ಡಿಸ್ನಿ, UTV ಹಾಗೂ ಭಾರತದ ಮನರಂಜನೆ ಉದ್ಯಮ

ಡಿಸ್ನಿ, UTV ಹಾಗೂ ಭಾರತದ ಮನರಂಜನೆ ಉದ್ಯಮ

ಹೆಚ್ಚಾಗಿ ಭಾರತದಲ್ಲಿ ಹೊರಬರುವ ಸಿನಿಮಾಗಳು ಪ್ರೀತಿ, ಪ್ರೇಮ, ಹೀರೋ ಹೀರೋಯಿನ್ನುಗಳಲ್ಲೇ ಮುಗಿದುಹೋಗುತ್ತವೆ. ಇದೇ ರೀತಿಯ ಹಾಡು ಕುಣಿತ ಇರುವ ಚಿತ್ರಗಳ ಟ್ರೆಂಡೇ ಹೆಚ್ಚಿರುವಾಗ ಇಗೋ ಇಲ್ಲೊಂದು ಪಾಸಿಟಿವ್ ಡೆವಲಪ್ಮೆಂಟು!

UTV Motion Pictures
ದಿ ಹಿಂದೂ ವರದಿ ಪ್ರಕಾರ ಡಿಸ್ನಿ ಕಂಪೆನಿ ತನ್ನ ಸಬ್ಸಿಡರಿಯ ಮೂಲಕ ಭಾರತದ ಕಂಪೆನಿಯಾದ [:http://en.wikipedia.org/wiki/UTV_Software_Communications|ಯೂ ಟಿ ವಿ]ಯಲ್ಲಿ [:http://www.hinduonnet.com/thehindu/thscrip/print.pl?file=2008021953331600.htm&date=2008/02/19/&prd=th&|ಹಣ ಹೂಡಿಸುತ್ತಿದೆಯಂತೆ]!

UTVಯ ನಿರ್ಮಾಣಗಳನ್ನು ಗಮನಿಸಿದರೆ ಬಾಲಿವುಡ್ ಟ್ರೆಂಡಿನ ನಡುವೆ ಅವರು ಧೈರ್ಯದಿಂದ ನಡೆಸಿರುವ ಪ್ರಯೋಗಗಳು ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕೆಲವು [:http://www.imdb.com/title/tt0466460/|ಕೋಸ್ಲಾ ಕಾ ಘೋಸ್ಲಾ], [:http://utvmotionpictures.com/blueumbrella-movie.asp|ಛತ್ರಿ ಚೋರ್] ಹಾಗೂ ಈಗ ತಾನೆ ಹೊರಬಂದಿರುವ [:http://www.jodhaaakbar.com/|ಜೋಧ ಅಕ್ಬರ್]. ಈ ಪಟ್ಟಿಯಲ್ಲಿ ಮೊದಲೆರಡು ಬಹಳ ಸೃಜನಶೀಲ ಚಿತ್ರಗಳಾದರೆ ಕೊನೆಯದು ಹಾಲಿವುಡ್ ಸಿನಿಮಾಗಳೊಂದಿಗೆ ಗುರುತಿಸಿಕೊಳ್ಳುವಷ್ಟು ಚೆಂದವಾದ ತಂತ್ರಜ್ಞಾನವಿರುವಂಥದ್ದು. ಇವರ ಮೊದಲ ಹಲವು ನಿರ್ಮಾಣಗಳಲ್ಲಿ ಒಂದಾದ ಶಾಂತಿ ಬಹಳ ಜನಪ್ರಿಯತೆ ಪಡೆದಿತ್ತು. ಡಿಡಿ ೧ರಲ್ಲೇ ಬರುತ್ತಿದ್ದ ಮಹಾಭಾರತ ಹಾಗೂ ಮಾಯಾಮೃಗದಂತಹ ದಾರಾವಾಹಿಗಳನ್ನು ಕೂತು ನೋಡುವಂತೆ ಮನೆಯ ಎಲ್ಲರೂ ಇದನ್ನು ಎಲ್ಲ ಕೆಲಸ ಬಿಟ್ಟು ಜೊತೆಗೆ ಕೂತು ನೋಡುತ್ತಿದ್ದರು.

UTV ಈಗ ಹೊರಗಿನಿಂದ ಇಷ್ಟೊಂದು ಬಂಡವಾಳ ಪಡೆಯುತ್ತಿದೆ ಎಂದರೆ ಇದು ಭಾರತದ ಮನರಂಜನೆಯ ಉದ್ಯಮಕ್ಕೆ ಬಹಳ ಒಳ್ಳೆಯ ಸುದ್ದಿಯಾಗಬಹುದು. ಸೃಜನಶೀಲ ಸಿನಿಮಾ ಇವರಿಂದ ಮತ್ತಷ್ಟು ಹೊರಬರಬಹುದು. UTV ಹೊಸ ಸಿನಿಮಾಗಳೊಂದಿಗೆ ದಕ್ಷಿಣದತ್ತಲೂ ನೋಡುವುದೆಂದು ಆಶಿಸೋಣ. :-)

Rating
No votes yet