ಡಫೊಡಿಲ್ಸ್

ಡಫೊಡಿಲ್ಸ್

DSC_0501.JPG

ಈ ಸಮಯದಲ್ಲಿ ಯುಕೆ ಯಲ್ಲಿ ಭೂಮಿಯೊಳಗಿಂದ ಗಡ್ಡೆಗಳು ಚಿಗುರಿ, ಗಿಡಗಳು ಹೊರಬಂದು ಹಳದಿ ಬಣ್ಣದ ಒಂದು ಜಾತಿಯ ಹೂಗಳು ಗುಂಪು ಗುಂಪಾಗಿ ಅರಳುತ್ತವೆ. ನನಗೆ ಇವುಗಳ ಹೆಸರೇನೆಂದು ಗೊತ್ತಿರಲಿಲ್ಲ.
ಕಳೆದ ವರ್ಷ ಈ ಸಮಯದಲ್ಲಿ ನಾನಿರುವ ಬ್ರಿಸ್ಟಲ್ ನಲ್ಲಿ ಒಂದು ಕನ್ನಡ ಹಬ್ಬ ನಡೆದಿತ್ತು. ನಾನು ಅದರ ಫೊಟೊಗಳನ್ನು ತೆಗೆದಿದ್ದೆ. ಪಿಕಾಸಾದಲ್ಲಿ ಅದರ ಆಲ್ಬಮ್ ಮಾಡಿದಾಗ ಅದರ ’ಆಲ್ಬಮ್ ಕವರ್’ ಮಾಡಲು ನನಗೆ ಒಂದು ಚಿತ್ರ ಬೇಕಾಗಿತ್ತು. ಹಿಂದಿನ ಸೀಸನ್ ನಲ್ಲಿ ಈ ಹೂಗಳು ಅರಳಿದ್ದಾಗ ನಾನು ಅವುಗಳ ಕೆಲವು ಚಿತ್ರಗಳನ್ನು ತೆಗೆದಿದ್ದೆ. ಅವುಗಳಲ್ಲೊಂದನ್ನು ಎತ್ತಿಕೊಂಡು, ಹೂವಿನ background ನ್ನು MSPaint ನಲ್ಲಿ ಕತ್ತರಿಸಿ ತೆಗೆದು, ಅಲ್ಲಿ ಕೆಂಪು ಬಣ್ಣ ತುಂಬಿಸಿ, ಕನ್ನಡ ಧ್ವಜದ ಕೆಂಪು-ಹಳದಿ ಬಣ್ಣದ ಅರ್ಥ ಬರುವಂತೆ ಮಾಡಿ ಆಲ್ಬಮ್ ನ ಲಿಂಕ್ ನ್ನು ಹಂಚಿದೆ. ನನ್ನ ’ಕನಡ ಧ್ವಜ’ದ ಕಾಂಸೆಪ್ಟ್ ಯಾರಿಗೂ ಅರ್ಥವೇ ಅಗಲಿಲ್ಲ ಎನ್ನುವುದು ಬೇರೆ ವಿಷಯ :(
ಈ ಬಾರಿ ಮತ್ತೆ ಹಳದಿ ಹೂಗಳು ಅರಳಿವೆ. ಮೊನ್ನೆ ನನ್ನ ಸಹೋದ್ಯೋಗಿಯೊಬ್ಬರು ಹೇಳಿದ್ದರಿಂದ ಇವುಗಳ ಹೆಸರು "ಡಫೋಡಿಲ್" ಎಂದು ತಡವಾಗಿ ನನಗೆ ಗೊತ್ತಾಗಿದೆ. State board syllabus ನಲ್ಲಿ ಮೊದಲು ಬಹುಶ: ಹೈಸ್ಕೂಲಿಗೆ ’ಡಫೊಡಿಲ್’ ಎಂಬ ಒಂದು ಇಂಗ್ಲಿಷ್ ಕವನವಿತ್ತು. ಅದನ್ನು ಉರುಹೊಡೆದು ಪರೀಕ್ಷೆಗೆಲ್ಲ ಬರೆದಿದ್ದರೂ ಅವು ಮರದಲ್ಲಿ ಅರಳುವ ಹೂಗಳೇ, ನೆಲದಲ್ಲಿ ಅರಳುವ ಹೂಗಳೇ ಎಂದು ಕೂಡ ನನಗೆ ಗೊತ್ತಿರಲಿಲ್ಲ. ಫಕ್ಕನೆ ಅವುಗಳ ಪರಿಚಯವಾಗಿ ನನಗೆ ಸಂತೋಷವಾಯಿತು..
ಈ ಬಾರಿ ತೃಪ್ತಿಯಾಗುವಷ್ಟು ಮತ್ತೆ ಚಿತ್ರಗಳನ್ನು ತೆಗೆದೆ.

DSC_0511.JPG

 

DSC_0543.JPG

ವಸಂತ್.   
Rating
No votes yet

Comments