ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ

ಕನ್ನಡ ಬೆಳೆಯುತ್ತಿರುವುದು ನೋಡಿದರೆ ಖುಶಿ ಆಗುತ್ತದೆ

ಕನ್ನಡ ಭಾಷೆ ಮುತ್ತಿನಂಥ ಭಾಷೆ. ಕನ್ನಡ ಕೇಳಲು ತಂಪು, ಕಿವಿಗೆ ಇಂಪು ಮತ್ತು ಮೂಗಿಗೆ ಕಂಪು. ನಮ್ಮ ಭಾಷೆ ಶ್ರೀಮಂತ ಇತಿಹಾಸವುಳ್ಳ ಭಾಷೆ. ಇಂತಹ ಭಾಷೆ ಈಗೀಗ ನಶಿಸಿ ಹೋಗುತ್ತಿದೆಯೇನೋ ಎಂದು ಜನರ ಕೂಗು ಕೇಳಿ ಬರುತ್ತಿತ್ತು. ಕನ್ನಡದ ಬಗ್ಗೆ ಜನರಲ್ಲಿ ನಿರಾಸಕ್ತಿ ಉಂಟಾಗಿದೆಯೇನೋ ಎಂದು ತಿಳಿದು ಬೇಸರವಾಗಿತ್ತು.

ನಾನು ಮೊದಲ ಬಾರಿಗೆ ಭಾರತ ಬಿಟ್ಟು ಪರದೇಶಕ್ಕೆ ಬಂದಾಗ ನಮ್ಮ ಕನ್ನಡ ಭಾಷೆ ಎಲ್ಲಾದರೂ ಕೇಳುವುದು ಸಾಧ್ಯಾನಾ ಅಂತ ಅಂದುಕೊಂಡಿದ್ದೆ. ಕನ್ನಡ ಪದಕ್ಕೆ ಹೋಲುವಂತೆ ಇರುವ ಕೆನಡಾ ದೇಶದಲ್ಲಿ ಕನ್ನಡ ಸಂಘವಿದೆ ಎಂದು ತಿಳಿದು ಸಂತೋಷವಾಯಿತು. ಅಷ್ಟೇ ಅಲ್ಲ, ಕನ್ನಡದಲ್ಲಿ ಉತ್ತಮವಾದ ವೆಬ್ ಸೈಟ್ ಗಳು ಇರುವುದು ತಿಳಿದು ಮನಸ್ಸಿಗೆ ಪರಮಾನಂದವಾಗಿದ್ದು ಸುಳ್ಳಲ್ಲ.

ಸ‌ಂಪದ ಕೂಡ ನನಗೆ ತುಂಬಾ ಸಂತೋಷ ಪಡಿಸಿದ ಒಂದು ಅದ್ಭುತವಾದ ತಾಣ. ಇದೇ ರೀತಿ ಇನ್ನೊಂದು ವೆಬ್ ಸೈಟ್ ನನಗೆ ಇಮೇಲ್ ಮುಖಾಂತರ ತಿಳಿದುಕೊಂಡೆ. ಅದು sumneblog.com ಅಂತ. ಈ ತಾಣ ಸಂಪದದಷ್ಟು ವಿಶಾಲವಾಗೇನಿಲ್ಲ. ಅಷ್ಟೇ ಅಲ್ಲ, ಅಲ್ಲಿ ಕೇವಲ ಬ್ಲಾಗ್ ಬರೆಯಲು ಮಾತ್ರ ಅವಕಾಶವಿದೆ.

ಅದೇನೆ ಆದರೂ ಮಾಹಿತಿ ತಂತ್ರಙಾನ ಕ್ಷೇತ್ರದಲ್ಲಿ ಇಷ್ಟೊಂದು ಕನ್ನಡದ ತಾಣಗಳು ಹುಟ್ಟುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಕನ್ನಡ ಹೀಗೆ ಬೆಳೆದು ನಮ್ಮ ನಾಡು ನುಡಿ ಸಂಸ್ಕ್ರುತಿ ನಮ್ಮ ಬಾಳಿನಲ್ಲಿ ಅವಿಭಾಜ್ಯ ಅಂಗವಾಗಿರಲಿ ಎಂದು ನನ್ನ ಆಶಯ‌.

ಜೈ ಹಿಂದ್, ಜೈ ಕರ್ನಾಟಕ ಮಾತೆ!

Rating
No votes yet

Comments