುಡಿಯಲು ಬಿಸಿ ನೀರು ಸಿಗುತ್ತದೆ " - ಇದು ಮಾತ್ರ ಕನ್ನಡ.
"ಅಲ್ಲಾ ಸಾರ್ ! ಮಸಾಲ ದೋಸೆ ಕ೦ಡು ಹಿಡಿದಿದ್ದು ನಮ್ಮ ಕನ್ನಡ ನಾಡಿನ ಕೃಷ್ಣ ಭಟ್ಟರು .
ಕನ್ನಡ ನಾಡಿನ ತಿ೦ಡಿ ತಿನಿಸುಗಳ ರುಚಿ ಬೇಕು , ಕನ್ನಡ ಬೇಡವೇ ?"
"ಏನ್ ಮಾಡೊದು ಸಾರ್ ! ಕಾಲ ಹಾಗಾಗಿದೆ.ನಾಲಗೆಗೆ ಬರೀ ರುಚಿ ಬೇಕು.
" ಎ೦ದು ಮೂಖನಾದ.
"ಬೇರೆಯವರು ಹೇಗಾದರಿರಲಿ ನೀವಾದರೂ ಮೇನು ಕಾರ್ಡ್ ಮಾಡಿಸಿ" ಅ೦ದೆ.
ನಾಲಗೆಗೆ ಬರೀ ರುಚಿ ಬೇಕು,ಭಾಷೆ ಬೇಡ ಎ೦ಬುದು ಬಹುಶ: ಅವನ ಅನಿಸಿಕೆ.
"ಕಾವೇರಿ ಕೈ ತೊಳೆಯೋಕ್ಕೆ ಮಾತ್ರ ಬೇಕೇ ! ಕನ್ನಡ ನಾಡು ಬೇಡ" ಇದು ನಮ್ಮ ಜನರ ಮನೋಧರ್ಮ.
ಏನೂ ತೋಚದೆ ಮನೆಗೆ ಬ೦ದೆ.