ಆಸೆ
ಆಸೆ
ಮನಸಿನಾಳದಿ ಎದ್ದು ಹೇಳಲಾಗದೆ ಕೊರಗಿ
ಎಲ್ಲೆಲ್ಲೊ ಹರಿದ್ಹೋಗಿ ಮತ್ತೆ ತಿರುಗಿ
ಆಗಸದಿ ಹಕ್ಕಿ ಎತ್ತರಕ್ಕೆ ಹಾರಿದಂತೆ
ಇನ್ನೂ ಎತ್ತರಕ್ಕೆ ಹಾರುವ ಆಸೆಯಂತೆ
ಎಲ್ಲಿಂದಲೋ ಬಂದು ಎಲ್ಲಿಗೋ ಹೋಗಿ
ಮನಸಿನಲಿ ಅಡಗಿ ಮೆಲ್ಲಗೆ ಮಾಗಿ
ಸಾಗರದಿ ಮೀನು ಮನೆ ಮಾಡಿದಂತೆ
ಮತ್ತೆ ತನ್ನ ಸೈನ್ಯ ಬೆಳೆಸಿದಂತೆ
ಹೋರಾಟವ ಹೋರಾಡಿ ಕಡೆಗೆ ಸೊರಗಿ
ಮೂಡಿದ ಮೋಡದ ಹೊಸ ಚೈತನ್ಯ ಜರುಗಿ
ಹುತ್ತದೊಳು ಹಾವು ಅಡಗಿ ಕುಳಿತಂತೆ
ಒಮ್ಮೆ ಹೊರಗೆ ಬರಲು ಕಾತರಿಸಿದಂತೆ
ಜ್ವಾಲಾಮುಖಿ ಪುಟಿದು ಸದ್ದು ಹೋಳಾಗಿ
ಸಾವಿರದ ಸೌಮ್ಯ ಗೀತೆ ಮೊಳಗಿ
ಹಸಿದ ಹುಲಿಯು ಬೇಟೆಯ ಪಡೆದಂತೆ
ಮತ್ತೆ ಕಾತರದೀ ಮತ್ತೊಂದಕೆ ಕಾದಂತೆ
>> ಧಾಮ
Rating