ಕನ್ನಡದ ಕ೦ದ
ಕನ್ನಡದ ಕ೦ದ
ಕಣ್ತೆರೆದ ಕ್ಷಣದಿ೦ದ ಕ೦ಡಿಹೆನು ಕರುನಾಡ
ಕರಹಿಡಿದು ಕಾಪಾಡಿರುವೆ ಕಷ್ಟದೊಳು ಕನಸಿನ೦ತೆ
ಮೈಮರೆತು ಮನಮರೆತು ಮುದದಿ೦ದ ಮನೆಮಾಡಿದೆ
ಮಾಮರದೆಲೆಯ ಮೇಲಿನ ಮ೦ಜಿನ೦ತೆ ||೧||
ಸವಿದರು ಸವೆಯದ ಸಾವಿರದ ಸಾವಿರದ ಸೊ೦ಪ ಸವಿದೆ
ಸಾಗಿದೆ ಸು೦ದರ ಸೊಬಗಿನ ಸ೦ಪತ್ತು ಸವಿಯುತಲೆ
ನ೦ಜಿರದೆ ನ್ಯೂನತೆಯಿರದೆ ನಿಸ್ವಾರ್ಥದಿ ನಡೆವೆ
ನೋವಲ್ಲು ನಗುವೆ, ನಮಿಸುವೆ ನಿನಗೆ ನಗುತಲೆ ||೨||
ತೊರೆದಿರುವೆ ತಾಯ್ನಾಡ ತಮಸಿನಲಿ ತ೦ಗಿರುವೆ
ತೊರೆದಿಲ್ಲ ತನ್ನನ್ನೆ, ತಿರುಳಾಳದಲಿಹಳು ತಾಯಿಯಿನ್ನು
ಹೊಸದಾಗಿ ಹರಿದಿಹುದು ಹಳೆಯ ಹ೦ಗು
ಹರಿಸುವೆನು ಹಸಿರಾದ ಹೊನ್ನುಡಿಯ ಹೊ೦ಬೆಳಕನ್ನು ||೩||
ಎಲ್ಲಾದರು ಎ೦ತಾದರು ಎ೦ದೆ೦ದಿಗು
ಕನ್ನಡದ ಕರಹಿಡಿದು ಕೈಲಾಸಕಾಣುವನೀ ಕನ್ನಡದ ಕ೦ದ
-ಧಾಮ
ಕನ್ನಡ ರಾಜ್ಯೊತ್ಸವದ ಶುಭದಿನದ೦ದು ಸಹಸ್ರ ಕನ್ನಡಿಗರಿಗೂ ಕನ್ನಡ ತಾಯಿಯ ಆಶೀರ್ವಾದದೊ೦ದಿಗೆ ರಾಜ್ಯೊತ್ಸವದ ಶುಭಾಶಯಗಳು.
Rating