ಸಂಸ್ಕಾರ ಕಲಿತಿಲ್ಲದವರು ಮಾಡುತ್ತಿರುವ ಸ್ವಧರ್ಮದ "ತಿಥಿ" ಮತ್ತು "ತಿಥಿ" ಪಾಠ...

ಸಂಸ್ಕಾರ ಕಲಿತಿಲ್ಲದವರು ಮಾಡುತ್ತಿರುವ ಸ್ವಧರ್ಮದ "ತಿಥಿ" ಮತ್ತು "ತಿಥಿ" ಪಾಠ...

ಮಂಗಳೂರಿನ ಕೆಲವು "ಅತಿಮಡಿವಂತ" ಕಾಲೇಜು ಹಿಂದಿ ಅಧ್ಯಾಪಕರು "'ಸಂಸ್ಕಾರ' ಕಾದಂಬರಿಯನ್ನು ಬೋಧಿಸಲು ಮುಜುಗರವಾಗುತ್ತದೆ, ದಯವಿಟ್ಟು ಅದನ್ನು ತೆಗೆದುಹಾಕಿ," ಎಂದದ್ದು ನಿಮಗೆ ಗೊತ್ತಿರಬಹುದು. ಅವರ ಈ ಕೋರಿಕೆಗೆ ಆ ಪ್ರದೇಶದ ಸಾಹಿತ್ಯಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳಿವೆ ಎನ್ನುವ ಸಂದೇಹ ನನ್ನದು. ಆದರೆ ಆ ಆಯಾಮಗಳು ಇಲ್ಲಿ ಅಪ್ರಸ್ತುತ. ಇಲ್ಲಿ ನಮಗೆ ಮುಖ್ಯವಾಗಬೇಕಿರುವ ಆಯಾಯಮವನ್ನು ಮುಂದಿಟ್ಟುಕೊಂಡು, ಸ್ಯಾನ್‍ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ (ಮೈಸೂರು ಮೂಲದ) ಗೆಳೆಯ ಡಾ. ಪೃಥ್ವಿ ದತ್ತ ಚಂದ್ರ ಶೋಭಿ ವಿವರವಾಗಿ ವಾರದ ಹಿಂದೆಯೆ ಚುರುಮುರಿ.ಕಾಮಿನಲ್ಲಿ ಬರೆದಿದ್ದರು. ಅದಾದ ನಾಲ್ಕೈದು ದಿನಗಳಿಗೆ ಕನ್ನಡಪ್ರಭದಲ್ಲಿ ಉಷಾ ಕಟ್ಟೆಮನೆಯವರು ಇದೇ ವಾದವನ್ನು ಪುಷ್ಟೀಕರಿಸುವಂತಹ ಲೇಖನವನ್ನು ಬರೆಯುವ ತನಕ ಯಾವೊಂದು ಕನ್ನಡ ದಿನಪತ್ರಿಕೆಯೂ ಈ ವಿವಾದದ ಮೂಲಸಮಸ್ಯೆಯತ್ತ ಗಮನ ಹರಿಸಿರಲಿಲ್ಲ. ವಿವಾದಗಳನ್ನು ಸೃಷ್ಟಿಸುವ ಅಥವ ವಿವಾದಗಳಿಂದ ತಮ್ಮ ಅಜೆಂಡಾ ಪೂರೈಸಿಕೊಳ್ಳುವ ಒಂದು ಹೀನಾಯ ಸಂಸ್ಕೃತಿಯನ್ನೆ ಪತ್ರಿಕೋದ್ಯಮ ಎಂದುಕೊಂಡುಬಿಟ್ಟಿದ್ದಾರೆ ನಾಡಿನ ಉದ್ದಾಮ ಪತ್ರಕರ್ತರು.

"ಸ್ವಧರ್ಮೇ ನಿಧನಮ್ ಶ್ರೇಯಃ" ಎನ್ನುತ್ತಾನೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ. ಈಗಿನ ಕೆಲವರು ಕೃಷ್ಣನ ಈ ಮಾತನ್ನು

ಹೇಗೆಂದರೆ ಹಾಗೆ ತಮ್ಮ ಮೂಗಿನ ನೇರಕ್ಕೆ, ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ. ಇಲ್ಲಿ ಸ್ವಧರ್ಮವೆಂದರೆ ನಿನ್ನ ಪಾಲಿಗೆ ಬಂದಿರುವ ಕಾಯಕ, ನೀನು ಏನು ಮಾಡಬೇಕಾಗಿದೆಯೊ ಅದು ಎಂದು ಪ್ರವಚನಕಾರರೊಬ್ಬರು ಹೇಳಿದ್ದನ್ನು ಕೇಳಿದ್ದೆ. ಈಗ ಅದೇ ಹಿನ್ನೆಲೆಯಲ್ಲಿ ಹೇಳಬಹುದಾದರೆ, ಯೋಗ್ಯವಾಗಿ ಪಾಠ ಮಾಡಬೇಕಾದ ತಮ್ಮ ಸ್ವಧರ್ಮವನ್ನು ಬಹುಪಾಲು ಭಾರತದ ಶಿಕ್ಷಕರು ಪಾಲಿಸುತ್ತಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಓದಲು ಕಲಿಸುತ್ತಿದೆ. It is just teaching to "read" sentences; not to "reason".

ಈ ಹಿನ್ನೆಲೆಯಲ್ಲಿ, ಸಂಸ್ಕಾರವನ್ನು ಹೇಗೆ ಪಾಠ ಮಾಡಬೇಕೊ ಹಾಗೆ ಮಾಡಲಾಗುತ್ತಿಲ್ಲ ಎನ್ನುವ ಶಿಕ್ಷಕರು ತಮ್ಮ ಸ್ವಧರ್ಮದ "ತಿಥಿ" ಯನ್ನು ಚೆನ್ನಾಗಿಯೇ ಮಾಡುತ್ತಿದ್ದಾರೆ ಎನ್ನಬೇಕು.

ನನ್ನ ಈ ವಾರದ ಅಂಕಣ ಲೇಖನ ಈ ಮೇಲಿನವುಗಳ ಹಿನ್ನೆಲೆಯಲ್ಲಿದೆ. ಪೃಥ್ವಿಯವರ ಇಂಗ್ಲಿಷ್ ಬ್ಲಾಗ್ ಬರಹದ ಬಹುಪಾಲನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಪೂರ್ಣ ಲೇಖನ ಇಲ್ಲಿದೆ.
http://amerikadimdaravi.blogspot.com/2008/02/blog-post_20.html

ಲೇಖನದ ವಿಡಿಯೊ ಪ್ರಸ್ತುತಿ
Rating
No votes yet