ಕಾವ್ಯಮಯ ಸಂಭಾಷಣೆ

ಕಾವ್ಯಮಯ ಸಂಭಾಷಣೆ

ಇತ್ತೀಚೆಗೆ ನಡೆದ ಒಂದು ಸಂಭಾಷಣೆ ಇದು. ನಾನು ಮತ್ತು ನನ್ನ ಸ್ನೇಹಿತರೊಬ್ಬರ ನಡುವೆ ನಡೆದದ್ದು. ನಾನು ಆ ದಿನ ಬಹಳ stress ಆಗಿದ್ದೆ. ಈ ರೀತಿ ನಾನು ಹೆಚ್ಚು stress ಆದಾಗ ನನ್ನ creativity ಸ್ವಲ್ಪ ಜಾಸ್ತಿಯಾಗಿರುತ್ತೆ. ಹೀಗಿರುವಾಗ ಪಾಪ ನನ್ನ friendಗೆ ನಾನು ಕವಿಯಂತೆ ಉತ್ತರ ಕೊಟ್ಟು ತಲೆ ತಿಂದಿದ್ದು ಇಲ್ಲಿ ಕೆಳಗಿನ chat logನಲ್ಲಿ ವ್ಯಕ್ತವಾಗತ್ತೆ. ಓದಿ ಆನಂದಿಸಿ.

Friend: ರೀ ಪ್ರವೀಣಾ ಈ ತರ ಧ್ರೋಹ ಮಾಡ್ತೀರಾ ಅಂತ ಕನಸಲ್ಲೂ ಎಣಿಸಿರಲಿಲ್ಲಾ!!

ನಾನು: ಧ್ರೋಹವನಾಚರಿಸಲು ನಾನ್ಯಾಯ್ಯ? ಧ್ರೋಹದ ಮೋಹದೊಳಗೆ ಸಿಲುಕದವ ನಾ. ಶಿವನೇ ಶಂಭುಲಿಂಗ!

Friend: ಶಿವನೇ ಅಂತ ಪದ ಬೇರೆ ಹಾಡ್ತೀರಾ… ಹೊಸಬರ ಮೇಲೆ ಇರೋ ಕರುಣೆ ನಮ್ ಮೇಲೆ ಇಲ್ವೆ ನಿಮಗೆ?!!!

ನಾನು: ಹೊಸದು ಹಳೆಯದು, ಕನಸು ನನಸಿನಂತಿರಲು ಹೊಸ ಕನಸ ಕಟ್ಟಲು ಹಳೆ ನನಸ ನೆನೆಸಲು ನನಗೆ ಹೊಸ ಹರುಷತರುವುದೆ! ಜೈ ಮಾಕ್ಮಲ್ಲಮ್ಮ!

Friend: ಅಯ್ಯೋ… ಈಗ ಬಿಟ್ಬಿಡಿಯಪ್ಪಾ, ನನ್ನ ಮೇಲೆ ಸ್ವಲ್ಪ ದಯೆ ತೋರ್ಸಿ!

ನಾನು: ಬಿಡುವುದು ಬಿಟ್ಟುಕೊಡುವುದು ಬಿಡಿಸಿಕೊಂಡವರಿಗೆ, ಕುಳಿತು ಕೂಳುಣ್ಣಿಸುವವನ ಕರುಣೆಯೆ ಕರ್ಮ. ಅಣ್ಣ ಬಸವಣ್ಣ!

Friend: ಸರಿ ಸರಿ ಸ್ವಾಮಿ, ಅರ್ಥವಾಯಿತು…

ನಾನು: ಅರಿವು ಅರಿತವರಿಗೆ ಅರಿತದ್ದು, ಮರೆವವರಿಗೆ ಅರಿವು ಮರೆತರೆಲ್ಲಿಯ ಅರಿವೆಂದ ಸರ್ವಜ್ನ!

Friend: ಚೆನ್ನಗಿದೆ…ನಿಮ್ಗೆ ಎಲ್ಲ ಕಂಠಪಾಟವಾಗಿದೆ ಅಂತ ಮಾತ್ರ ಹೇಳ್ಬೇಡಿ, ಗೊತ್ತು ನಿಮ್ಮ ಬ್ರೌಸಿಂಗ್ ಸ್ಕಿಲ್ಸ್ ನಂಗೆ!!

ನಾನು: ಇರುವ ಇಂತಿಷ್ಟು ತಿರುಳಿನ ತಮಸಿನಿಂದ ತೆಗೆದು ತುಪ್ಪವಾಗಿಸಿ ತಣ್ಣಗಾಗಿಸಿ ಉಣಿಸಿದ್ದಕ್ಕೆ ಸಿಗುವ ಉತ್ತರವೆ ಇದು? ಚೆನ್ನಕೇಶವ!

Friend: ಹಾಹ್ಹಾ ಹಾಹ್ಹಾ…ರೀ ಸಕ್ಕತ್ತಾಗಿದೆ!

ನಾನು: ದುಂಬಿಯು ಸಾವಿರ ಹೂವುಗಳಿಂದ ತಂದು ಕೂಡಿಟ್ಟ ಜೇನು ಕಪ್ಪು ನರಮನಸಿನ ಮಾನವನ ನಾಲಿಗೆಗೆ ತಾಕಿ ಸಿಹಿಯೆನಿಸದೆ ತಿರಸ್ಕರಿಸಿದಾಗ…ದುಂಬಿಗೇನೆನ್ನಿಸುವುದು?

ದುಂಬಿಗೇಕೆ ನರಮಾನವನ ಚಿಂತೆ, ಸುಂದರ ಹೂವುಗಳ ಸುಧೆಯನ್ನ ಸವಿದ ಸುಖದಲ್ಲೆ ಸಂತಸದಿ ತಾ ಮಿಂದು ಮನಸನ್ನು ಮುಗಿಲಿಗೇರಿಸಿ ಮುದದಿಂದ ಮರಣವಪ್ಪುವುದು ಮಂಕುತಿಮ್ಮ!

Friend: ಜೈ ಮಂಕುತಿಮ್ಮ! ರೀ ನಾನು ಹೊರಟೆ… ಎದ್ದಿದ್ರೆ ನಿಮ್ಮ ರೂಮ್ನಲ್ಲಿ ಲೈಟ್ ಇದ್ರೆ ಸಿಗ್ತೀನಿ, ಆಗಬಹುದು?

ನಾನು: ಮಂಕುತಿಮ್ಮನಿಗೆ ಜಯವೆಂದು ಹೇಳುವ ತಮ್ಮನಿಗೆ ತಿಮ್ಮ! ಮಂಕುತಿಮ್ಮ! ನೀನು ತಮ್ಮನಂತಿದ್ದು ಎನ್ನ ಮಾತಂತೆ ಮಂಕುತಿಮ್ಮನ ಮರ್ಮವನ್ನರಿಯೋ ಮಂಕುತಿಮ್ಮ ಎಂದನು ಮಂಕುತಿಮ್ಮ!

ಬೆಳಕಿರುವಲ್ಲಿ ಬೆಳಕಾಗಿ ನಾನಿರುವೆ…ಕತ್ತಲರಸಿ ಬಂದರೆ…ಕ್ಷಮೆಯಿರಲಿ ಅದು ನಾನಿಲ್ಲದೆಡೆ ಇರುವುದು!

ಜೀಸಸ್ ಕ್ರೈಸ್ಟ್!

Friend: ಅಯ್ಯೋ…ಕೊನೆಗೆ ಜೀಸಸ್ ಕ್ರೈಸ್ಟ್ನೂ ಬಿಡೊಲ್ವೆ ನೀವು!!

ನಾನು: ನಾವು ಆಲ್ ಗಾಡ್ಸ್ ಫ್ಯಾನ್ ;) ದೇವ್ರನ್ನ ನೋಡೋದ್ರಲ್ಲು ಭೇದ ಭಾವ ತೋರ್ಸಲ್ಲ!

Rating
No votes yet

Comments