'ಕಲಾಂ ಮೇಸ್ಟ್ರು ' ಪುಸ್ತಕದಿಂದ ಆಯ್ದ ಕೆಲವು, ಪುಟಗಳು !
'ಕಲಾಂ ಮೇಸ್ಟ್ರು ', ಪ್ರೊ. ಹೆಚ್. ಆರ್. ರಾಮಕೃಷ್ಣರಾವ್ ರವರು, ಮಕ್ಕಳಿಗೋಸ್ಕರರವಾಗಿಯೇ ಬರೆದ ಕಾದಂಬರಿ. ಡಾ. ಕಲಾಂ ಮಕ್ಕಳೊಡನೆ ಮಕ್ಕಳಾಗಿ ಬೆರೆತು ಅವರಿಗೆ ಉಪಯುಕ್ತವಾದ ಸಂಗತಿಗಳನ್ನು ಅವರಿಗೆ ಪ್ರಿಯವಾಗುವಂತೆ ಹೇಳುವ ಪರಿ ಅನನ್ಯವಾಗಿದೆ. ಅಂತಹ ಒಂದು ಸ್ವಾರಸ್ಯಕರವಾದ ಘಟನೆಯನ್ನು ರಾಯರ ಪುಸ್ತಕದಿಂದ ಇಲ್ಲಿ ದಾಖಲಿಸಲಾಗಿದೆ.
’ಏನೀ ಕ್ಷಿಪಣಿ” ?
ಒಮ್ಮೆ ಕೆಲವು ಶಾಲಾಮಕ್ಕಳು ಅವರನ್ನು ಭೇಟಿಯಾಗಿದ್ದರು. ಕಲಾಂ ಬಿಡುವಿನವೇಳೆಯನ್ನು ಸಾಮಾನ್ಯವಾಗಿ ಮಕ್ಕಳಜೊತೆಯಲ್ಲಿ ಕಳೆಯುತ್ತಿದ್ದರು ಭೇಟಿಗೆ ಮುಂಚೆ ಅದ್ಯಾಪಕರು ಕಲಾಂ ಅವರನ್ನು ' ಮಿಸೈಲ್ ' ವಿಜ್ಜಾನಿ ಅಂತ ಮಕ್ಕಳಿಗೆ ಪರಿಚಯಿಸುತ್ತಿದ್ದರು. ಹೈಸ್ಕೂಲ್ ನಲ್ಲಿ ಓದುತ್ತಿದ್ದ ಅವರು 'ರಾಕೆಟ್ ' ವಿಷಯ ಕೇಳಿದ್ದರು. ಮಿಸೈಲ್ ವಿಶಯ ಅಷ್ಟಾಗಿ ತಿಳಿದಿರಲಿಲ್ಲ. ಕಲಾಂ ಅವರನ್ನೇ ಕೇಳಿದರು. ನಗುತ್ತಾ ಕಲಾಂ ಹೇಳಿದರು. " ನಿಮ್ಮಲ್ಲಿ ಹಿಂದಿನಬೆಂಚಿನಲ್ಲಿ ಕೂತಿರೋರು, ಚೇಷ್ಟೆಗೆ ಅಂತ, ಪೇಪರ್ ನ ಮಡಿಸಿ ಎರಡೂ ಕೈಗಳ ಬೆರಳುಗಳನಡುವೆ ಹಿಡಿದು, ಮುಂದಿನವರ ತಲೆಗೆ ಬಡಿಯುವಂತೆ ಗುರಿ ಯಿಟ್ಟು ಎಸೀತೀರಲ್ಲ, ಅದೇ ' ಮಿಸೈಲ್' ! 'ಹೋ' ಅಂತ ಮಕ್ಕಳು ಕೂಗಿ ಚಪ್ಪಾಳೆ ಹೊಡೆದರು.
ಗುರಿಗೆ ಹೋಗಿ ಬಡಿಯುವ ಉದ್ದೇಶದಿಂದ ಎಸೆದ, ಬೀಳಿಸಿದ ಪ್ರಕ್ಷೇಪಿಸಿದ ಇಲ್ಲವೇ ಮುಂದೆ ದೂಡಿದ ಅಥವಾ ಹಾಗೆ ವಿನ್ಯಾಸಗೊಳಿಸಿದ ಅಸ್ತ್ರಕ್ಷಿಪಣಿ. ಕಲಾಂ ತಂಡ ವಿನ್ಯಾಸಗೊಳಿಸುತ್ತಿದ್ದದ್ದು ನಿರ್ದೇಶಿತ ಕ್ಷಿಪಣಿ, ಗೈಡೆಡ್ ಮಿಸೈಲ್. ಇದರಲ್ಲಿ ಹಾರಿಬಿಟ್ಟಾಗಿನಿಂದ ಗುರಿತಲಪುವವರೆಗೂ ನಿಯಂತ್ರಿಸುವ ವ್ಯವಸ್ಥೆ ಇರುತ್ತದೆ. ಇದನ್ನು ದೂರದಿಂದ ನಿಯಂತ್ರಿಸಬಹುದು. ಗುರಿಚಲನೆಯಲ್ಲಿದ್ದರೆ ಅದನ್ನು ಹಿಂಬಾಲಿಸುವ ಸಾಮರ್ಥ್ಯ ಈ ಕ್ಷಿಪಣಿಗಿರುತ್ತದೆ. ಸ್ವಯಂಚಾಲಿತ , ಗುರಿನಿರ್ಧಾರಿತ, ಕಂಪ್ಯೂಟರ್ ಸಹಾಯದಿಂದ ತಲುಪುವಂತೆಸಂಯೋಜಿಸಬಹುದು.
ದೀರ್ಘ ಅಂತರವಿರುವ ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಹಾರಿಬಿಡುವ ಅಸ್ತ್ರವೇ ಉತ್ ಕ್ಷೇಪಿತ ಕ್ಷಿಪಣಿ. ಇದು ಮಿಲಿಟರಿ ಕ್ಷಿಪಣಿ.ಇದನ್ನು ಎಸೆದಾಗ ಕೊಟ್ಟಿರುವ ಆವೇಗವನ್ನೂ [Mometum ] ಮತ್ತು ಚಲನೆಯಲ್ಲಿರುವಾಗ ಅದರಮೇಲೆ ವರ್ತಿಸುತ್ತಿರುವ ಗುರುತ್ವ ಬಲವನ್ನೂ ಭಾಗಶಃ ಇಲ್ಲವೇ ಪೂರ್ಣವಾಗಿ ಅವಲಂಭಿಸಿರುತ್ತದೆ. ಎಸೆದ ಚೆಂಡು ಎಷ್ಟುದೂರ ತಲಪುತ್ತದೆ ಎಂಬುದು ಎಸೆಯುವಾಗಿನ ವೇಗ ಹಾಗು ದಿಶೆಯನ್ನು ಅವಲಂಭಿಸಿರುವುದನ್ನು ಮಕ್ಕಳು ಗಮನಿಸುತ್ತಾರೆ.
ಅಧ್ಯಯನ, ಅಧ್ಯಾಪನ, ಹಾಗೂ ಸಂಶೋಧನೆ-ಹೀಗೇ ಹಲವಾರು ಕಾರ್ಯಗಳಲ್ಲಿ ತೊಡಗಿದ್ದ ಕಲಾಂ ಅವರಿಗೆ ಸಮರ್ಥ ಸಹಾಯಕರು ಸಿಕ್ಕಿದ್ದರಲ್ಲಿ ಆಶ್ಚರ್ಯವಿಲ್ಲ. ಚುಂಬಕದಂತೆ ಪರಣಿತರನ್ನು ತಮ್ಮ ಯೋಜನೆಗೆ ಸೆಳೆದುಕೊಂಡರು. ಗೆ ಬಂದವರು ಸೇನಾವಿಭಾಗದಲ್ಲಿ ಕರ್ನಲ್ ಆಗಿದ್ದ ವಿ.ಜೆ.ಸುಂದರಮ್. ಮಸ್ಯೆಗಳು ತಲೆ ಎತ್ತಿದಾಗ ಹತಾಶರಾಗಿ ಕೈಚೆಲ್ಲದೆ ಪರಿಹಾರ ಕಂಡುಹಿಡಿಯುವ ಚತುರರು. ಪೃಥ್ವಿ, ವಿನ್ಯಾಸಕ್ಕೆ ಮೊದಲ ಆದ್ಯತೆ ಎಂದು ತೀರ್ಮಾನಿಸಲಾಗಿತ್ತು. ಸುಂದರಮ್ ಸಾರಥ್ಯದಲ್ಲಿ " ಪೃಥ್ವಿ', ಪೃಥ್ವಿ ಯಿಂದ ಜಿಗಿಯುವುದರಲ್ಲಿ ಕಲಾಂ ಗೆ ವಿಶ್ವಾಸವಿತ್ತು.