ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು

ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು

ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು.

ಅಡಕಿಲ ಮಡಕೆಗಳಂ ಸ
ಯ್ತಿಡಲಱಿವುವೆ ನಾಯ್ಗಳೊಡೆವುವಲ್ಲದೆ ಕ್ರುತಿಯಂ
ಕಿಡೆನುಡಿವರಲ್ಲದೇಂ ಜಡ
ರೊಡಂಬಡಲ್ತಿದ್ದಿನುಡಿಯಬಲ್ಲರೆ ಕವಿವೋಲ್

ಬಿಡಿಸಿದರೆ,
ಅಡಕಿಲ ಮಡಕೆಗಳಂ ಸಯ್ತ್ ಇಡಲ್ ಅಱಿವುವೆ ನಾಯ್ ಗಳ್ ಒಡೆವುವು ಅಲ್ಲದೆ ಕ್ರುತಿಯಂ ಕಿಡೆನುಡಿವರಲ್ಲದೇಂ ಜಡರ್ ಒಡಂಬಡಲ್ ತಿದ್ದಿ ನುಡಿಯಬಲ್ಲರೆ ಕವಿವೋಲ್

ಹೇಗೆ ನಾಯಿಗಳಿಗೆ ಒಂದರಮೇಲೊಂದರಂತೆ ಮಡಕೆಗಳನ್ನು ಸರಿಯಾಗಿಡಲ್ ಗೊತ್ತಿಲ್ಲದೆ ಅವುಗಳನ್ನು ಒಡೆಯುತ್ತವೊ ಹಾಗೆ ಕ್ರುತಿಯ ಬಗ್ಗೆ ಕೆಟ್ಟ ಮಾತುಗಳಾಡುವವರಲ್ಲದೆ ಜಡರು(ಹೆಚ್ಚು ಮಾತನಾಡದವರು, ಸುಮ್ಮನೆ ಇರುವವರು,ಎಲ್ಲದಕ್ಕೂ ಒಪ್ಪುಗೆ ಸೂಚಿಸುವವರು) ಒಡೆಯಬಲ್ಲರೆ (ತಿದ್ದಿ ನುಡಿಯಬಲ್ಲರೆ)?
ನಾಯಿಗಳಿಂದಲೆ ಮಡಕೆ ಎಶ್ಟು ಗಟ್ಟಿ ಅಂತ ಗೊತ್ತಾಗುವುದು ಹಾಗೆ ಕಿಡುನುಡಿವುವರಿಂದಲೇ ಕ್ರುತಿಯ ಬಗ್ಗೆ ದಿಟವಾದ ಒಳ್ಳೆ ವಿಮರ್ಶೆ ಬರುವುದು.

ಅಡಕಿಲ = ಒಂದರ ಮೇಲೊಂದರಂತೆ
ಒಡಂಬಡು = ಒಪ್ಪು, ಅಂಗೀಕರಿಸು

ಯಾಕೊ ಮೇಲಿನ ಬಿಡಿಸಿಕೆ ಅಶ್ಟು ಸರಿಯಾಗಿಲ್ಲ ಅನ್ಸುತ್ತೆ...:(

Rating
No votes yet

Comments