ಬೋ ದಿವ್ಸ ಆಯ್ತು!
ಬೋ ದಿವ್ಸ ಆಯ್ತು!
ಬೋ ದಿವ್ಸ ಆಯ್ತು ಕಣ್ರಲಾ,
ನಿಮ್ಗಳ್ ಜೊತೆ ಮಾತಾಡಿ
ಹೇಗ್ ನಡೀತಿದೆ ಅಂತ ಹೇಳ್ರಲಾ,
ಜೀವನ ಅನ್ನೊ ಎತ್ತಿನ ಗಾಡಿ || ೧ ||
ಏಟು ದಿನ ಆಯ್ತು ಲ್ರೋ,
ಒಟ್ಟಿಗ್ ಕೂತು ಹರಟೆ ಹೊಡ್ದು,
ಭಾರೀ ಕುಸಿ ಆಗ್ತಿತ್ ಕಣ್ರೊ
ಒಟ್ಟಿಗ್ ಆಡಿ,ಒಟ್ಟಿಗ್ ತಿಂದು || ೨ ||
ಕ್ಯಾಮೆ ಇರ್ಲಿಲ್ಲಾ, ಚಿಂತೆ ಇರ್ಲಿಲ್ಲಾ
ನಂದೆ ರಾಜ್ಯ, ನಾವೆ ರಾಜಾ, ನಾವ್ ಮಾಡಿದ್ದೇ ಮಜಾ.
ಕ್ಯಾಮೆ ಅಂತ ಊರ್ಬಿಟ್ ಬಂದ್ವಿ
ಭೆಟ್ಟಿ ಆಗಾಕ್ ಸಿಗಾಕಿಲ್ಲಾ ರಜಾ || ೩ ||
ಯಾವನ್ ಯಾವನ್ ಎಲ್ಲೆಲ್ ಅವ್ನೊ,
ಅವ್ನೆ ಬಲ್ಲ, ಆ ದೇವ್ನೇ ಬಲ್ಲ,
ಒಳ್ಳೆ ಗೆಳೆಯರ್ ಕಣ್ರಲಾ ನಾವು,
ಸಿಗ್ದೆ ಇರೋದು ಚಂದ ಕಾಣಾಕಿಲ್ಲಾ || ೪ ||
ಟೇಮ್ ಮಾಡ್ಕೊಂಡ್ ಮನೆಕಡೆ ಬನ್ರ್ಲಲಾ
ಅಲ್ಲೆ ಅಯ್ತೆ ನಮ್ ಹಟ್ಟಿ, ಏಟು ಬದ್ಲಾಗಿಲ್ಲಾ
ಅದೇ ಊಟ, ಅದೇ ರುಚಿ, ಅದೇ ಬಾಳೆ ಎಲೆ ಕಣ್ರ್ಲಲಾ,
ಚಿಂತೆ ಇಲ್ದೆ ಹೊಟ್ಟೆ ತುಂಬ ತಿನ್ನಣ, ಅಡಿಗೆ ಎಲ್ಲಾ || ೫ ||
ಮೆಲುಕ್ ಹಾಕುವಾ ಹಳೇ ದಿನಗೊಳ್ನ
ಎಲೆ ಅಡಿಕೆ ಬಾಯಾಗ್ ಜಗೀತ,
ಕಷ್ಟ ಸುಖವ ಹಂಚ್ಕೊಳ್ಳೋಣ,
ಬೆಳ್ದಿಂಗಳ್ಲ ರಾತ್ರಿನಾಗೆ ಮಲ್ಕೊಳ್ಳೋವಾ ಒಳ್ಳೇ ಮಾತಾಡ್ತಾ || ೬ ||
ಬೋ ದಿವ್ಸ ಆಯ್ತು ಕಣ್ರಲಾ, ನಿಮ್ನೆಲ್ಲಾ ನೋಡಿ,
ಒಂದ್ ಕಿತ ಬಂದ್ ಬೆಟ್ಟಿಯಾಗಿ ನಿಮ್ ಗೆಳ್ಯ ಇಲ್ಲೆ ಅವ್ನೆ ನೋಡಿ
>> ಧಾಮ
Comments
ಉ: ಬೋ ದಿವ್ಸ ಆಯ್ತು!