'ಅಳಿಯ'ನ ಪುರಾಣ

'ಅಳಿಯ'ನ ಪುರಾಣ

ನಾನು ಒಬ್ಬ ಅಳಿಯನಾಗಿರುವುದರಿಂದ 'ಅಳಿಯ' ಪದದ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಏನಪ್ಪ ಇದು ಅಳಿಯ ಅಂದ್ರೆ ಎಶ್ಟೊ ಸಲ ತಲೆ ಕೆರೆದುಕೊಂಡಿದ್ದೆ. ಕೊನೆಗೆ ಕೊಳಂಬೆ ಪುಟ್ಟಣ್ಣಗೌಡರ ನಿಗಂಟಿನಲ್ಲಿ ಇದಕ್ಕೆ ಉತ್ತರ ಸಿಕ್ಕಿತು.ನಮ್ಮ ಹಿರಿಯರು ಹೇಗೆ ಒಂದೊಂದು ಪದದಲ್ಲಿ ಸಮಱಿ(ಒಪ್ಪವಾಗಿಸಿ) ಅರಿತವನ್ನ ಅಡಗಿಸಿಟ್ಟಿದ್ದಾರೆ ಅಂತ ತಿಳಿದಾಗ ತುಂಬ ನಲಿವಾಯಿತು.

ಅಳಿಯ = ಬಯಸುವವನು, ಎಳಸುವವನು ( 'ಹಬ್ಬಿಗ' ಅಂತಾನು ಅಂತರಂತೆ, ಹಬ್ಬಿಗ ಅಂದ್ರೆ ಎಲ್ಲ ಹಬ್ಬಗಳಲ್ಲು ಇರುವವನು)

ಮಾದರಿ:
ಚಳಿವೆಟ್ಟಳಿಯ= ಶಿವ
ಪಾಲ್ಗಡಲಳಿಯ= ವಿಶ್ಣು
ಪೆಱಿಯಳಿಯ= ಮನ್ಮತ, ಬ್ಯಾಟರಾಯ

ಅಳುಪು= ಅಳಿಪು= ನಲ್ಮೆ ,ಸ್ನೇಹ  ಇದರಿಂದ 'ಅಳಿಯ' ಆಗಿರುವ ಸಾದ್ಯತೆಗಳು ಹೆಚ್ಚಿವೆ.

ಇವೆಲ್ಲ ನೋಡಿದ ಮೇಲೆ  ಅಳಿಯನಾಗುವವನಿಗೆ ಬೇಕಾದುವುಗಳು(specifications :) )

೧) ಒಳ್ಳೆ ನೇಹಿಗ/ಗೆಳೆಯ ಆಗಿರಬೇಕು
೨) (ಹೆಂಡತಿಯನ್ನು) ಬಯಸುವವನಾಗಿರಬೇಕು
೩) ಎಲ್ಲ ಹಬ್ಬಗಳಲ್ಲು ಜೊತೆಗಿರಬೇಕು  (ಮಾವನ ಮನೆಗೆ ಹೋಗಿ ಅಳಿಗುಳಿಯನ್ನು ಪಡೆಯಬೇಕು)

Rating
No votes yet

Comments