7 ಕಪ್
ತಯಾರಿಸುವ ವಿಧಾನ
ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ ಆದರೇ ಮಾಡೋದು ತೀರಾ ಸಾಧಾರಣ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ್ಲಿರಲಿ) ಮೊಗಚುವ ಕೈನಲ್ಲಿ ತಿರುವುತ್ತಾ ಇರಿ - ಹತ್ತು ನಿಮಿಷಗಳ ನಂತರ ಆ ಮಿಶ್ರಣ ಪಾಕವಾಗಿ ಸುಮಧುರ ವಾಸನೆ ಬರುವುದು. ಆಗ ಅದನ್ನು ಒಲೆಯ ಮೇಲಿನಿಂದ ಇಳಿಸಿ ಒಂದು ತಟ್ಟೆಗೆ ತುಪ್ಪ ಸವರಿ - ಅದಕ್ಕೆ ಈ ಪಾಕವನ್ನು ಸುರಿದು - ಸಮವಾಗಿ ತಟ್ಟಿಕೊಳ್ಳಿ ಆ ನಂತರ ಯಾವ ಆಕರಕ್ಕೆ ಬೇಕೋ ಹಾಗೆ ಕತ್ತರಿಸಿಕೊಳ್ಳಿ ತಿಂದು ನೋಡಿ - ನಮ್ಮ ಮನೆಯಲ್ಲಿ ತಿಂಗಳಿಗೊಮ್ಮೆ ಮಕ್ಕಳಿಗೆ ಇದು ಬೇಕೇ ಬೇಕು
ಸಾಧಾರಣವಾಗಿ ೧೫-೨೦ ಜನಗಳಿಗೆ
90
ಮೈಸೂರು ಪಾಕಿನಂತೆ, ಆದರೆ ಮಾಡಲು ಸುಲಭ, ಈ ಸಿಹಿ ತಿಂಡಿ.
೧ ಬಟ್ಟಲು ಕಡಲೆ ಹಿಟ್ಟು
೧ ಬಟ್ಟಲು ತುಪ್ಪ
೧ ಬಟ್ಟಲು ಹಾಲು
೧ ಬಟ್ಟಲು ತುರಿದ ತೆಂಗಿನಕಾಯಿ
೩ ಬಟ್ಟಲು ಸಕ್ಕರೆ