ಮುಂದೇನು ...?

ಮುಂದೇನು ...?

ನಾನು ತುಂಬ ಒಂಥರಾ ಹುಡುಗ ರೀ, ನಾನು ಯಾವಾಗಲು ಗೆಳೆಯರ ಸಂಗ ಇರಲಿಕ್ಕೆ ಬಯ್ಸೋ ಹೈದ , ಯಾಕಂದ್ರೆ ಒಬ್ಬನೇ ಇದ್ರೆ ಬೋರು ಹೊಡಿಯುತ್ತೆ ಅನ್ನೋದು ಒಂದ್ ರೀಜನ ಆದ್ರೆ ಇನ್ನೊಂದ ರೀಜನ ಇತ್ತು ಅದೆನಪಾ ಅಂದ್ರೆ ಒಬ್ಬನೇ ಇದ್ರೆ ಏನೇನೋ ವಿಚಾರಗಳು ತಲೇಲಿ ಸುಳಿಯುತ್ತೆ, ಲೈಕ್, ನನಗ್ಯಾಕೆ ಬೇರೆಯವರ ಥರ ಗರ್ಲ ಫ್ರೆಂಡ್ ಇಲ್ಲ ಅನಿಸುತ್ತೆ, ಮತ್ತೆ ನಾನಿನ್ನೂ ಸಾದಿಸೋದು ಏನಿದೆ? ಅಂತೆಲ್ಲ ವಿಚಾರ ಮಾಡಿಬಿಟ್ಟು ತಲೆ ಕೆಡ್ಸ್ಕೊತಿನಿ.....ಫ್ರೆಂಡ್ಸ್ ಜೊತೆ ಇದ್ರೆ ನೋಡಿ ನನಗೆ ಆನೆ ಬಲ ಬರುತ್ತೆ.

ಒಂದು ಸಾರಿ ನಾನು ನಮ್ಮ ಕಂಪನಿಯ ಉಪಹಾರ ಗೃಹದಿಂದ ಬರ್ತಾ ಇದ್ದೆ ನಾನು ನನ್ನ ಸ್ನೇಹಿತನ ಜೊತೆ ಇದ್ದೆ ಬರ್ತಿರಬೇಕಾದ್ರೆ ಒಂದು ಹುಡುಗಿ ಎದುರಿಗೆ ಬರ್ತ ಇದ್ಳು, ನಾನು ದಿನಾಲು ನೋಡೋ ಹಾಗೆ (ಒಂದಾದ್ರು ಹುಡುಗಿ ನನ್ನ ಗರ್ಲ ಫ್ರೆಂಡ್ ಆಗ್ತಾಳ ಅನ್ನೋ ಒಂದು ಆಶಯ, ಬರಿ ನೋಡ್ತಾ ಇದ್ರೆ ಆಗಲ್ಲ ಅಂತಾ ನನಗೂ ಗೊತ್ತು ಆದರು ನೋಡ್ತಾ ಇರ್ತೀನಿ) ಅವತ್ತೂ ಅವಳನ್ನ ನೋಡ್ತಾ ಇದ್ದೆ, ಅವಳು ಇನ್ನೇನು ನಮ್ಮನ್ನ ಕ್ರಾಸ್ಸ್ ಮಾಡಿ ಮುಂದೆ ಹೋಗಿರೋಳು, ಸಡನ್ನಾಗಿ ನಂಗೆ ಹಾಯ್ ಅಂದ್ಬಿಟ್ಲು (ಕೈ ಸನ್ನೆ ಮಾಡಿ)....!!! ನಾನೋ ಕಂಫ್ಯುಸ ಆಗಿ ಬಿಟ್ಟು ನನ್ನ ಹಿಂದೆ ಯಾರಿಗಾದ್ರು ಹಾಯ್ ಹೇಳ್ತಾ ಇರಬೇಕು ಅನ್ಕೊಂಡು ಹಿಂದೆ ತಿರುಗಿ ನೋಡಿದೆ ಆದ್ರೆ ಹಿಂದೆ ಯಾರು ಇರಲಿಲ್ಲ.... ನನಗೇನು ಮಾಡಬೇಕೋ ತಿಳಿಲಿಲ್ಲ ಸೊ ನಾನು ಹಾಯ್ ಹೆಳಿಬಿಟ್ಟು ನನ್ನ ಪಾಡಿಗೆ ನಾನು ಹೊರಟೆ ಆದ್ರೆ ನಂಗೆ ಗೊತ್ತೆ ಆಗ್ಲಿಲ್ಲ (ಇದು ವರೆಗೂ ಗೊತ್ತಾಗಿಲ್ಲ) ಅವಳು ನಂಗೆ ಯಾಕೆ ಹಾಯ್ ಹೇಳಿದಳು ಅಂತಾ ???? ಯಾಕೆ ಹೇಳಿರಬಹುದು ..... ನಾನ ಅನಕೊಂಡೆ ಅವಳು ನನ್ನನ್ನ ಬೇರೆ ಯಾರೋ ಅನಕೊಂದು ಹಾಗೆ ಹೇಳಿರಬಹುದು ಅಂತಾ. ನಿಮಗೂ ಹಾಗೆ ಅನಿಸರಬಹುದಲ್ವ...?

ಆದ್ರೆ ಇನ್ನೊಂದು ದಿನ, ನಾನು ನನ್ನ ಫ್ರೆಂಡ್ ಜೊತೆ ಮದ್ಯಾಹ್ನದ ಊಟಕ್ಕೆ ಹೊರಟಿದ್ದೆ, ನಾವೋ ಏನೇನೋ ಮಾತಾಡ್ತಾ ಹೊರಟಿದ್ದೆವು, ನಮ್ಮ ಲಕ್ಷ್ಯ ಬೇರೆ ಕಡೆ ಇರಲಿಲ್ಲ ನಮ್ಮ ತಲೇಲಿ ನಾವು ಮಾತಾಡ್ತಾ ಇರೋ ಸಬ್ಜೆಕ್ಟ್ ಕಡೆಗೆ ಇತ್ತು, ಆಗ ಎಲ್ಲಿಂದ ಎದುರಿಗೆ ಬಂದಳೋ ಗೊತ್ತಿಲ್ಲ ಅದೇ ಹುಡುಗಿ ಮತ್ತೆ ಎದುರಿಗೆ ಬಂದ್ಳು, ಮತ್ತೆ ಹಾಯ್ ಹೇಳಿ ಹೊರಟೆ ಬಿಟ್ಟಳು, ನಾನೋ ಅವಳನ್ನ ನಿಲ್ಲಿಸಿ ಮಾತಾಡಬೇಕು ಅನ್ನೋ ಹೊತ್ತಿಗೆ ಅವಳು ತನ್ನ ಪಾಡಿಗೆ ತಾನು ಹರತು ಹೋಗಿದ್ಳು... ನಾನು ಏನು ಮಾಡಬೇಕೋ ತಿಳಿದೆ ಸುಮ್ಮನೆ ನಮ್ಮ ಪಾಡಿಗೆ ನಾವು ಹೊರಟೆವು... ಆಗ ನನ್ನ ಫ್ರೆಂಡ್ಸ್ ಗೇಲಿ ಮಾಡ ಹತ್ತಿದರು " ಏನಪ್ಪಾ ಇವಳೆನಾದ್ರು ನಿನ್ನ ಹಿಂದೆ ಬಿದ್ದವ್ಳ ಹೇಗೆ ?"

ಇದಾದ ಮೇಲೆ ಮತ್ತೆ ಅವಳ ನನ್ನ ಮುಖಾ-ಮುಖಿ ಆಗಿಲ್ಲ, ನೋಡೋಣ ಮುಂದೆ ಏನಾಗುತ್ತೆ ಅಂತಾ .... ?
ಮತ್ತೆ ಅದರ ಬಗ್ಗೆ ಬರೀತೀನಿ....

Rating
No votes yet

Comments