ವೀರನಾರಾಯಣ ದೇವಸ್ಥಾನ, ಬೆಳವಾಡಿ
ಚಿಕ್ಕಮಗಳೂರು ತಾಲ್ಲೂಕು, ಲೇಕ್ಯಾ ಹೋಬಳಿಯಲ್ಲಿರುವ ಬೆಳವಾಡಿ ಗ್ರಾಮವು ಒಂದಾನೊಂದು ಕಾಲದಲ್ಲಿ ಏಕಚಕ್ರನಗರವೆಂಚು ಖ್ಯಾತಿಯನ್ನು ಹೊಂದಿದ್ದು, ೨ನೇ ವೀರಬಲ್ಲಾಳರಾಯನ (ವಿಷ್ಣುವರ್ಧನ)ನ ಕಾಲದಲ್ಲಿ ನಿರ್ಮಿತವಾದ, ಎಂದರೆ ಸುಮಾರು ೧೨ನೇ ಶತಮಾನದ ಸುಂದರ ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ತ್ರಿಕೂಟೇಶ್ವರ ದೇವಾಲಯ ಅಥವಾ ವೀರನಾರಾಯಣ ದೇವಾಲಯ. ಈ ದೇವಾಲಯದಲ್ಲಿ ವೀರನಾರಾಯಣ, ವೇಣುಗೋಪಾಲಸ್ವಾಮಿ ಹಾಗು ಉಘ್ರನರಸಿಂಹ ದೇವರುಗಳ ಮೂರು ಗರ್ಭಗುಡಿಗಳಿದ್ದು, ನವರಂಗವು ಸುಂದರವಾದ, ನಯವಾಗಿರುವಂತೆ ನಿರ್ಮಿಸಿದ ಕಲ್ಲುಕಂಬಗಳಿಂದ ನಿರ್ಮಿತವಾಗಿದೆ. ದೇವಾಲಯದ ಹೊರಭಾಗವು ಸುಂದರ ಕೆತ್ತನೆಗಳಿಂದ ಕೂಡಿದೆ. ದೇವಾಲಯದ ನಿರ್ಮಾಣದ ಹೆಚ್ಚಿನ ವಿವರಗಳಿಗೆ ಗೂಗಲ್ ಸರ್ಚ್ ನಲ್ಲಿ ನೋಡಬಹುದು. ಆದರೆ ಅಲ್ಲಿ ಛಾಯಾಚಿತ್ರಗಳ ಕೊರತೆ ಇರುವುದರಿಂದ ನಾನು ಇತ್ತೀಚೆಗೆ ಹೋದಾಗ ತೆಗೆದ ಛಾಯಾಚಿತ್ರಗಳನ್ನು "ಫ್ಲಿಕ್ಕರ್ ಫೋಟೋಸ್:ಎವಿ.ನಾಗರಾಜು" ಕೊಂಡಿಯಲ್ಲಿ ಕೊಟ್ಟಿದ್ದೇನೆ. ಆಸಕ್ತಿಯುಳ್ಳ ಸಂಪದದ ಓದುಗರು ನೋಡಬಹುದು. ಇದರೊಂದಿಗೆ ದೇವಾಲಯದ ಹೊರಭಾಗದ ಕೆತ್ತನೆಯ ಒಂದು ಚಿತ್ರವನ್ನು ನೀಡಿದ್ದೇನೆ.
ಎ.ವಿ. ನಾಗರಾಜು