ಸೌಂದರ್ಯ ಸ್ಪರ್ಧೆ- ಹೀಗೂ ಉಂಟೆ?
ಬರಹ
ಇದೊಂದು ವಿಶಿಷ್ಟ ರೀತಿಯ ಸೌಂದರ್ಯ ಸ್ಪರ್ಧೆ.
ಆಫ್ರಿಕಾದ ಅಂಗೋಲಾದಲ್ಲಿ 1961ರ ಇಸವಿಯಲ್ಲಿ ಆರಂಭವಾಗಿ ನಲವತ್ತು ವರ್ಷಗಳ ಕಾಲ ನಡೆದ ಅಂತರ್ಯುಧ್ಧದ ಸಮಯದಲ್ಲಿ ಅನೇಕ ಲ್ಯಾಂಡ್‍ಮೈನ್‍ಗಳನ್ನು ದೇಶದ ಎಲ್ಲೆಡೆ ಅಳವಡಿಸಲಾಯಿತು. ಇದರ ಪರಿಣಾಮ ಈಗಲೂ ಜನರು ತಮ್ಮ ಅಂಗಾಂಗಗಳನ್ನೋ ಪ್ರಾಣಗಳನ್ನೋ ಕಳೆದುಕೊಳ್ಳುತ್ತಿದ್ದಾರೆ.
ಈ ಲ್ಯಾಂಡ್‍ಮೈನ್‍ಗಳಿಂದ ಆಗುವ ಅನಾಹುತಗಳ ಬಗ್ಗೆ ವಿಶ್ವದ ಗಮನ ಸೆಳೆಯಲೋಸುಗ ಬರುವ ಏಪ್ರಿಲ್ ತಿಂಗಳಲ್ಲಿ, ಲ್ಯಾಂಡ್‍ಮೈನ್ ಅನಾಹುತಗಳಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಂಡ ಅಂಗನೆಯರಿಗಾಗಿ ಒಂದು ವಿಶೇಷ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಇದರ ವಿಜೇತರಿಗೆ “ಮಿಸ್ ಲ್ಯಾಂಡ್‍ಮೈನ್ 2007” ಪ್ರಶಸ್ತಿ ವಿತರಿಸಲಾಗುವುದು.
ಎಲ್ಲರಿಗೂ ತಾನು ಸುಂದರಿ ಎಂದು ಹೇಳಿಕೊಳ್ಳುವ ಹಕ್ಕಿದೆಯಲ್ಲವೇ? ಹಾಗೆಯೇ ಸೌಂದರ್ಯ ನೋಡುವರ ಕಣ್ಣಲ್ಲಿ ಎಂಬುದೂ ನಿಜವೇ.
ಕೆಳಗಿನ ಕೊಂಡಿ ಚಿಟುಕಿಸಿ ನೋಡಿ.
http://www.miss-landmine.org/misslandmine_team.html
- ನವರತ್ನ ಸುಧೀರ್