ಪತಂಜಲಿಯ ಯೋಗ ಸೂತ್ರಗಳು ಹಾಗೂ ಕಪಿಲ ಗೀತೆಯ ’ಸಾಂಖ್ಯ ಯೋಗ’
ಎರಡು ಬಗೆಯ ಯೋಗಗಳನ್ನು ನಾನು ಕೇಳಿದ್ದೇನೆ.
ಪತಂಜಲಿ ಮಹರ್ಷಿಗಳ ಯೋಗ ಸೂತ್ರಗಳು ಒಂದಾದರೆ ಭಾಗವತದಲ್ಲಿ ಬರುವ ಕಪಿಲ ಗೀತೆಯಲ್ಲಿ ತಾಯಿ ದೇವಹೂತಿಗೆ ಭಗವಂತನು ಉಪದೇಶಿಸುವ ಸಾಂಖ್ಯಯೋಗ ಇನ್ನೊಂದು. ಏನು ಸಾಂಖ್ಯ ಯೋಗ ಎಂದರೆ? ನನಗೆ ತಿಳಿದ ಮಟ್ಟಿಗೆ ಸಾಂಖ್ಯ ಯೋಗ ಮುಖ್ಹ್ಯವಾಗಿ ಮನಸ್ಸಿನ ಸ್ಥಿತಿಗೆ ಸಂಬಂಧಿಸಿದ್ದು ಹಾಗು ವ್ಯಕ್ತಿಯ ಜೀವನದ ಕರ್ಮಗಳಿಗೆ ಸಂಭಂದಿಸಿದ್ದು. ಪತಂಜಲಿ ಮಹರ್ಷಿಗಳ ಯೋಗ ಸೂತ್ರಗಳು ಯಮ, ನಿಯಮ, ಪ್ರಾಣಾಯಾಮ, ಪ್ರತ್ಯಾಹಾರ ಇತ್ಯಾದಿಗಳಬಗ್ಗೆ ಹೇಳುತ್ತವೆ ಹಾಗೂ ಅದರಲ್ಲಿರುವ ಹೆಚ್ಚು ಅಂಶಗಳು ಭೌತಿಕ ವ್ಯಾಯಾಮಗಳಿಗೆ ಸಂಭಂದಿಸಿದ್ದು. ಯಮ, ನಿಯಮ ಇತ್ಯಾದಿಗಳಲ್ಲಿ ಬ್ರಹ್ಮ ಕೇಂದ್ರೀಕೃತ ಚಿಂತನೆಗಳಿಲ್ಲವಾದರೂ ವ್ಯಕ್ತಿಯ ಮನಃ ಶುಧ್ಧತೆಯಬಗ್ಗೆ ಒತ್ತು ನೀಡುತ್ತವೆ. ಹಾಗಾದರೆ ಪತಂಜಲಿಯವರು ಸಾಂಖ್ಯಯೋಗ ಭೋದಿಸಲಿಲ್ಲವೇ? ಈ ಯೋಗಗಳು ನಿರ್ಧರಿತವಾದ ಕಾಲಗಳಾದರೂ ಯಾವುವು?
ಇನ್ನು ರಾಜ ಯೋಗ ಇತ್ಯಾದಿಗಳಬಗ್ಗೆ ಕೇಳಿದ್ದೇನೆ? ರಾಜ ಯೋಗಕ್ಕೂ , ಸಾಮಾನ್ಯ ಯೋಗಕ್ಕೂ ಏನು ವ್ಯತ್ಯಾಸ?
Rating