ಕಾಯಿಲೆಗಳ ಬಗ್ಗೆ ಒ೦ದಿಷ್ಟು...

ಕಾಯಿಲೆಗಳ ಬಗ್ಗೆ ಒ೦ದಿಷ್ಟು...

ಬರಹ

ಸುಮ್ಮನೇ ಗಮನಿಸಿ ನೋಡಿ,ನಮ್ಮ ಸುತ್ತಮುತ್ತಲಿನ ಸ್ನೇಹಿತರಲ್ಲಿ (ಸುಮಾರು ೨೦ - ೩೦ವರ್ಷ ವಯಸ್ಸಿನವರಲ್ಲಿ) ಯಾರಿಗಾದರೂ,ಏನೋ ಒ೦ದು ದೈಹಿಕ ಸಮಸ್ಯೆ ಇರುತ್ತದೆ.ಅವರು ವೈದ್ಯಕೀಯ ತಪಾಸಣೆ ಮಾಡಿಸಿ,ಕೆಲವು ಪಥ್ಯಗಳನ್ನು ಅನುಸರಿಸುತ್ತಿರುತ್ತಾರೆ.ಕುಡಿತ ಬಿಡುವುದು,ಸಿಗರೇಟು ಕಡಿಮೆ ಮಾಡುವುದು,ಮಾ೦ಸ ನಿಲ್ಲಿಸುವುದು ಹೀಗೆ,ಇನ್ನೂ ಏನೇನೋ. ಆಗ ಬರುತ್ತದೆ ಈ ಮಾತು,

"ಪುಕ್ಲ ನನ್ ಮಗಾ ಕಣಮ್ಮಾ, ನೀನು ಡಾಕ್ಟರ್ ಹೇಳೀ ಬಿಟ್ಟ್ರ್ರು,ನೀನು ಕೇಳಿ ಬಿಟ್ಟೆ,ಪುಕ್ಲಾ,ಪುಕ್ಲಾ"

ಅಥವಾ,"ಲೈಫ್ ಇರೋದೇ ಎ೦ಜಾಯ್ ಮಾಡೋಕಮ್ಮಾ, ಈ ಕಾಯಿಲೆಗಳಿಗೆಲ್ಲಾ ಹೆದರಿ ,ನಮ್ಮ ಸುಖ ಕಳ್ಕೋಬಾರ್ದು,ಬಿಡು,ಬಿಡು"

ಈ ಮಾತುಗಳನ್ನು ಹೆಚ್ಚು ಕಮ್ಮಿ ಎಲ್ಲರೂ ಕೇಳಿರುತ್ತೇವೆ.ಮುಖ್ಯವಾಗಿ ೨೦ ರಿ೦ದ ೩೦ರ ವಯಸ್ಸಿನಲ್ಲಿ ಕಾಯಿಲೆಗಳನ್ನು ಅನುಭವಿಸುತ್ತಿರುವವರು.ಮಹಾನಗರಗಳಲ್ಲ೦ತೂ,ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ದೊಡ್ದ ಕಾಯಿಲೆಗಳು ಬರುವುದು ಸಾಮಾನ್ಯವಾಗಿಬಿಟ್ಟಿವೆ.(ಬಹುಶ;ಮಾಲಿನ್ಯತೆ ಕಾರಣವಿರಬುದೇನೋ)..ಇರಲಿ,ಆ ವಿಷಯ ಈಗ ಬೇಡ.ನಾನು ಹೇಳ ಬಯಸುವುದು ಮೇಲಿನ ಮಾತುಗಳಾನ್ನಾಡುವ "ಧೈರ್ಯವ೦ತ"ರ ಬಗ್ಗೆ.ತಮಗೆ ಬ೦ದ ಕಾಯಿಲೆಗಳ ಕಾಳಜಿವಹಿಸುವವರ ಬಗ್ಗೆ ಜನ ಹೇಳುವ ಮಾತುಗಳಿವು.ಇನ್ನೂ ಕೆಲವರಿರುತ್ತಾರೆ, ತಮಗೆ ಕಾಯಿಲೆ ಬ೦ದಿದೆ ಎ೦ದು ತಿಳಿದ ಮೇಲೆ ವೈದ್ಯರ ಎಲ್ಲಾ ಸೂಚನೆಗಳನ್ನು ಗಾಳಿಯಲ್ಲಿ ತೂರಿ ,"ಬಿಡಮ್ಮ ಯಾವತ್ತಿದ್ದರೂ ಸಾಯಬೇಕು,ಮಜಾ ಮಾಡ್ಬೇಕಮ್ಮಾ ಮಜಾ" ಎನ್ನುವ೦ತಹ ಉಡಾಫೆಯ ಮಾತಾಡುತ್ತಾರೆ.

ಎಷ್ಟು ಅಸ೦ಭದ್ದ ,ಬೇಜವಾಬ್ದಾರಿಯ ವರ್ತನೆ ಅಲ್ಲವೇ..? ದಯವಿಟ್ಟು ಈ ರೀತಿಯ ಮಾತುಗಳನ್ನಾಗಲಿ,ವರ್ತನೆಯನ್ನಾಗಲಿ ಮಾಡಬೇಡಿ.ಇದು ನಮಗೇ ನಾವು ತೋರುವ ಅಸಡ್ಡೆ,ಅಗೌರವ.ನಮಗೆ ಒ೦ದು ಕಾಯಿಲೆ ಇದೆ ಎ೦ದು ಅದರ ಬಗ್ಗೆಯೇ ಚಿ೦ತಿಸಿ ನಮ್ಮ ಕೆಲಸವನ್ನೆಲ್ಲಾ ಹಾಳು ಮಾಡಿಕೊಳ್ಳುವುದು ತಪ್ಪು.ಆದರೆ ಆ ಕಾಯಿಲೆಯ ನಿಯ೦ತ್ರಣಕ್ಕೊಸ್ಕರ ಕಾಳಜಿ ವಹಿಸುವುದು ಖ೦ಡಿತ ತಪ್ಪಲ್ಲ.ಒ೦ದು ವೇಳೆ ನಮಗೆವಯಸ್ಸಾಗಿದ್ದರೆ ಬೇರೆ ಮಾತು,ಆಗ ಜೀವನದ ಉತ್ಸಾಹ ಹೊರಟು ಹೋಗಿರುತ್ತದೆ ,ಅವರು ಈ ಥರಹದ ಮಾತುಗಳನ್ನು ಆಡಬಹುದೇನೋ.ಆದರೆ ಚಿಕ್ಕ ವಯಸ್ಸಿನಲ್ಲೇ ಕಾಯಿಲೆ ಬ೦ದಾಗ ತಮಗೆ ಯಾರದರೂ ಈ ಮೇಲಿನ ಮಾತುಗಳನ್ನು ಹೇಳಿದರೇ ಅವರಿಗೆ ಹೇಳಿ"ನಾನು ಕಾಯಿಲೆಗೆ ಹೆದರುವುದಿಲ್ಲ ಆದರೆ ನನ್ನ ಜೀವನದ ಜವಾಬ್ದಾರಿಗಳಿಗೆ,ಗುರಿ ಸಾಧನೆಯ ಅಡ್ಡಿಗೆ ಹೆದರುತ್ತೇನೆ.ಏಕೆ೦ದರೆ,ಜೀವನದಲ್ಲಿ ನಾನು ಸಾಧಿಸುವುದು ಬೇಕಾದಷ್ಟಿದೆ,ಶುದ್ಧ ಬೇಜವಾಬ್ದಾರಿಯ೦ತೆ ,ಅವಿವೇಕಿಯ೦ತೆ ಇಷ್ಟು ಬೇಗ ಸಾಯಲು ಮನಸ್ಸಿಲ್ಲ." ಇಷ್ಟಕ್ಕೂ ಯಾವುದೇ ಕಾಯಿಲೆಯಿ೦ದ ಸಾಯಲೇಬೇಕೆ೦ಬ ನಿಯಮವೇನಿಲ್ಲವಲ್ಲ? ಸುಮ್ಮನೇ ಯಾವುದೋ ಒ೦ದು ಅ೦ಗ ಊನವಾಗಬಹುದು,ಅಥವಾ ಜೀವನ ಪೂರ್ತಿ ಮತ್ತೊಬ್ಬರ ಮೇಲೆ ಅವಲ೦ಬಿಸಿ ಬದುಕುವ೦ತಾಗಬಹುದು.ಆ ಕಷ್ಟ ಒಳ್ಳೆಯದೇ ಅಥವಾ ಕಾಯಿಲೆಯ ಬಗ್ಗೆ ಕಾಳಜಿ ವಹಿಸಿ ಅದನ್ನು ತಡೆಗಟ್ಟುವುದು ಒಳ್ಳೆಯದೆ.?

ಇಲ್ಲಿ ಯಾವುದೋ ದೊಡ್ಡ ಕಾಯಿಲೆಯ ಬಗ್ಗೆ ಹೇಳುತ್ತಿಲ್ಲ. ಚಿಕ್ಕ ಕಾಯಿಲೆ ನಾಳೆ ದೊಡ್ಡದಾಗಬಹುದು.ಖ೦ಡಿತವಾಗಿ ಕಾಯಿಲೆಗಳ ಬಗ್ಗೆ ಹೆದರಬೇಡಿ,ಆದರೆ ಕಾಳಜಿವಹಿಸಿ.ಎ೦ದಿದ್ದರೂ ಸಾಯಲೇಬೆಕೆ೦ಬವರಿಗೆ ಒ೦ದು ಮಾತು,ಸುಮ್ಮನ್ನೇ ಹುಟ್ಟಿ,ಏನನ್ನೂ ಸಾಧಿಸದೇ ಸುಮ್ಮನ್ನೇ ಸತ್ತರೆ ಹುಟ್ಟುವ ಅವಶ್ಯಕತೆಯಾದರೂ ಏನು ಅಲ್ಲವೇ..?

ಗುರುರಾಜ ಕೊಡ್ಕಣಿ,ಯಲ್ಲಾಪುರ