ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!

ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!!

ಆ ಮನುಷ್ಯ ಚಿಕ್ಕವನಿದ್ದಾಗ ಆತನ ಅಪ್ಪ ಮಗ ಶಾಲೆಯಿಂದ ಬಂದಾಗ ಒಂದು ಪ್ರಶ್ನೆ ಕೇಳುತ್ತಿದ್ದನಂತೆ:

"ಮಗಾ, ಇವತ್ತು ಶಾಲೆಯಲ್ಲಿ ಏನು ಕಲಿತೆ? ನಂಬಲು ಕಲಿತೆಯೊ, ಅಥವ ಯೋಚಿಸಲು ಕಲಿತೆಯೊ?" (What did you learn today, Ralph? Did you learn to believe or did you learn to think?)


ಅಪ್ಪನಿಂದ ಈ ರೀತಿಯ ಸಂಸ್ಕಾರ ಪಡೆಯುತ್ತಿದ್ದಾತ, ರಾಲ್ಫ್ ನೇಡರ್. ಅಮೆರಿಕದ ನೂರು ಅತಿ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಶಃ ನಾಲ್ಕನೆ ಸಲ ಸ್ಪರ್ಧಿಸುತ್ತಿದ್ದಾನೆ. ೨೦೦೦ ರಲ್ಲಿ ಈತನಿಂದಲೆ ಬುಷ್ ಗೆಲ್ಲಲು ಸಾಧ್ಯವಾಗಿದ್ದು ಎನ್ನುವುದು ಒಂದು ರೀತಿಯಲ್ಲಿ ಸರಿಯಾದ ಮಾತು. ಆದರೆ, ಸೋಲು ಮತ್ತು ಗೆಲುವುಗಳನ್ನು ಮೀರಿದ್ದು ತತ್ವಬದ್ಧತೆ, ಆದರ್ಶ ಮತ್ತು ನೈತಿಕತೆ ಎಂದು ಪ್ರತಿಪಾದಿಸುವಾತ.

ಇವತ್ತಿನ ನಮ್ಮ ಭಾರತದ ಸಮಾಜದಲ್ಲಿ ತೀರಾ ಅಗತ್ಯವಾಗಿರುವುದು ರಾಲ್ಫ್ ನೇಡರ್‌ನಂತಹವರ ಆಕ್ಟಿವಿಸಂ. ನಮ್ಮಲ್ಲೂ ಅರುಣಾ ರಾಯ್, ಖೇಜ್ರಿವಾಲ, ಡಾ. ಜಯಪ್ರಕಾಶ್ ನಾರಾಯಣ್ ಮುಂತಾದವರು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರಾದರೂ ನಮಗೆ ಇನ್ನೂ ಅಂತಹವರು ಹಲವಾರು ಜನ ಬೇಕಿದ್ದಾರೆ.

ನನ್ನ ಈ ವಾರದ ಅಂಕಣ ಲೇಖನ, ಲೆಬನಾನ್ ಎಂಬ ಪುಟ್ಟ ದೇಶದಿಂದ ಅಮೆರಿಕಕ್ಕೆ ವಲಸೆ ಬಂದ ಅರಬ್ಬಿ ದಂಪತಿಗಳ ಮಗ ಹಲವಾರು ದಶಕಗಳ ಕಾಲ ಹಲವಾರು ಮಜಲುಗಳಲ್ಲಿ ಅಮೆರಿಕದ ಸಮಾಜವನ್ನು ಪ್ರಭಾವಿಸುತ್ತ, ಪ್ರಚೋದಿಸುತ್ತ ಹೋದದ್ದರ ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/03/blog-post_06.html

ಲೇಖನದ ವಿಡಿಯೊ ಪ್ರಸ್ತುತಿ
Rating
No votes yet