ನಯಸೇನನ ಸಲೀಸಾದ ಸಾಲುಗಳು - ಬಿಡಿ ೫- ನಾಣ್ಣುಡಿ

ನಯಸೇನನ ಸಲೀಸಾದ ಸಾಲುಗಳು - ಬಿಡಿ ೫- ನಾಣ್ಣುಡಿ

ನಾಣ್ಣುಡಿಗಳು ನಮ್ಮ ಹಿರಿಗನ್ನಡದ ಕಬ್ಬಗಳಲ್ಲಿ ಹಲವು ಕಡೆ  ಕಂಡುಬರುತ್ತವೆ. ನಯಸೇನನ ದರ್ಮಾಮ್ರುತಂ ಇದಕ್ಕೆ ಹೊರತಲ್ಲ.

ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ
ಡಾಡಿದನೆಂಬೀ ನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್

ಬಿಡಿಸದರೆ,

ಬೇಡಂ ಮಾಣಿಕಮ್ ಒಂದಂ
ಕಾಡೊಳ್ ಕಂಡ್ ಒರ್ಮೆ ಮೆಲ್ದು ಪಗಿನಲ್ ಎಂದ್
ಈಡಾಡಿದನ್ ಎಂಬ್ ಈ ನಾಣ್ಣುಡಿ
ನಾಡೆಯುಮ್ ಎಸೆದಪುದು ದುರಿತವಶದಿಂದ್ ಇವನೊಳ್

ಬೇಡಂ = ಬೇಡ (ಬೇಟೆಗಾರ)                                                                                ಪಗಿನ= ಅಂಟು,ರಸ
ಈಡಾಡಿದನ್ = ಬಿಸಾಡಿದನ್
ನಾಡೆಯುಮ್ = ಹೆಚ್ಚಾಗೆ
ಎಸೆದಪುದು = ಕಂಡು ಬರುವುದು.

-------------

ಕನ್ನಡದ ನೋಂಪಿಗೆ ನಾ ಮುಡುಪು

Rating
No votes yet