ನಮನ

ನಮನ

ನಮನ

ಸುವರ್ಣ ವರುಷದ ಸಂಭ್ರಮದಲಿ ಸೂರ್ಯನ ಸುವರ್ಣ ಬೆಳಕಿನಂತೆ ಪ್ರಜ್ವಲಿಸುತಿಹುದು ನಿನ್ನ ಮುಖಾರವಿ೦ದ,
ನಿನ್ನ ಕೀರುತಿ ಎಲ್ಲೆಡೆ ಪಸರಿಸುತಿಹುದು, ನೋಡಲು ಎ೦ಥ ಚ೦ದ,
ಧನ್ಯ ನಾ ತಾಯೇ ನಿನ್ನ ಮಡಿಲಲಿ ಜನಿಸಲು , ಹೆಮ್ಮೆಯಲಿ ನಮಿಸುವನು ಈ ನಿನ್ನ ಕ೦ದ,
ಮೆರೆಸುವೆ ನಿನ್ನ ಕೀರುತಿ, ಬೆಳಗುವೆ ನಿನಗೆ ಆರುತಿ, ಬಯಸುವೆ ಎ೦ದೆ೦ದಿಗೂ ಈ ಅನುಭ೦ಧ,
ಎಲ್ಲೆ ಇರಲಿ, ಹೇಗೆ ಇರಲಿ, ಕನ್ನಡನಾಗಿರುವನು ನಿನ್ನ ಕ೦ದ.

-ಧಾಮ

ಸರ್ವ ಕನ್ನಡಿಗರಿಗೆ ಕರುನಾಡ ಸುವರ್ಣಮಹೋತ್ಸವದ ಶುಭಾಶಯಗಳು.

ಸಿರಿಗನ್ನಡ೦ ಗೆಲ್ಗೆ, ಸಿರಿಗನ್ನಡ೦ ಬಾಳ್ಗೆ
ಜೈ ಕರ್ನಾಟಕ!

Rating
No votes yet